ಉತ್ತರಾಖಂಡ್ ಕಾಂಗ್ರೆಸ್ ನಾಯಕ ಹರೀಶ್ ರಾವತ್ (Harish Rawat) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದೊಂದು ಸೇನಾ ಕೇಂದ್ರ. ಅಲ್ಲೊಬ್ಬ ಮತದಾರ ಹಲವು ಅಂಚೆ ಮತಪತ್ರಗಳಿಗೆ (ಪೋಸ್ಟಲ್ ಬ್ಯಾಲೆಟ್ ಪೇಪರ್)ಗುರುತು ಮತ್ತು ಸಹಿ ಮಾಡುವುದನ್ನು ನೋಡಬಹುದಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಹರೀಶ್ ರಾವತ್ ವಿಡಿಯೋವನ್ನು ಶೇರ್ ಮಾಡಿಕೊಂಡು, ನಾನಿದನ್ನು ನಿಮ್ಮೆಲ್ಲರ ಗಮನಕ್ಕೆ ಇರಲಿ ಎಂದು ಶೇರ್ ಮಾಡುತ್ತಿದ್ದೇನೆ. ಇಲ್ಲಿ ಒಬ್ಬನೇ ವ್ಯಕ್ತಿ ಹಲವು ಮತಪತ್ರಗಳಲ್ಲಿ ಪಕ್ಷಕ್ಕೆ ಗುರುತು ಹಾಕುವುದನ್ನು ಮತ್ತು ಸಹಿ ಹಾಕುವುದನ್ನು ನೋಡಬಹುದು. ಅಂದರೆ ಬೇರೆಯವರ ಹೆಸರಿಗೆ ಕಳಿಸಲಾದ ಮತಪತ್ರಕ್ಕೂ ಈ ವ್ಯಕ್ತಿಯೇ ಗುರುತು ಮಾಡುತ್ತಿದ್ದಾರೆ. ಅವರಂತೆಯೇ ಸಹಿಯನ್ನೂ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಮನಿಸಿ, ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಕೇಳಿದ್ದಾರೆ.
ಈ ವಿಡಿಯೋ ಬಗ್ಗೆ ಮಾಧ್ಯಮದವರು ಪ್ರಶ್ನೆ ಎತ್ತಿದರೆ ಅದು ಯಾರು ಕಳಿಸಿದ್ದು, ಎಲ್ಲಿ ಸಿಕ್ಕಿದ್ದು ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಹರೀಶ್ ರಾವತ್ ಅವರ ವಕ್ತಾರ ಸುರೇಂದ್ರ ಕುಮಾರ್ ನಿರಾಕರಿಸಿದ್ದಾರೆ. ಆದರೆ ಇದು ಉತ್ತರಾಖಂಡ್ನಲ್ಲಿ ನಡೆದ ಘಟನೆಯ ವಿಡಿಯೋ ಎಂದು ಹೇಳಿದ್ದಾರೆ. ವಿಡಿಯೋ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಯಾವುದೇ ದೂರು ನೀಡಿಲ್ಲ. ಆದರೆ ಈ ಬಗ್ಗೆ ಆಯೋಗವೇ ಸುಮೊಟೊ ಪ್ರಕರಣ ಕೈಗೆತ್ತಿಕೊಳ್ಳಬಹುದು ಎಂದೂ ಹೇಳಿದ್ದಾರೆ.
ಉತ್ತರಾಖಂಡ್ ವಿಧಾನಸಭೆ ಪ್ರತಿಪಕ್ಷ ನಾಯಕ ಪ್ರೀತಮ್ ಸಿಂಗ್ ಕೂಡ ಇದೇ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸೇನಾ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬರು ಹಲವು ಮತಪತ್ರಗಳಿಗೆ ಗುರುತು ಮಾಡಿ, ಸಹಿ ಹಾಕುತ್ತಿದ್ದಾರೆ. ಇದು ಪ್ರಜಾಪ್ರಭುತ್ವವನ್ನೇ ಅಣುಕಿಸಿದಂತಿದೆ. ತನಗೆ ಯಾವ ಪಕ್ಷ ಬೇಕೋ, ಅದೇ ಪಕ್ಷದ ಎದುರು ಎಲ್ಲ ಮತಪತ್ರಗಳಲ್ಲೂ ಗುರುತು ಹಾಕಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
एक छोटा #वीडियो सबकी जानकारी के लिए वायरल कर रहा हूंँ, इसमें एक #आर्मी के सेंटर में किस प्रकार से एक ही व्यक्ति सारे #वोटों को टिक कर रहा है और यहां तक कि सभी लोगों के हस्ताक्षर भी वही कर रहा है, उसका एक नमूना देखिए, क्या इलेक्शन कमिशन इसका संज्ञान लेना चाहेगा?@UttarakhandCEO pic.twitter.com/yAd4UVPpLh
— Harish Rawat (@harishrawatcmuk) February 22, 2022
ಕಾಂಗ್ರೆಸ್ನದ್ದೇ ಟ್ರಿಕ್ !:
ಹೀಗೆಂದು ಬಿಜೆಪಿ ಆರೋಪ ಮಾಡಿದೆ. ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಉತ್ತರಾಖಂಡ ಪ್ರಾದೇಶಿಕ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್, ಜನರನ್ನು ತಪ್ಪುದಾರಿಗೆ ಎಳೆಯಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಮನದಟ್ಟು ಮಾಡಿಕೊಂಡಿದೆ. ಈ ಹಿಂದೆ ಇವಿಎಂ ದುರ್ಬಳಕೆ ಬಗ್ಗೆ ಮಾತನಾಡುತ್ತಿತ್ತು. ಇದೀಗ ಮತಪತ್ರಗಳ ಬಗ್ಗೆಯೂ ತಕರಾರು ಎತ್ತುತ್ತಿದೆ. ಇವೆಲ್ಲ ಕಾಂಗ್ರೆಸ್ನ ಹತಾಶೆಯ ತಂತ್ರಗಳಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ ಹುತಾತ್ಮ; ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವ ಮಾಹಿತಿ