ತೆಲಂಗಾಣ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಾಯಕರ ನಡುವೆ ಮಾತಿನ ಚಕಮಕಿ ಜೋರಾಗುತ್ತಿದೆ. ತಮ್ಮ ಸಾರಥ್ಯದ ಎಐಎಂಐಎಂ ಪಕ್ಷವನ್ನು ಬಿಆರ್‌ಎಸ್ ಪಕ್ಷದ ಬಿ ತಂಡ ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ತೆಲಂಗಾಣದಲ್ಲಿ ಬಿ-ಟೀಮ್‌ಗಳಿದ್ದರೆ ಬಿಜೆಪಿ ಏಕೆ ದುರ್ಬಲವಾಗಿದೆ ಎಂದು ಪ್ರಶ್ನಿಸಿದರು. ರಾಹುಲ್ ಬಾಬಾ (Rahul Gandhi) ಸುರಕ್ಷಿತ ಆಸನಕ್ಕಾಗಿ ವಯನಾಡ್‌ಗೆ ಏಕೆ ಹೋದರು? ಎಂದೂ ಅವರು ಪ್ರಶ್ನಿಸಿದರು. ಅಸೆಂಬ್ಲಿ ಚುನಾವಣೆಯಲ್ಲಿ (Telangana Assembly Elections 2023) ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟು ಗೆಲ್ಲುವ ಸ್ಥಾನಗಳಿಗಿಂತ ಹೆಚ್ಚಿನ ಸೀಟುಗಳು ತಮ್ಮ ರಾಯಲ್ ಎನ್‌ಫೀಲ್ಡ್‌ನಲ್ಲಿ (Royal Enfield) ಇವೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮೋಟಾರು ಸೈಕಲ್‌ಗಳ ಸಂಗ್ರಹಿಸುವ ಮತ್ತು ಓಡಿಸುವ ಚಟ ಹೊಂದಿರುವ ಓವೈಸಿ ಅವರು ನಿನ್ನೆ ಬುಧವಾರ ಮುಲುಗು ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರುಗಳು ಚುನಾವಣಾ ಪ್ರಚಾರದ ವೇಳೆ ಮಾಡಿರುವ ವಾಗ್ದಾಳಿಗೆ ಟ್ವಿಟ್ಟರ್ ಪೋಸ್ಟ್ ಮೂಲಕ ಓವೈಸಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದೂ ಅವರು ವ್ಯಾಖ್ಯಾನಿಸಿದರು.
ತಮ್ಮ ಎಐಎಂಐಎಂ ಪಕ್ಷವು ತೆಲಂಗಾಣ ರಾಜ್ಯದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳ ಬಿ ಟೀಂ ಎಂದು ಕಾಂಗ್ರೆಸ್ ಪಕ್ಷವು ಹೇಗೆ ಕರೆಯುತ್ತದೆ ಎಂದು ಪ್ರಸ್ತಾಪಿಸಿರುವ ಓವೈಸಿ, “ಅಮೇಠಿ ಕ್ಷೇತ್ರವನ್ನು ಬಿಜೆಪಿಗೆ ರಾಹುಲ್ ಏಕೆ ಉಡುಗೊರೆಯಾಗಿ ಕೊಟ್ಟರು? ಇಲ್ಲಿ ಬಿ ಟೀಂಗಳು ಇದ್ದಿದ್ದರೆ ತೆಲಂಗಾಣದಲ್ಲಿ ಬಿಜೆಪಿ ಇಷ್ಟೊಂದು ದುರ್ಬಲವಾಗಿ ಇರುತ್ತಿತ್ತಾ? ಬಾಬಾ, ಸುರಕ್ಷಿತ ಆಸನವನ್ನು ಪಡೆಯಲು ನೀವು ಏಕೆ ವಯನಾಡಿಗೆ ಹೋಗಬೇಕಾಗಿತ್ತು? ಎಂದೆಲ್ಲಾ ಪ್ರಶ್ನಿಸಿದ್ದಾರೆ.
As predicted Rahul baba’s “B-Team” rona has begun. Why did he gift his Amethi seat to BJP? And why is BJP so weak in Telangana if it has B-Teams here? Why did Baba have to go to Wayanad to find a “safe seat?”
My Royal Enfield has more seats than what BJP-CongRSS combine will have in Telangana Assembly -Asaduddin Owaisi
As predicted Rahul baba’s “B-Team” rona has begun. Why did he gift his Amethi seat to BJP? And why is BJP so weak in Telangana if it has B-Teams here? Why did Baba have to go to Wayanad to find a “safe seat?”
My Royal Enfield has more seats than what BJP-CongRSS combine will…
— Asaduddin Owaisi (@asadowaisi) October 18, 2023
ಮತ್ತೊಂದೆಡೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ನಿವಾಸಿ ಎಂಐಎಂ ನಾಯಕ, ತಮ್ಮ ತಾಯಿ ಸೋನಿಯಾ ಗಾಂಧಿಗೆ ರಾಹುಲ್ ಗಾಂಧಿ ಅವರು ‘ನೂರಿ’ ಎಂಬ ನಾಯಿಮರಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳ ನಡುವೆ ಮಾತಿನ ಸಮರ ಜೋರಾಗಿದೆ. ಬುಧವಾರ (ಅಕ್ಟೋಬರ್ 18) ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ತೆಲಂಗಾಣದ ಮುಲುಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ, ಎಂಐಎಂ ಮತ್ತು ಬಿಆರ್‌ಎಸ್ ಪಕ್ಷಗಳ ವಿರುದ್ಧ ಟೀಕೆ ಮಾಡಿದ್ದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಅಸಾದುದ್ದೀನ್ ಓವೈಸಿ ಅವರ ಪಕ್ಷ ಎಐಎಂಐಎಂ, ಬಿಆರ್ ಎಸ್ ಬಿಜೆಪಿ ಬಿ ಟೀಮ್ ಎಂದು ಬಣ್ಣಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ