Uttar Pradesh election 2022 ಕಾಂಗ್ರೆಸ್‌ನಿಂದ ಮಹಿಳಾ ಚುನಾವಣಾ ಪ್ರಣಾಳಿಕೆ ಬಿಡುಗಡೆ; ಪದವೀಧರ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಾಗ್ದಾನ

| Updated By: ರಶ್ಮಿ ಕಲ್ಲಕಟ್ಟ

Updated on: Dec 08, 2021 | 1:37 PM

Priyanka Gandhi Vadra ಕಾಂಗ್ರೆಸ್ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿದೆ. ಕಾಂಗ್ರೆಸ್‌ನ ಸುಚೇತಾ ಕೃಪಲಾನಿ ಮೊದಲ ಮಹಿಳಾ ಸಿಎಂ ಆಗಿದ್ದರು. ಇತರ ದೇಶಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದ್ದಾಗ ನಮ್ಮ ದೇಶ ಮೊದಲ ಮಹಿಳಾ ಪ್ರಧಾನಿಯನ್ನು ಹೊಂದಿತ್ತು. ನಾವು ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 40 ಪ್ರಾತಿನಿಧ್ಯವನ್ನು ನೀಡಿದ್ದೇವೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Uttar Pradesh election 2022 ಕಾಂಗ್ರೆಸ್‌ನಿಂದ ಮಹಿಳಾ ಚುನಾವಣಾ ಪ್ರಣಾಳಿಕೆ ಬಿಡುಗಡೆ; ಪದವೀಧರ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಾಗ್ದಾನ
ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ
Follow us on

ಲಖನೌ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ (Uttar Pradesh Election) ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಬುಧವಾರ ಲಖನೌದಲ್ಲಿ ಪಕ್ಷದ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಮಹಿಳಾ ಕೇಂದ್ರಿತ ಪ್ರಣಾಳಿಕೆ (Women’s Manifesto) ಇದೇ ಮೊದಲ ಬಾರಿ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ (Congress) ಉತ್ತರ ಪ್ರದೇಶ ವ್ಯವಹಾರಗಳ ಉಸ್ತುವಾರಿ ಪ್ರಿಯಾಂಕಾ, ಪ್ರಣಾಳಿಕೆಯು ರಾಜ್ಯದ ಸಮಗ್ರ ಮತ್ತು ಸರ್ವತೋಮುಖ ಬೆಳವಣಿಗೆಗೆ ಮಾರ್ಗಸೂಚಿಯಾಗಿದೆ ಎಂದು ಹೇಳಿದರು. ಯುವಕರು, ಮಹಿಳೆಯರು, ರೈತರು, ವ್ಯಾಪಾರಸ್ಥರು, ಸಮಾಜದ ವಿವಿಧ ವರ್ಗದವರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ಇದು ವಿಶೇಷ ಗಮನ ಹರಿಸುತ್ತದೆ ಎಂದರು. ನಾವು ‘ಮಹಿಳಾ ಪ್ರಣಾಳಿಕೆ’ಯನ್ನು ಸಿದ್ಧಪಡಿಸಿದ್ದೇವೆ. ನಾವು ಮಹಿಳೆಯರ ಸಬಲೀಕರಣ ಮಾಡಲು ಬಯಸುತ್ತೇವೆ .ಅವರ ಅಭಿಪ್ರಾಯದೊಂದಿಗೆ ಸಂಕೋಲೆಗಳನ್ನು ಮುರಿಯುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ಅವರು ರಾಜಕೀಯದಲ್ಲಿ ಪೂರ್ಣ ಭಾಗವಹಿಸುವುದರಿಂದ ಮತ್ತು ಸಮಾಜದಲ್ಲಿ ಭಾಗವಹಿಸುವುದರಿಂದ ಶೋಷಣೆಯನ್ನು ಕೊನೆಗೊಳಿಸಬಹುದು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.


ಕಾಂಗ್ರೆಸ್ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿದೆ. ಕಾಂಗ್ರೆಸ್‌ನ ಸುಚೇತಾ ಕೃಪಲಾನಿ ಮೊದಲ ಮಹಿಳಾ ಸಿಎಂ ಆಗಿದ್ದರು. ಇತರ ದೇಶಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದ್ದಾಗ ನಮ್ಮ ದೇಶ ಮೊದಲ ಮಹಿಳಾ ಪ್ರಧಾನಿಯನ್ನು ಹೊಂದಿತ್ತು . ನಾವು ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 40 ಪ್ರಾತಿನಿಧ್ಯವನ್ನು ನೀಡಿದ್ದೇವೆ. ಅವರ ಸಬಲೀಕರಣವು ಕಾಗದಕ್ಕೆ ಸೀಮಿತವಾಗಿರಬಾರದು. ಮಹಿಳೆಯರು ನಿಜವಾಗಿಯೂ ರಾಜಕೀಯದ ಭಾಗವಾಗಿದ್ದರೆ ಅದನ್ನು ಕಾಗದದ ಮೇಲೆ ಅಲ್ಲ ನೆಲದ ಮೇಲೆ ಅನುಷ್ಠಾನಕ್ಕೆ ತರಬೇಕು ಎಂದು ಲಖನೌದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.


12ನೇ ತರಗತಿ ತೇರ್ಗಡೆಯಾದ ಹುಡುಗಿಯರಿಗೆ ಸ್ಮಾರ್ಟ್‌ಫೋನ್, ಪದವೀಧರ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್, ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ಶಾಲೆಗಳು  ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರೂ 10,000 ಗೌರವಧನ ನೀಡುವುದಾಗಿ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಲಾಗಿದೆ.
ಈ ಕ್ರಮವು ಇತರ ರಾಜಕೀಯ ಪಕ್ಷಗಳಿಗೆ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಲಿ ಎಂದು ಎಂದು  ಆಶಿಸಿದ ಪ್ರಿಯಾಂಕಾ “ಈ ಕ್ರಮವು ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ಹಕ್ಕುಗಳನ್ನು ಪಡೆಯಲು ಸಹಾಯ ಮಾಡುತ್ತದೆ” ಎಂದಿದ್ದಾರೆ. ಅದೇ ವೇೆಳೆ 2022ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಉತ್ತರ ಪ್ರದೇಶದ ಮಹಿಳೆಯರು ಸಹಾಯ ಮಾಡುತ್ತಾರೆ ಎಂದು ಪ್ರಿಯಾಂಕಾ ಆಶಿಸಿದ್ದಾರೆ.

ಇದನ್ನೂ ಓದಿ:  ಉತ್ತರ ಪ್ರದೇಶ ಶಿಯಾ ವಕ್ಫ್​ ಮಂಡಳಿ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಹಿಂದು ಧರ್ಮಕ್ಕೆ ಮತಾಂತರ; ಜೀವ ಬೆದರಿಕೆ ಹೆಚ್ಚಾದ ಬೆನ್ನಲ್ಲೇ ಧರ್ಮ ಬದಲಾವಣೆ

Published On - 1:27 pm, Wed, 8 December 21