Sign In

By signing in or creating an account, you agree with Associated Broadcasting Company's Terms & Conditions and Privacy Policy.

Unnao Murder: ಕೊಲೆಗೂ ಮೊದಲು ಅತ್ಯಾಚಾರದ ಶಂಕೆ; ಉನ್ನಾವೋ ಯುವತಿಯ ಪೋಷಕರಿಂದ ಸಿಎಂ ಯೋಗಿ ಆದಿತ್ಯನಾಥ್ ಭೇಟಿಗೆ ಪಟ್ಟು

ಸಮಾಜವಾದಿ ಪಕ್ಷದ ನಾಯಕ ಫತೇಹ್ ಬಹದ್ದೂರ್ ಸಿಂಗ್ ಅವರ ಪುತ್ರ ರಾಜೋಲ್ ಸಿಂಗ್ ಒಡೆತನದ ಜಮೀನಿನಲ್ಲಿ ಯುವತಿಯ ಶವವನ್ನು ಸಮಾಧಿ ಮಾಡಲಾಗಿತ್ತು.

Unnao Murder: ಕೊಲೆಗೂ ಮೊದಲು ಅತ್ಯಾಚಾರದ ಶಂಕೆ; ಉನ್ನಾವೋ ಯುವತಿಯ ಪೋಷಕರಿಂದ ಸಿಎಂ ಯೋಗಿ ಆದಿತ್ಯನಾಥ್ ಭೇಟಿಗೆ ಪಟ್ಟು
ಯೋಗಿ ಆದಿತ್ಯನಾಥ್​
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 11, 2022 | 7:29 PM

ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋದಲ್ಲಿನ ಸಮಾಜವಾದಿ ಪಕ್ಷದ (Samajwadi Party) ಮುಖಂಡರೊಬ್ಬರ ಪುತ್ರನ ಜಮೀನಿನಲ್ಲಿ ಗುರುವಾರ ದಲಿತ ಯುವತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಕೊಲೆ ಮಾಡುವ ಮುನ್ನ ಅತ್ಯಾಚಾರ ನಡೆಸಲಾಗಿದೆ ಎಂದು ಆಕೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ತಮಗೆ ನ್ಯಾಯ ಕೊಡಿಸುವಂತೆ ದಲಿತ ಯುವತಿಯ ತಾಯಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಭೇಟಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಈ ಘಟನೆಯ ಕುರಿತು ಮಾತನಾಡಿರುವ ಸಂತ್ರಸ್ತೆಯ ತಾಯಿ, ಈ ವಿಷಯದಲ್ಲಿ ಪೊಲೀಸ್ ತನಿಖೆಯಿಂದ ತನಗೆ ತೃಪ್ತಿ ಇಲ್ಲ ಎಂದು ಹೇಳಿದ್ದಾರೆ. ನನ್ನ ಮಗಳನ್ನು ಕೊಲ್ಲುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಉನ್ನಾವೊದ ಸದರ್ ಕೊತ್ವಾಲಿ ಪ್ರದೇಶದ ನಿವಾಸಿಯಾಗಿರುವ ತಾಯಿ, ತನ್ನ ಮಗಳ ಸಾವಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸಲು ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಯಸಿರುವುದಾಗಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಫತೇಹ್ ಬಹದ್ದೂರ್ ಸಿಂಗ್ ಅವರ ಪುತ್ರ ರಾಜೋಲ್ ಸಿಂಗ್ ಒಡೆತನದ ಜಮೀನಿನಲ್ಲಿ ಯುವತಿಯ ಶವವನ್ನು ಸಮಾಧಿ ಮಾಡಲಾಗಿತ್ತು.

ಆ ಯುವತಿ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಆಕೆಯ ತಾಯಿ ಡಿಸೆಂಬರ್ 8ರಂದು ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಫತೇಹ್ ಬಹದ್ದೂರ್ ಸಿಂಗ್ ಅವರು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದರು. ರಾಜೋಲ್ ಸಿಂಗ್ ನಾಪತ್ತೆಯಾಗಿದ್ದಾನೆ, ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.

ಜನವರಿ 24 ರಂದು ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ತಾಯಿ ಹಾರಿದ್ದ ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆಯ ಬಳಿಕ ಪೊಲೀಸರು ರಾಜೋಲ್ ಸಿಂಗ್​ನನ್ನು ಬಂಧಿಸಿದ್ದರು. ಇದೀಗ ರಾಜೋಲ್ ಸಿಂಗ್ ಜಮೀನಿನಲ್ಲಿ ಯುವತಿಯ ಶವವನ್ನು ಸಮಾಧಿ ಮಾಡಿರುವುದು ಬಯಲಾಗಿದೆ. ಡಿಸೆಂಬರ್ 8ರಂದು ಯುವತಿ ಕಣ್ಮರೆಯಾಗಿದ್ದಳು. ತನ್ನ ಮಗಳನ್ನು ಮಾಜಿ ಸಚಿವರ ಮಗ ರಾಜೋಲ್ ಸಿಂಗ್ ಕಿಡ್ನಾಪ್ ಮಾಡಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದರು.

ಇದನ್ನೂ ಓದಿ: ಉನ್ನಾವೋದಲ್ಲಿ ಎಸ್​ಪಿ ನಾಯಕನ ಹೊಲದಲ್ಲಿ ದಲಿತ ಯುವತಿಯ ಶವ ಪತ್ತೆ; ನ್ಯಾಯಕ್ಕಾಗಿ ಅಖಿಲೇಶ್ ಯಾದವ್​ಗೆ ಪೋಷಕರ ಒತ್ತಾಯ

ಉನ್ನಾವೋ ರೇಪ್ ಕೇಸ್: 1ಪ್ರಕರಣದಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕನಿಗೆ ಜೀವಾವಧಿ, ಇನ್ನೂ 4 ಕೇಸ್ ಇದಾವೆ