ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ

|

Updated on: Nov 27, 2023 | 7:58 PM

ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ಹೈದರಾಬಾದ್‌ನಲ್ಲಿ ಮೆಗಾ ರೋಡ್‌ಶೋ ನಡೆಸಿದರು. ಬಿಜೆಪಿ ಪರ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

1 / 8
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 27, ಸೋಮವಾರ ಹೈದರಾಬಾದ್‌ನಲ್ಲಿ ಬೃಹತ್  ರೋಡ್ ಶೋ ನಡೆಸಿದ್ದಾರೆ

2 / 8
ಪ್ರಧಾನಿಯವರನ್ನು ನೋಡಲು ಬಿಜೆಪಿ ಬೆಂಬಲಿಗರು ಮತ್ತು ಪ್ರಧಾನಿಯವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

3 / 8
ಸಾಲುಗಟ್ಟಿ ನಿಂತಿದ್ದ ಜನಸಮೂಹದತ್ತ ಕೈಬೀಸುತ್ತಾ ಪ್ರಧಾನಿಯವರು ರೋಡ್‌ಶೋ ಮುಂದುವರಿಸಿದ್ದಾರೆ

4 / 8
ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಮತ್ತು ಬಿಜೆಪಿ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಕೂಡಾ ಪ್ರಧಾನಿ ಮೋದಿಯೊಂದಿಗೆ ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ

5 / 8
ಆರ್‌ಟಿಸಿ ಎಕ್ಸ್ ರಸ್ತೆಯಿಂದ ಆರಂಭವಾದ ರೋಡ್‌ಶೋನಲ್ಲಿ ನಾರಾಯಣಗುಡಾ, ವೈಎಂಸಿಎ ಕಾಚೇಗೌಡ ಜಂಕ್ಷನ್‌ಗಳ ಮೂಲಕ ಕಾಚೇಗೌಡ ವೀರ್ ಸಾವರ್ಕರ್ ಪ್ರತಿಮೆ ಬಳಿ ಮುಕ್ತಾಯಗೊಂಡಿದೆ

6 / 8
ನವೆಂಬರ್ 28 ರಂದು ಚುನಾವಣಾ ಆಯೋಗದ ಪ್ರಚಾರ ಕೊನೆಗೊಳ್ಳುವ ಕಾರಣ ಬಿಜೆಪಿಯ ಅಂತಿಮ ಯತ್ನದ ಭಾಗವಾಗಿ ಈ ರೋಡ್ ಶೋ ಆಗಿದೆ.

7 / 8
 ನಗರ ಸಂಚಾರ ಪೊಲೀಸರು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ರೋಡ್‌ಶೋ ಸುಗಮವಾಗಿ ನಡೆಯಲು ಸಂಚಾರ ಸಲಹೆ ನೀಡಿದ್ದಾರೆ

8 / 8
ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.