ಮುಸ್ಲಿಂ ಸೋದರಿಯರು ಮೋದಿಗೆ ಆಶೀರ್ವದಿಸುತ್ತಿದ್ದಾರೆ ಎಂದ ಪ್ರಧಾನಿ; 4 ಅಂಶಗಳ ಉಲ್ಲೇಖ !

ಈ ಹಿಂದೆ ಉತ್ತರ ಪ್ರದೇಶವನ್ನು ಆಳುತ್ತಿದ್ದ ರಾಜಕಾರಣಿ ಕುಟುಂಬ ಪಡಿತರದಲ್ಲೂ ಹಗರಣ ಮಾಡಿದೆ. ಇದರಿಂದಾಗಿ ಬಡವರು ತಮಗೆ ಸಿಗಬೇಕಾದ ರೇಷನ್​​ನಿಂದ ವಂಚಿತರಾಗಬೇಕಾಯಿತು ಎಂದು ಪ್ರಧಾನಮಂತ್ರಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಸ್ಲಿಂ ಸೋದರಿಯರು ಮೋದಿಗೆ ಆಶೀರ್ವದಿಸುತ್ತಿದ್ದಾರೆ ಎಂದ ಪ್ರಧಾನಿ; 4 ಅಂಶಗಳ ಉಲ್ಲೇಖ !
ಪ್ರಧಾನಮಂತ್ರಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Feb 14, 2022 | 3:46 PM

ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮತದಾನ (Uttar Pradesh Assembly Election) ಇಂದು ನಡೆಯುತ್ತಿದೆ. ಈ ಮಧ್ಯೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕಾನ್ಪುರದಲ್ಲಿ ಮೂರನೇ ಹಂತದ ಮತದಾನಕ್ಕೆ ಪ್ರಚಾರ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದ ಮತದಾನದ ಮತ್ತು ಇಂದು ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಅಲೆ ಬಿಜೆಪಿ ಪರವಾಗಿ ಇದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರ ಮತ್ತೊಮ್ಮೆ ಆಡಳಿತ ನಡೆಸುವುದು ನಿಶ್ಚಿತ ಎಂದು ಹೇಳಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಉತ್ತರ ಪ್ರದೇಶವನ್ನು ಆಳುತ್ತದೆ,  ಇಲ್ಲಿನ ಪ್ರತಿ ಹಳ್ಳಿ, ನಗರಗಳ, ಎಲ್ಲ ಜಾತಿ-ವರ್ಗದ ಜನರೂ ಕೂಡ ಉತ್ತರ ಪ್ರದೇಶ ರಾಜ್ಯವನ್ನು ವೇಗವಾಗಿ ಅಭಿವೃದ್ಧಿ ಗೊಳಿಸಿಸುವವರಿಗೇ ಮತ ಹಾಕುತ್ತಿದ್ದಾರೆ, ತಾಯಂದಿರು, ಸೋದರಿಯರು, ಪುತ್ರಿಯರೆಲ್ಲರೂ ಬಿಜೆಪಿ ಗೆಲುವನ್ನೇ ಬಯಸುತ್ತಿದ್ದಾರೆ ಮತ್ತು ಮುಸ್ಲಿಂ ಸಮುದಾಯದ ಸಹೋದರಿಯರೂ ಕೂಡ ಈ ಬಾರಿ ಮೋದಿಗೇ ಆಶೀರ್ವದಿಸುತ್ತಿದ್ದಾರೆ..ಈ ನಾಲ್ಕು ಅಂಶಗಳು ಮೊದಲ ಮತ್ತು ಎರಡನೇ ಹಂತದ ಮತದಾನದಲ್ಲಿ ಸ್ಪಷ್ಟವಾದ ವಿಷಯ ಎಂದು ಪ್ರಧಾನಿ ಮೋದಿ ವಿಶ್ಲೇಷಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮುಖ್ಯ ಪ್ರತಿಸ್ಪರ್ಧಿ ಪಕ್ಷವಾಗಿರುವ ಸಮಾಜವಾದಿ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಈ ಹಿಂದೆ ಉತ್ತರ ಪ್ರದೇಶವನ್ನು ಆಳುತ್ತಿದ್ದ ರಾಜಕಾರಣಿ ಕುಟುಂಬ ಪಡಿತರದಲ್ಲೂ ಹಗರಣ ಮಾಡಿದೆ. ಇದರಿಂದಾಗಿ ಬಡವರು ತಮಗೆ ಸಿಗಬೇಕಾದ ರೇಷನ್​​ನಿಂದ ವಂಚಿತರಾಗಬೇಕಾಯಿತು ಎಂದು ಹೇಳಿದರು.  ಈ ಹಿಂದಿನ ಸರ್ಕಾರ ಲಕ್ಷಾಂತರ ನಕಲಿ ರೇಶನ್​ ಕಾರ್ಡ್​ಗಳನ್ನು ಮಾಡಿಸಿತ್ತು. ಆದರೆ ನಮ್ಮ ಡಬಲ್​ ಎಂಜಿನ್ ಸರ್ಕಾರ ಈ ನಕಲಿ ರೇಷನ್​ ಕಾರ್ಡ್ ಹಗರಣಕ್ಕೆ ಫುಲ್​ಸ್ಟಾಪ್​ ಹಾಕಿತು. ಈಗ ಇಲ್ಲಿನ ಕೋಟ್ಯಂತರ ಬಡವರು ಉಚಿತವಾಗಿ ಪಡಿತರ ಪಡೆಯುತ್ತಿದ್ದಾರೆ. ಬಡವರ್ಗದ ಸೋದರಿಯರು, ತಾಯಂದಿರ ಮನೆಯ ಒಲೆ ಯಾವತ್ತೂ ನಂದಿಹೋಗಿಲ್ಲ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ ಪಿಎಂ ಕಿಸಾನ್ ಸಮ್ಮಾನ್​ ನಿಧಿ ಯೋಜನೆಯ ಬಗ್ಗೆಯೂ ಮಾತನಾಡಿದರು.

ಇದನ್ನೂ ಓದಿ: ಮಂಗಳಮುಖಿಯರಿಗೆ ಕಿರಣ್ ರಾಜ್ ಸಹಾಯ; ಮನಸಾರೆ ನಟನಿಗೆ ಹರಸಿದ ತೃತೀಯ ಲಿಂಗಿಗಳು

Published On - 3:22 pm, Mon, 14 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್