ಕಾಂಗ್ರೆಸ್ಗೆ ಅದರ ದಾರಿ, ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ: ಮಮತಾ ಬ್ಯಾನರ್ಜಿ
Mamata Banerjee ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಯಾವುದೇ ಸ್ಥಾನದಲ್ಲಿ ದುರ್ಬಲರಾಗುವುದನ್ನು ನಾನು ಬಯಸದ ಕಾರಣ ಟಿಎಂಸಿ ಯುಪಿಯಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಮೊದಲ ಹಂತದಲ್ಲಿ, ಅಖಿಲೇಶ್ ಅವರ ಪಕ್ಷವು 57 ಸ್ಥಾನಗಳಲ್ಲಿ 37 ಸ್ಥಾನಗಳನ್ನು...
ಕೊಲ್ಕತ್ತಾ: ಫೆಬ್ರವರಿ 12 ರಂದು ಚುನಾವಣೆ ನಡೆದ ನಾಲ್ಕು ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ(municipal corporations) ದೊಡ್ಡ ಗೆಲುವು ದಾಖಲಿಸಲು ಸಿದ್ಧವಾಗಿರುವ ತೃಣಮೂಲ ಕಾಂಗ್ರೆಸ್ (TMC) ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸೋಮವಾರ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಪಶ್ಚಿಮ ಬಂಗಾಳದ ಅಸನ್ಸೋಲ್, ಬಿಧಾನಗರ್, ಸಿಲಿಗುರಿ ಮತ್ತು ಚಂದನಗರ್ – ಎಲ್ಲಾ ನಾಲ್ಕು ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಟಿಎಂಸಿ ಮುಂದಿದೆ. ಜನರಿಗೆ ಧನ್ಯವಾದ ಅರ್ಪಿಸಿ ಮಾತನಾಡಿದ ಅವರು ರಾಜ್ಯ ಆಡಳಿತವು ಸಾಮಾನ್ಯ ಜನರ ಉದ್ದೇಶಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದಾರೆ. ಸಮಾಜವಾದಿ ಪಕ್ಷದ (ಎಸ್‌ಪಿ) ಪ್ರಚಾರಕ್ಕಾಗಿ ಕಳೆದ ವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಹೆಚ್ಚಿನವರ ಹಿತಾಸಕ್ತಿಯಿಂದ ಆ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸದಿರಲು ತೀರ್ಮಾನಿಸಿದೆ ಎಂದಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಯಾವುದೇ ಸ್ಥಾನದಲ್ಲಿ ದುರ್ಬಲರಾಗುವುದನ್ನು ನಾನು ಬಯಸದ ಕಾರಣ ಟಿಎಂಸಿ ಯುಪಿಯಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಮೊದಲ ಹಂತದಲ್ಲಿ, ಅಖಿಲೇಶ್ ಅವರ ಪಕ್ಷವು 57 ಸ್ಥಾನಗಳಲ್ಲಿ 37 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
It is once again an overwhelming victory of Ma, Mati, Manush. My heartiest congratulations to the people of Asansol, Bidhannagar, Siliguri & Chandanagore for having put their faith and confidence on All India Trinamool Congress candidates in the Municipal Corporation elections.
— Mamata Banerjee (@MamataOfficial) February 14, 2022
ವಾರಣಾಸಿಯಲ್ಲಿ ರ್ಯಾಲಿ ನಡೆಸಲು ಮಾರ್ಚ್ 3 ರಂದು ಮತ್ತೊಮ್ಮೆ ಉತ್ತರ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಮಮತಾ ಹೇಳಿದ್ದಾರೆ. ತೃಣಮೂಲ ಪಕ್ಷವು ಇತ್ತೀಚಿನ ದಿನಗಳಲ್ಲಿ ಸೌಹಾರ್ದ ಸಂಬಂಧ ಹೊಂದಿಲ್ಲದಿರುವ ಕಾಂಗ್ರೆಸ್ ಅನ್ನು ಟೀಕಿಸಿದ ಬ್ಯಾನರ್ಜಿ, ಯಾವುದೇ ಪ್ರಾದೇಶಿಕ ಸಂಘಟನೆಯು ಹಳೆಯ ಪಕ್ಷದೊಂದಿಗೆ ಸೌಹಾರ್ದ ಸಂಬಂಧವನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅದರದ್ದೇ ದಾರಿಯಲ್ಲಿ ಹೋಗಬಹುದು, ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ ಎಂದು ಮಮತಾ ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರವು ದೇಶದ ಸಂವಿಧಾನವನ್ನು ಕೆಡವಿದೆ ಎಂದು ಆರೋಪಿಸಿರುವ ತೃಣಮೂಲ ಮುಖ್ಯಸ್ಥರು, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮತ್ತು ತೆಲಂಗಾಣ ಸಿಎಂ ಕೆಸಿಆರ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನಾವು ಒಕ್ಕೂಟ ರಚನೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೂಡ ಹೆಚ್ಚಿನ ಆಸಕ್ತಿಯಿಂದ ಕೈಜೋಡಿಸುವಂತೆ ಕೇಳಿದ್ದೆ, ಆದರೆ ಅವರು ಕೇಳದಿದ್ದರೆ ನಾನೇನೂ ಮಾಡಲು ಸಾಧ್ಯವಿಲ್ಲ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ ಎಂದಿದ್ದಾರೆ ಮಮತಾ.
ಇದನ್ನೂ ಓದಿ: Unnao Murder: ಕೊಲೆಗೂ ಮೊದಲು ಅತ್ಯಾಚಾರದ ಶಂಕೆ; ಉನ್ನಾವೋ ಯುವತಿಯ ಪೋಷಕರಿಂದ ಸಿಎಂ ಯೋಗಿ ಆದಿತ್ಯನಾಥ್ ಭೇಟಿಗೆ ಪಟ್ಟು