ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮತದಾನ (Uttar Pradesh Assembly Election) ಇಂದು ನಡೆಯುತ್ತಿದೆ. ಈ ಮಧ್ಯೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕಾನ್ಪುರದಲ್ಲಿ ಮೂರನೇ ಹಂತದ ಮತದಾನಕ್ಕೆ ಪ್ರಚಾರ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದ ಮತದಾನದ ಮತ್ತು ಇಂದು ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಅಲೆ ಬಿಜೆಪಿ ಪರವಾಗಿ ಇದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಮ್ಮೆ ಆಡಳಿತ ನಡೆಸುವುದು ನಿಶ್ಚಿತ ಎಂದು ಹೇಳಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಉತ್ತರ ಪ್ರದೇಶವನ್ನು ಆಳುತ್ತದೆ, ಇಲ್ಲಿನ ಪ್ರತಿ ಹಳ್ಳಿ, ನಗರಗಳ, ಎಲ್ಲ ಜಾತಿ-ವರ್ಗದ ಜನರೂ ಕೂಡ ಉತ್ತರ ಪ್ರದೇಶ ರಾಜ್ಯವನ್ನು ವೇಗವಾಗಿ ಅಭಿವೃದ್ಧಿ ಗೊಳಿಸಿಸುವವರಿಗೇ ಮತ ಹಾಕುತ್ತಿದ್ದಾರೆ, ತಾಯಂದಿರು, ಸೋದರಿಯರು, ಪುತ್ರಿಯರೆಲ್ಲರೂ ಬಿಜೆಪಿ ಗೆಲುವನ್ನೇ ಬಯಸುತ್ತಿದ್ದಾರೆ ಮತ್ತು ಮುಸ್ಲಿಂ ಸಮುದಾಯದ ಸಹೋದರಿಯರೂ ಕೂಡ ಈ ಬಾರಿ ಮೋದಿಗೇ ಆಶೀರ್ವದಿಸುತ್ತಿದ್ದಾರೆ..ಈ ನಾಲ್ಕು ಅಂಶಗಳು ಮೊದಲ ಮತ್ತು ಎರಡನೇ ಹಂತದ ಮತದಾನದಲ್ಲಿ ಸ್ಪಷ್ಟವಾದ ವಿಷಯ ಎಂದು ಪ್ರಧಾನಿ ಮೋದಿ ವಿಶ್ಲೇಷಿಸಿದ್ದಾರೆ.
प्रधानमंत्री श्री @narendramodi कानपुर देहात की अकबरपुर विधानसभा में जनसभा को सम्बोधित करते हुए…#Vote_For_BJP https://t.co/gBGOlmGJd0
— BJP Uttar Pradesh (@BJP4UP) February 14, 2022
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮುಖ್ಯ ಪ್ರತಿಸ್ಪರ್ಧಿ ಪಕ್ಷವಾಗಿರುವ ಸಮಾಜವಾದಿ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಈ ಹಿಂದೆ ಉತ್ತರ ಪ್ರದೇಶವನ್ನು ಆಳುತ್ತಿದ್ದ ರಾಜಕಾರಣಿ ಕುಟುಂಬ ಪಡಿತರದಲ್ಲೂ ಹಗರಣ ಮಾಡಿದೆ. ಇದರಿಂದಾಗಿ ಬಡವರು ತಮಗೆ ಸಿಗಬೇಕಾದ ರೇಷನ್ನಿಂದ ವಂಚಿತರಾಗಬೇಕಾಯಿತು ಎಂದು ಹೇಳಿದರು. ಈ ಹಿಂದಿನ ಸರ್ಕಾರ ಲಕ್ಷಾಂತರ ನಕಲಿ ರೇಶನ್ ಕಾರ್ಡ್ಗಳನ್ನು ಮಾಡಿಸಿತ್ತು. ಆದರೆ ನಮ್ಮ ಡಬಲ್ ಎಂಜಿನ್ ಸರ್ಕಾರ ಈ ನಕಲಿ ರೇಷನ್ ಕಾರ್ಡ್ ಹಗರಣಕ್ಕೆ ಫುಲ್ಸ್ಟಾಪ್ ಹಾಕಿತು. ಈಗ ಇಲ್ಲಿನ ಕೋಟ್ಯಂತರ ಬಡವರು ಉಚಿತವಾಗಿ ಪಡಿತರ ಪಡೆಯುತ್ತಿದ್ದಾರೆ. ಬಡವರ್ಗದ ಸೋದರಿಯರು, ತಾಯಂದಿರ ಮನೆಯ ಒಲೆ ಯಾವತ್ತೂ ನಂದಿಹೋಗಿಲ್ಲ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆಯೂ ಮಾತನಾಡಿದರು.
ಇದನ್ನೂ ಓದಿ: ಮಂಗಳಮುಖಿಯರಿಗೆ ಕಿರಣ್ ರಾಜ್ ಸಹಾಯ; ಮನಸಾರೆ ನಟನಿಗೆ ಹರಸಿದ ತೃತೀಯ ಲಿಂಗಿಗಳು
Published On - 3:22 pm, Mon, 14 February 22