ಮೂರ್ಖರ ಸರದಾರ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

|

Updated on: Nov 14, 2023 | 6:11 PM

ನಿನ್ನೆ ಕಾಂಗ್ರೆಸ್ ನ ಬುದ್ದಿವಂತರೊಬ್ಬರು ದೇಶದ ಜನರಲ್ಲಿ ಚೈನಾ ಮೊಬೈಲ್ ಮಾತ್ರಇದೆ ಎಂದು ಹೇಳುತ್ತಿದ್ದರು. ಅರೇ 'ಮೂರ್ಖೋನ್ ಕೆ ಸರ್ದಾರ್', ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ? ಕಾಂಗ್ರೆಸ್ ನಾಯಕರು ಭಾರತದ ಸಾಧನೆಗಳನ್ನು ಕಡೆಗಣಿಸುವ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಅವರು ಭಾರತವನ್ನು ನೋಡಲು ಸಾಧ್ಯವಾಗದ ಯಾವ ವಿದೇಶಿ ಕನ್ನಡಕವನ್ನು ಧರಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ರಾಹುಲ್ ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಮೋದಿ ಗುಡುಗಿದ್ದಾರೆ.

ಮೂರ್ಖರ ಸರದಾರ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಮೋದಿ- ರಾಹುಲ್ ಗಾಂಧಿ
Follow us on

ದೆಹಲಿ ನವೆಂಬರ್ 14: ಭಾರತದಲ್ಲಿ ಮೊಬೈಲ್‌ ಫೋನ್‌ಗಳು ಹೆಚ್ಚಾಗಿ ‘ಮೇಡ್ ಇನ್ ಚೈನಾ’ ಎಂಬ ರಾಹುಲ್‌ ಗಾಂಧಿ(Rahul Gandhi) ಹೇಳಿಕೆ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ (Congress) ನಾಯಕನನ್ನು  ‘ಮೂರ್ಖೋನ್‌ ಕೆ ಸರ್ದಾರ್‌’ (ಮೂರ್ಖ ಜನರ ನಾಯಕ) ಎಂದು ಕರೆದಿದ್ದಾರೆ. ಈಗ ₹ 1 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದ ಮೋದಿ, ಕಾಂಗ್ರೆಸ್ ನಾಯಕರು ಭಾರತದ ಸಾಧನೆಯನ್ನು ನಿರ್ಲಕ್ಷಿಸುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.

ನಿನ್ನೆ ಕಾಂಗ್ರೆಸ್ ನ ಬುದ್ದಿವಂತರೊಬ್ಬರು ದೇಶದ ಜನರಲ್ಲಿ ಚೈನಾ ಮೊಬೈಲ್ ಮಾತ್ರಇದೆ ಎಂದು ಹೇಳುತ್ತಿದ್ದರು. ಅರೇ ‘ಮೂರ್ಖೋನ್ ಕೆ ಸರ್ದಾರ್’, ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ? ಕಾಂಗ್ರೆಸ್ ನಾಯಕರು ಭಾರತದ ಸಾಧನೆಗಳನ್ನು ಕಡೆಗಣಿಸುವ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಅವರು ಭಾರತವನ್ನು ನೋಡಲು ಸಾಧ್ಯವಾಗದ ಯಾವ ವಿದೇಶಿ ಕನ್ನಡಕವನ್ನು ಧರಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ರಾಹುಲ್ ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಮೋದಿ ಗುಡುಗಿದ್ದಾರೆ.


ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ಎಂದಿದ್ದಾರೆ ಮೋದಿ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಭಾರತದ ಮೊಬೈಲ್ ಫೋನ್‌ಗಳ ಉತ್ಪಾದನೆಯು ₹20000 ಕೋಟಿಗಿಂತ ಕಡಿಮೆ ಇತ್ತು. ಇಂದು ಭಾರತದ ಉದ್ಯಮವು ₹3.5 ಲಕ್ಷ ಕೋಟಿಗೂ ಅಧಿಕವಾಗಿ ಬೆಳೆದಿದೆ. ಭಾರತವು ₹ 1 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ,

ರಾಹುಲ್ ಗಾಂಧಿ ಹೇಳಿದ್ದೇನು?

ಸೋಮವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ತಮ್ಮ ಪಕ್ಷವು ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬಯಸುತ್ತದೆ ಎಂದು ಹೇಳಿದರು.

“ನಿಮ್ಮ ಮೊಬೈಲ್ ಫೋನ್‌ನ ಹಿಂಭಾಗ, ನಿಮ್ಮ ಶರ್ಟ್, ನಿಮ್ಮ ಬೂಟುಗಳನ್ನು ನೀವು ನೋಡುತ್ತೀರಿ – ಅಲ್ಲಿ ‘ಮೇಡ್ ಇನ್ ಚೀನಾ’ ಎಂದು ಬರೆಯಲಾಗಿದೆ. ನೀವು ಕ್ಯಾಮೆರಾ ಮತ್ತು ಶರ್ಟ್‌ಗಳ ಹಿಂದೆ ‘ಮೇಡ್ ಇನ್ ಮಧ್ಯಪ್ರದೇಶ’ ಟ್ಯಾಗ್‌ಗಳನ್ನು ನೋಡಿದ್ದೀರಾ? ಇದನ್ನೇ ನಾವು ಮಾಡಲು ಬಯಸುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿದ್ದಾರೆ: ರಾಹುಲ್ ಗಾಂಧಿ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತು ಹಾಕಲಾಗುವುದು: ಪ್ರಧಾನಿ ಮೋದಿ

ಮಂಗಳವಾರ, ರಾಜ್ಯದಲ್ಲಿ ಮತ್ತೊಂದು ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನರ ಬಿರುಗಾಳಿಯು ಮಧ್ಯಪ್ರದೇಶದಿಂದ ಕಾಂಗ್ರೆಸ್ ಅನ್ನು ಕಿತ್ತುಹಾಕುತ್ತದೆ ಎಂದು ಹೇಳಿದರು.”ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಜರಾಗುವುದನ್ನು ನಾನು ನೋಡುತ್ತಿದ್ದೇನೆ, ಅವರಲ್ಲಿ ಅನೇಕರು ಬಿಸಿಲಿನಲ್ಲಿ ನಿಂತಿದ್ದಾರೆ, ಏಕೆಂದರೆ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ ರ್ಯಾಲಿಗೆ ಮಾಡಿದ ವ್ಯವಸ್ಥೆಗಳು ಸ್ವಲ್ಪ ಕಡಿಮೆಯಾಗಿದೆ. ರಾಜ್ಯದಲ್ಲಿ ಬಿರುಗಾಳಿ ಬೀಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ನ ಡೇರೆಯನ್ನು ಕಿತ್ತು ಹಾಕಲಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ