ನಾನು ಪುನರಾಯ್ಕೆಯಾದರೆ ಮುಸ್ಲಿಮರು ತಿಲಕ ಧರಿಸುವಂತೆ ಮಾಡುತ್ತೇನೆ: ಉತ್ತರ ಪ್ರದೇಶದ ಬಿಜೆಪಿ ನಾಯಕ

"ಮೊದಲ ಬಾರಿಗೆ ಇಷ್ಟೊಂದು ಹಿಂದೂಗಳು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೊಮರಿಯಾಗಂಜ್‌ನಲ್ಲಿ 'ಸಲಾಮ್' ಇದೆಯೇ ಅಥವಾ 'ಜೈ ಶ್ರೀ ರಾಮ್' ಇದೆಯೇ?" ಎಂದು ಸಿಂಗ್ ಕೇಳಿದ್ದಾರೆ.  2017ರಲ್ಲಿ ಸಿಂಗ್ ಡೊಮರಿಯಾಗಂಜ್ ಕ್ಷೇತ್ರದಿಂದ ಸುಮಾರು 200 ಮತಗಳಿಂದ ಗೆದ್ದಿದ್ದರು.

ನಾನು ಪುನರಾಯ್ಕೆಯಾದರೆ ಮುಸ್ಲಿಮರು ತಿಲಕ ಧರಿಸುವಂತೆ ಮಾಡುತ್ತೇನೆ: ಉತ್ತರ ಪ್ರದೇಶದ ಬಿಜೆಪಿ ನಾಯಕ
ರಾಘವೇಂದ್ರ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 14, 2022 | 3:52 PM

ಲಖನೌ: ಉತ್ತರಪ್ರದೇಶದ (Uttar Pradesh) ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್ (Raghvendra Singh) ತಾನು ಮರು ಆಯ್ಕೆಯಾದರೆ ಮುಸ್ಲಿಮರು ಟೋಪಿ (ಸ್ಕಲ್ ಕ್ಯಾಪ್) ಧರಿಸುವ ಬದಲು ಹಣೆಗೆ ತಿಲಕ ಇಡುತ್ತಾರೆ ಎಂದು ಹೇಳಿದ್ದಾರೆ ಬಿಜೆಪಿ (BJP) ನಾಯಕನ ದ್ವೇಷ ಭಾಷಣದ ವಿಡಿಯೊ ವೈರಲ್ ಆಗಿದ್ದು ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಪೂರ್ವ ಯುಪಿಯ ಡೊಮರಿಯಾಗಂಜ್‌ನ ಶಾಸಕ ರಾಘವೇಂದ್ರ  ಸಿಂಗ್ “ಇಸ್ಲಾಮಿಕ್ ಭಯೋತ್ಪಾದನೆ” ಎಂದು ಕರೆದಿದ್ದನ್ನು ಎದುರಿಸಿರುವ ಭಾಷಣ ಇದು ಎಂದು ಸಮರ್ಥಿಸಿಕೊಂಡಿದ್ದಾರೆ. “ಇಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಇದ್ದಾಗ, ಹಿಂದೂಗಳು ಗೋಲ್ ಟೋಪಿಗಳನ್ನು (ಸ್ಕಲ್ ಕ್ಯಾಪ್) ಧರಿಸುವಂತೆ ಒತ್ತಾಯಿಸಲಾಯಿತು. ನಾನು ಷರತ್ತು ವಿಧಿಸಿದೆ. ನಾನು ಹಿಂದೂ ಹೆಮ್ಮೆಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧನಿದ್ದೇನೆ. ನನ್ನ ಪ್ರಕಾರ ಮುಸ್ಲಿಮರು ನನ್ನನ್ನು ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರೆ, ನಾನು ಮೌನವಾಗಿರುವುದಿಲ್ಲ ಎಂದು ರಾಘವೇಂದ್ರ ಸಿಂಗ್ ವಿಡಿಯೊದಲ್ಲಿ ಹೇಳಿದ್ದಾರೆ. ಸಿಂಗ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ಥಾಪಿಸಿದ ಬಲಪಂಥೀಯ ಗುಂಪಿನ ಹಿಂದೂ ಯುವ ವಾಹಿನಿಯ ಉತ್ತರ ಪ್ರದೇಶದ ಉಸ್ತುವಾರಿಯಾಗಿದ್ದಾರೆ. ಸಿಂಗ್ ಅವರ ದ್ವೇಷಭಾಷಣದ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ. ನಾನು ಮತ್ತೆ ಶಾಸಕನಾದರೆ, ಗೋಲ್ ಟೋಪಿಗಳು (ಸ್ಕಲ್ ಕ್ಯಾಪ್) ಮಾಯವಾದಂತೆ. ಮುಂದಿನ ಬಾರಿ ಮಿಯಾನ್ ಲೋಗ್ (ಮುಸ್ಲಿಮರಿಗೆ ಅವಹೇಳನಕಾರಿಯಾಗಿ ಬಳಸಲಾಗುವ ಪದ) ತಿಲಕ ಧರಿಸುತ್ತಾರೆ ”ಎಂದು ಸಿಂಗ್ ಹೇಳಿದ್ದಾರೆ.

“ಮೊದಲ ಬಾರಿಗೆ ಇಷ್ಟೊಂದು ಹಿಂದೂಗಳು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೊಮರಿಯಾಗಂಜ್‌ನಲ್ಲಿ ‘ಸಲಾಮ್’ ಇದೆಯೇ ಅಥವಾ ‘ಜೈ ಶ್ರೀ ರಾಮ್’ ಇದೆಯೇ?” ಎಂದು ಸಿಂಗ್ ಕೇಳಿದ್ದಾರೆ.  2017ರಲ್ಲಿ ಸಿಂಗ್ ಡೊಮರಿಯಾಗಂಜ್ ಕ್ಷೇತ್ರದಿಂದ ಸುಮಾರು 200 ಮತಗಳಿಂದ ಗೆದ್ದಿದ್ದರು.

ಮಿಶ್ರ ಜನಸಂಖ್ಯೆಯನ್ನು ಹೊಂದಿರುವ ಡೊಮರಿಯಾಗಂಜ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಆರನೇ ಹಂತದ ಮತದಾನದ ಕ್ಷೇತ್ರಗಳಲ್ಲಿ ಬರಲಿದೆ.  ಪೂರ್ವ ಯುಪಿಯಲ್ಲಿ ಹಲವಾರು ಬಿಜೆಪಿ ನಾಯಕರು ಮತದಾನಕ್ಕೂ ಮುನ್ನ ಧ್ರುವೀಕರಣದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಿಜೆಪಿ ಕಳೆದ ತಿಂಗಳು ಹಲವಾರು ಹಿಂದುಳಿದ ಜಾತಿಗಳ ನಾಯಕರನ್ನು ಕಳೆದುಕೊಂಡಿದ್ದು, ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಅದರ ದಾರಿ, ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ: ಮಮತಾ ಬ್ಯಾನರ್ಜಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್