ವಿದಿಶಾ (ಮಧ್ಯ ಪ್ರದೇಶ) ನವೆಂಬರ್ 14: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮ್ಮ ಪಕ್ಷದ ಶಾಸಕರನ್ನು “ಖರೀದಿ” ಮಾಡಿದ್ದು, ಮಧ್ಯಪ್ರದೇಶದಲ್ಲಿ (Madhya Pradesh) ಸರ್ಕಾರವನ್ನು “ಕದಿಯುತ್ತಿದ್ದಾರೆ” ಎಂದು ಕಾಂಗ್ರೆಸ್ ಹಿರಿಯ ಸಂಸದ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಆರೋಪಿಸಿದ್ದಾರೆ. 2020 ರಲ್ಲಿ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣವಾದ 22 ಶಾಸಕರ ಬಂಡಾಯವನ್ನು ಉಲ್ಲೇಖಿಸಿದ ರಾಹುಲ್ಸ ಜನಸಾಮಾನ್ಯರ ಧ್ವನಿಯನ್ನು ಬಿಜೆಪಿ “ನುಚ್ಚುನೂರು” ಮಾಡಿದೆ ಎಂದಿದ್ದಾರೆ. “ಐದು ವರ್ಷಗಳ ಹಿಂದೆ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಸರ್ಕಾರಕ್ಕೆ ಆಯ್ಕೆ ಮಾಡಿದ್ದೀರಿ. ನೀವು ಬಿಜೆಪಿಯನ್ನು ಆಯ್ಕೆ ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದೀರಿ. ನಂತರ ಬಿಜೆಪಿ ನಾಯಕರು- ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಮಿತ್ ಶಾ ಶಾಸಕರನ್ನು ಖರೀದಿಸಿ ಚುನಾಯಿತ ಸರ್ಕಾರವನ್ನು ಕದ್ದರ ಎಂದು ಮಧ್ಯಪ್ರದೇಶದ ವಿದಿಶಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಹೇಳಿದ್ದಾರೆ.
ಕೋಟ್ಯಂತರ ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ನಿಮ್ಮ ನಿರ್ಧಾರ, ನಿಮ್ಮ ಹೃದಯದ ಧ್ವನಿಯನ್ನು ಬಿಜೆಪಿ ನಾಯಕರು, ಪ್ರಧಾನಿ ಪುಡಿ ಮಾಡಿದ್ದಾರೆ. ನೀವು ಮೋಸ ಹೋಗಿದ್ದೀರಿ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಹೊರಹಾಕುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
VIDEO | “I am cent per cent sure that there will be a tsunami of Congress in Madhya Pradesh. I am confident that we will 145-150 seats here,” says Congress MP @RahulGandhi at an election rally in Vidisha, Madhya Pradesh.
(Full video available on PTI Videos -… pic.twitter.com/Q6vwBrvGc4
— Press Trust of India (@PTI_News) November 14, 2023
“ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಕರ್ನಾಟಕದಲ್ಲಿ ನಾವು ಅವರನ್ನು ಓಡಿಸಿದ್ದೇವೆ. ಹಿಮಾಚಲ ಪ್ರದೇಶದಲ್ಲಿ ನಾವು ಅವರನ್ನು ಓಡಿಸಿದ್ದೇವೆ ಆದರೆ ದ್ವೇಷದಿಂದ ಅಲ್ಲ. ನಾವು ‘ನಫ್ರತ್ ಕಾ ಬಜಾರ್’ನಲ್ಲಿ ‘ಮೊಹಬ್ಬತ್ ಕಿ ದುಕಾನ್’ ತೆರೆದಿದ್ದೇವೆ. ನಾವು ಅಹಿಂಸೆಯ ಸೈನಿಕರು, ನಾವು ಹೊಡೆಯುವುದಿಲ್ಲ, ಆದರೆ ನಾವು ಅವರನ್ನು ಪ್ರೀತಿಯಿಂದ ಓಡಿಸಿದೆವು, ಅವರಿಗೆ ಇಲ್ಲಿ ಸ್ಥಾನವಿಲ್ಲ ಎಂದು ನಾವು ಅವರಿಗೆ ಹೇಳಿದೆವು, ನೀವು ಕರ್ನಾಟಕವನ್ನು ಲೂಟಿ ಮಾಡಿದ್ದೀರಿ, 40% ಸರ್ಕಾರವನ್ನು ನಡೆಸುತ್ತೀರಿ, ಆದ್ದರಿಂದ ಹೋಗಿ, ಇಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಬರುತ್ತದೆ ಎಂದು ನಾವು ಹೇಳಿದೆವು.
ಏತನ್ಮಧ್ಯೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 145-150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಇದೇ ವೇಳೆ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಪಕ್ಷದ ಸರ್ಕಾರವು “ಮನರಂಜನಾ ಸರ್ಕಾರ” ಎಂದು ಹೇಳಿದರು.“ನಾವು (ಬಿಜೆಪಿ ಸರ್ಕಾರವನ್ನು ಉಲ್ಲೇಖಿಸಿ) ಅಭಿವೃದ್ಧಿಯನ್ನು ಮಾಡುತ್ತೇವೆ, ಕಾಂಗ್ರೆಸ್‌ಗೆ ಶಕ್ತಿ ಇಲ್ಲ, ನಮ್ಮ ಸರ್ಕಾರ ಡಬಲ್ ಇಂಜಿನ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅದ್ಭುತ ನಾಯಕ, ಆದ್ದರಿಂದ ಇಲ್ಲಿ ಪ್ರಧಾನಿ ಮೋದಿ ಮತ್ತು ಮಾಮಾ(ತಮ್ಮನ್ನೇ ಉಲ್ಲೇಖಿಸಿ) ಡಬಲ್ ಎಂಜಿನ್ ಸರ್ಕಾರವಿದೆ.ಕಾಂಗ್ರೆಸ್ ಸರ್ಕಾರವು ಮನರಂಜನೆಯ ಸರ್ಕಾರವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Vocal for Local: ಪ್ರಧಾನಿ ಮೋದಿ ‘ವೋಕಲ್ ಫಾರ್ ಲೋಕಲ್’ ಕರೆಗೆ ಉತ್ತಮ ಪ್ರತಿಕ್ರಿಯೆ
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಹೋದರ-ಸಹೋದರಿ ಜೋಡಿಯು ಮನರಂಜನೆಗಾಗಿ ಮಾತ್ರ ರಾಜ್ಯಕ್ಕೆ ಬರುತ್ತಾರೆ.
“ಸಹೋದರ- ಸಹೋದರಿಯರು ಇಲ್ಲಿ ಮನರಂಜನೆಗಾಗಿ ಬರುತ್ತಾರೆ. ತುಂಬಾ ಸುಳ್ಳು ಹೇಳುತ್ತಿದ್ದಾರೆ. ಮೂರು ವರ್ಷದಲ್ಲಿ ಕೇವಲ 21 ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಕೂಡ ಹಾಗೇ ಹೇಳುತ್ತಾರೆ. ಈ ಸಹೋದರ ಮತ್ತು ಸಹೋದರಿ ಪ್ರತಿದಿನ ಸುಳ್ಳು ಹೇಳುತ್ತಾರೆ. ನಾವು ಡಬಲ್ ಎಂಜಿನ್ ಮತ್ತು ಅವು ಮನರಂಜನೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Tue, 14 November 23