ಎತ್ತರ ಕಡಿಮೆ, ಆದರೂ ದುರಹಂಕಾರಿ: ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

|

Updated on: Nov 15, 2023 | 9:25 PM

ಯಾವುದೇ ಕಾರ್ಯಕರ್ತ ಅವರ ಬಳಿಗೆ ಹೋದರೆ ಅವರನ್ನು ಮಹಾರಾಜ ಎಂದು ಕರೆಯಬೇಕು. ಅವರು ಅದನ್ನು ಹೇಳದಿದ್ದರೆ, ನಮ್ಮ ಸಮಸ್ಯೆಗಳಿಗೆ ಗಮನ ಕೊಡುವುದಿಲ್ಲ". ಅವರು ತಮ್ಮ ಕುಟುಂಬದ ಸಂಪ್ರದಾಯವನ್ನು ಚೆನ್ನಾಗಿ ಅನುಸರಿಸಿದ್ದಾರೆ. ಅನೇಕರು ದ್ರೋಹ ಮಾಡಿದ್ದಾರೆ, ಆದರೆ ಅವರು ಗ್ವಾಲಿಯರ್ ಮತ್ತು ಚಂಬಾದ ಸಾರ್ವಜನಿಕರಿಗೆ ದ್ರೋಹ ಮಾಡಿದರು ಅವರು ಸರ್ಕಾರ ಬೀಳುವಂತೆ ಮಾಡಿದರು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಎತ್ತರ ಕಡಿಮೆ, ಆದರೂ ದುರಹಂಕಾರಿ: ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಪ್ರಿಯಾಂಕಾ ಗಾಂಧಿ
Follow us on

ದೆಹಲಿ ನವೆಂಬರ್ 15: ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಇಂದು(ಬುಧವಾರ) ಪ್ರತಿಸ್ಪರ್ಧಿ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Sindia) ವಿರುದ್ಧ ವಾಗ್ದಾಳಿ ನಡೆಸಿದ್ದು, ಜನರ ಆದೇಶವನ್ನು “ದ್ರೋಹ” ಮಾಡಿದ “ದೇಶದ್ರೋಹಿ” ಎಂದು ಹೇಳಿದ್ದಾರೆ. ಪ್ರಚಾರದ ಕೊನೆಯ ದಿನದಂದು ಮಧ್ಯಪ್ರದೇಶದ (Madhya Pradesh) ದಾತಿಯಾದಲ್ಲಿ ಮಾತನಾಡಿದ ಪ್ರಿಯಾಂಕಾ “ಅವರ (ಬಿಜೆಪಿಯ) ಎಲ್ಲಾ ನಾಯಕರು ಸ್ವಲ್ಪ ವಿಚಿತ್ರವಾದವರು, ಮೊದಲು ನಮ್ಮ ಸಿಂಧಿಯಾ..ನಾನು ಉತ್ತರಪ್ರದೇಶದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ, ನಿಜವಾಗಿ ಅವರ ಎತ್ತರ ಸ್ವಲ್ಪ ಕಡಿಮೆ ಆದರೂ ದುರಹಂಕಾರದಲ್ಲಿ ‘ವಾಹ್ ಭಾಯಿ ವಾಹ್’ ಎಂದಿದ್ದಾರೆ.

“ಯಾವುದೇ ಕಾರ್ಯಕರ್ತ ಅವರ ಬಳಿಗೆ ಹೋದರೆ ಅವರನ್ನು ಮಹಾರಾಜ ಎಂದು ಕರೆಯಬೇಕು. ಅವರು ಅದನ್ನು ಹೇಳದಿದ್ದರೆ, ನಮ್ಮ ಸಮಸ್ಯೆಗಳಿಗೆ ಗಮನ ಕೊಡುವುದಿಲ್ಲ”. ಅವರು ತಮ್ಮ ಕುಟುಂಬದ ಸಂಪ್ರದಾಯವನ್ನು ಚೆನ್ನಾಗಿ ಅನುಸರಿಸಿದ್ದಾರೆ. ಅನೇಕರು ದ್ರೋಹ ಮಾಡಿದ್ದಾರೆ, ಆದರೆ ಅವರು ಗ್ವಾಲಿಯರ್ ಮತ್ತು ಚಂಬಾದ ಸಾರ್ವಜನಿಕರಿಗೆ ದ್ರೋಹ ಮಾಡಿದರು ಅವರು ಸರ್ಕಾರ ಬೀಳುವಂತೆ ಮಾಡಿದರು ಎಂದು ಪ್ರಿಯಾಂಕಾ ಹೇಳಿದ್ದಾರೆ.


2020 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ಸಿಂಧಿಯಾ, ಕಳೆದ ವಾರಗಳಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ, ಅವರು ರಾಜ್ಯದ ಮಹಿಳೆಯರಿಗೆ ಏನನ್ನೂ ಮಾಡಿಲ್ಲ, ರಾಹುಲ್ ಗಾಂಧಿಗೆ “ವಿಶೇಷ ಆದರ” ನೀಡಲಾಗುತ್ತಿದೆ, ಅವರು ಅಭಿವೃದ್ಧಿಯನ್ನು ತರಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಮನೆತನದವರಾದ ಸಿಂಧಿಯಾ ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಪಡೆಯಲು ಆಶಿಸುತ್ತಿದ್ದಾರೆ ಎಂಬ ಊಹಾಪೋಹವಿತ್ತು. ಇದು 2018 ರಲ್ಲಿ ಸ್ಪಷ್ಟವಾಯಿತು. ಆ ವರ್ಷ ರಾಜ್ಯದಲ್ಲಿ ಪಕ್ಷದ ವಿಜಯದ ನಂತರ, ಕಮಲ್ ನಾಥ್ ಅವರಿಗೆ ಸ್ಥಾನ ನೀಡುವುದಕ್ಕಾಗಿ ಹಿಂದೆ ಸರಿಯುವಂತೆ ಸಿಂಧಿಯಾ ಅವರಲ್ಲಿ ಹೇಳಿದ್ದರು. ಆಗ ಸಿಂಧಿಯಾ ಅದನ್ನು ಪಾಲಿಸಿದ್ದರು, ಆದರೆ ಎರಡು ವರ್ಷಗಳ ನಂತರ, 20 ಕ್ಕೂ ಹೆಚ್ಚು ಶಾಸಕರೊಂದಿಗೆ ಬಿಜೆಪಿಗೆ ಪಕ್ಷಾಂತರಗೊಂಡಾಗ ಕಮಲ್ ನಾಥ್ ಸರ್ಕಾರ ಪತನವಾಗಿತ್ತು.

ಇದನ್ನೂ ಓದಿ:ಶತಕಗಳ ಅರ್ಧ ಶತಕ: ವಿರಾಟ್ ಕೊಹ್ಲಿ ಸಾಧನೆಗೆ ಮೋದಿ ಅಭಿನಂದನೆ

ಛತ್ತೀಸ್‌ಗಢದ ಜೊತೆಗೆ ಮಧ್ಯಪ್ರದೇಶದಲ್ಲಿ ಶುಕ್ರವಾರ ಮತದಾನ ನಡೆಯಲಿದ್ದು, ಎರಡನೇ ಹಂತದ ಮತದಾನ ನಡೆಯಲಿದೆ. ಇಂದು ಎರಡೂ ರಾಜ್ಯಗಳಲ್ಲಿ ಪ್ರಚಾರಕ್ಕೆ ಕೊನೆಯ ದಿನವಾಗಿತ್ತು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ