ರಾಜಸ್ಥಾನದಲ್ಲಿ ಗೆಹ್ಲೋಟ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ? ಭವಿಷ್ಯ ನುಡಿದ ಎರಡು ಎಕ್ಸಿಟ್ ಪೋಲ್

|

Updated on: Nov 30, 2023 | 6:29 PM

Rajasthan Assembly Election Exit Poll: ರಾಜಸ್ಥಾನ ವಿಧಾನಸಭೆಯಲ್ಲಿ 200 ಸ್ಥಾನಗಳಿದ್ದು 101 ಮ್ಯಾಜಿಕ್ ನಂಬರ್ ಆಗಿದೆ. ಜನ್ ಕೀಬಾತ್‌ ಮತಗಟ್ಟೆ ಸಮೀಕ್ಷೆ ಪ್ರಕಾ ಬಿಜೆಪಿಗೆ ಬಹುಮತ ದೊರೆಯಲಿದೆ. ಈ ಸಮೀಕ್ಷೆಯ ಪ್ರಕಾರ, ಬಿಜೆಪಿ 100-122, ಕಾಂಗ್ರೆಸ್‌ 62-85, ಇತರೆ 14-15 ಸ್ಥಾನ ಗಳಿಸಲಿವೆ.

ರಾಜಸ್ಥಾನದಲ್ಲಿ ಗೆಹ್ಲೋಟ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ? ಭವಿಷ್ಯ ನುಡಿದ ಎರಡು ಎಕ್ಸಿಟ್ ಪೋಲ್
ಅಶೋಕ್ ಗೆಹ್ಲೋಟ್
Follow us on

ದೆಹಲಿ ನವೆಂಬರ್ 30 : ಆರಂಭಿಕ ಮತಗಟ್ಟೆ ಸಮೀಕ್ಷೆ (Exit Poll) ಅಂಕಿಅಂಶಗಳ ಪ್ರಕಾರ ರಾಜಸ್ಥಾನದಲ್ಲಿ (Rajasthan)ಹಿಡಿತ ಸಾಧಿಸುವ ರೇಸ್‌ನಲ್ಲಿ ಬಿಜೆಪಿ (BJP) ಮುಂಚೂಣಿಯಲ್ಲಿದೆ. ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಬಿಜೆಪಿ 100 ರಿಂದ 122 ಸ್ಥಾನಗಳನ್ನು ಗೆಲ್ಲುತ್ತದೆ. ಅದೇ ವೇಳೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು 62-85 ಸೀಟುಗಳಿಸಲಿವೆ. ಪೋಲ್ ಸ್ಟ್ರಾಟ್ ಎಕ್ಸಿಟ್ ಪೋಲ್ ಕಾಂಗ್ರೆಸ್ ಪಕ್ಷ 90 ರಿಂದ 100 ಸ್ಥಾನಗಳನ್ನು ಗಳಿಸುತ್ತದೆ ಎಂದು ಹೇಳಿದರೂ ಬಿಜೆಪಿ 100-110 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ರಾಜಸ್ಥಾನ ವಿಧಾನಸಭೆಯಲ್ಲಿ 200 ಸ್ಥಾನಗಳಿದ್ದು 101 ಮ್ಯಾಜಿಕ್ ನಂಬರ್ ಆಗಿದೆ. ರಾಜಸ್ಥಾನದಲ್ಲಿ ಜನ್ ಕೀಬಾತ್‌ ಸಮೀಕ್ಷೆಯಂತೆ ಬಿಜೆಪಿಗೆ ಬಹುಮತ ದೊರೆಯಲಿದೆ. ಈ ಸಮೀಕ್ಷೆಯ ಪ್ರಕಾರ, ಬಿಜೆಪಿ 100-122, ಕಾಂಗ್ರೆಸ್‌ 62-85, ಇತರೆ 14-15 ಸ್ಥಾನ ಗಳಿಸಲಿವೆ.

2018 ರಲ್ಲಿ ಕಾಂಗ್ರೆಸ್ ‘ರಿವಾಲ್ವಿಂಗ್ ಡೋರ್’ ನೀತಿಯಿಂದ ಲಾಭಗಳಿಸಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 100 ಸ್ಥಾನ ಗಳಿಸಿದರೆ ಬಿಜೆಪಿ 73 ಸ್ಥಾನಗಳನ್ನು ಗಳಿಸಿತ್ತು. ಮತ ಹಂಚಿಕೆಗಳು ಬಹುತೇಕ ಸಮಾನವಾಗಿದ್ದರೂ ಸಹ ಇದು ಗಮನಾರ್ಹ ಅಂತರವಾಗಿತ್ತು. ಬಿಜೆಪಿಯ ಹಿಡಿತವು ಆಡಳಿತ ವಿರೋಧಿ ಅಂಶದ ಬಲವನ್ನು ಒತ್ತಿಹೇಳಿತು 2013 ರಲ್ಲಿ ಅದು 163 ಸ್ಥಾನಗಳನ್ನು ಮತ್ತು 45 ಶೇಕಡಾ ಮತಗಳನ್ನು ಗೆದ್ದಿತು. ಬಿಜೆಪಿ ಆಗ 90 ಸ್ಥಾನಗಳನ್ನು ಗಳಿಸಿತ್ತು.

ಇದನ್ನೂ ಓದಿ: Exit Poll Results 2023 LIVE: ಪಂಚ ರಾಜ್ಯ ಮತಗಟ್ಟೆ ಸಮೀಕ್ಷೆ: ಛತ್ತೀಸ್‌ಗಢದಲ್ಲಿ ತೀವ್ರ ಪೈಪೋಟಿ

ಕಾಂಗ್ರೆಸ್ ಸ್ವಂತವಾಗಿ ಬಹುಮತವನ್ನು ಗಳಿಸಲಿಲ್ಲ. ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಆರು ಸ್ಥಾನಗಳನ್ನು ಗೆದ್ದ ಮಾಯಾವತಿಯವರ ಬಹುಜನ ಸಮಾಜ ಪಕ್ಷದಿಂದ ಬೆಂಬಲ ಪಡೆದಿತ್ತು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ