ಅಬ್ಬಬ್ಬಾ ಲಾಟರಿ! ತನ್ನ ಕಂಪನಿ ನಡೆಸಿದ್ದ ಲಕ್ಕಿ ಡ್ರಾದಲ್ಲಿ ಚೀನಾ ಉದ್ಯೋಗಿಯೊಬ್ಬ ಇಡೀ ವರ್ಷದ 365 ದಿನಗಳನ್ನೂ ಗಳಿಕೆ ರಜೆಯಾಗಿ ಗೆದ್ದುಬಿಟ್ಟ!

|

Updated on: Apr 15, 2023 | 7:30 PM

Luck: ಅಬ್ಬಬ್ಬಾ ಲಾಟರಿ! ತಾನು ಕೆಲಸ ಮಾಡುವ ಕಂಪನಿ ನಡೆಸಿದ್ದ ಲಕ್ಕಿ ಡ್ರಾದಲ್ಲಿ ಚೀನಾ ಉದ್ಯೋಗಿ ಇಡೀ ವರ್ಷದ 365 ದಿನಗಳನ್ನೂ ಗಳಿಕೆ ರಜೆಯಾಗಿ ಗೆದ್ದುಬಿಟ್ಟ! ಅಲ್ಲಿಗೆ - ಇಡೀ ವರ್ಷದ 365 ದಿನಗಳೂ ವೇತನ ಸಹಿತ ರಜೆ ಆತನಿಗೆ.

ಅಬ್ಬಬ್ಬಾ ಲಾಟರಿ! ತನ್ನ ಕಂಪನಿ ನಡೆಸಿದ್ದ ಲಕ್ಕಿ ಡ್ರಾದಲ್ಲಿ ಚೀನಾ ಉದ್ಯೋಗಿಯೊಬ್ಬ ಇಡೀ ವರ್ಷದ 365 ದಿನಗಳನ್ನೂ ಗಳಿಕೆ ರಜೆಯಾಗಿ ಗೆದ್ದುಬಿಟ್ಟ!
ಕಂಪನಿ ನಡೆಸಿದ್ದ ಲಕ್ಕಿ ಡ್ರಾದಲ್ಲಿ ಚೀನಾ ಉದ್ಯೋಗಿಯೊಬ್ಬ ಇಡೀ ವರ್ಷದ 365 ದಿನಗಳನ್ನೂ ಗಳಿಕೆ ರಜೆಯಾಗಿ ಗೆದ್ದುಬಿಟ್ಟ!
Follow us on

ಬಹುತೇಕ ಕಡೆಗಳಲ್ಲಿ ಸಂಸ್ಥೆಯ ಬಾಸ್ ಒಂದು ದಿನದ ರಜೆ ಕೊಡುವುದಕ್ಕೂ ನಿಮ್ಮನ್ನು ಚೆನ್ನಾಗಿ ಆಟ ಆಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಇದು ಎಲ್ಲ ಕಂಪನಿಗಳ ವಾಸ್ತವ ಅಲ್ಲ. ಕೆಲವು ಕಂಪನಿಗಳಲ್ಲಿ ದಾರಾಳ ಮನಸಿನ ಬಾಸೂ ಇರುತ್ತಾರೆ. ಕೇಳಿದ ತಕ್ಷಣ ರಜೆ ಕೊಡುವ ಉದಾರಿ ಬಾಸೂ ಇರುತ್ತಾರೆ. ಆದರೆ ನೆರೆಯ ಕೊರೊನಾ ಪೀಡಿತ ಚೀನಾದಲ್ಲಿ ಕಂಪನಿಯೊಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಒಬ್ಬ ಉದ್ಯೋಗಿಗೆ ಇಡೀ ವರ್ಷದುದ್ದಕ್ಕೂ ರಜೆ ಕೊಟ್ಟುಬಿಟ್ಟಿದೆ. ಇದಕ್ಕೆ ಆ ಉದ್ಯೋಗಿಯ ಅದೃಷ್ಟ ಸಾಥ್​ ಕೊಟ್ಟಿದೆ ಎಂಬುದು ಗಮನಾರ್ಹ.

ಇನ್ನು ಟುಡೇ ಆನ್‌ಲೈನ್‌ ವರದಿಯ ಪ್ರಕಾರ, ಔತಣಕೂಟದ ಸಮಯದಲ್ಲಿ ಕಂಪನಿಯು ಆಯೋಜಿಸಿದ್ದ ಲಕ್ಕಿ ಡ್ರಾ ದಲ್ಲಿ ಬಹುಮಾನಗಳೂ ಇದ್ದವು ಮತ್ತು ದಂಡದ ಮೊತ್ತಗಳೂ ಇದ್ದವು! ಜಾಕ್‌ಪಾಟ್ ಬಹುಮಾನವನ್ನು ಗಳಿಸುವ ಸಾಧ್ಯತೆ ತೀರಾ ಕಡಿಮೆಯಿದ್ದರೂ, ಒಬ್ಬ ಅದೃಷ್ಟಶಾಲಿ ಉದ್ಯೋಗಿ ಮಾತ್ರ ಇಡೀ ಒಂದು ವರ್ಷದ ಕೆಲಸದ ದಿನಗಳನ್ನು ಗಳಿಕೆ ರಜೆಗಳನ್ನಾಗಿ ಗೆದ್ದುಕೊಂಡಿದ್ದಾರೆ.

ಇತ್ತೀಚೆಗೆ ಚೀನಾದ ಭಾರೀ ಅದೃಷ್ಟಶಾಲಿ ಉದ್ಯೋಗಿಯೊಬ್ಬ ತಾನು ಕೆಲಸ ಮಾಡುವ ಕಂಪನಿ ಆಯೋಜಿಸಿದ್ದ ವಾರ್ಷಿಕ ಔತಣಕೂಟದಲ್ಲಿ ಇಡೀ ಒಂದು ವರ್ಷದ ಕೆಲಸದ ದಿನಗಳನ್ನು ಪಾವತಿಸಿದ ರಜೆಗಳನ್ನಾಗಿ ಗೆದ್ದುಕೊಂಡಿದ್ದಾರೆ. ಇದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. “ವರ್ಷದ 365 ದಿನಗಳೂ ವೇತನ ಸಹಿತ ರಜೆ” ಎಂಬ ಪದಪುಂಜದಲ್ಲಿ ದೈತ್ಯ ಚೆಕ್ ಅನ್ನು ಹಿಡಿದಿರುವ ವ್ಯಕ್ತಿಯ ವೀಡಿಯೊ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ. ಉಫ್​! ಇನ್ನು ಅಸೂಯೆ ಪಡುವ ಸರದಿ ಇತರೆ ಸಹೋದ್ಯೋಗಿಗಳದ್ದಾಗಿದೆ. ನಿಮಗೇನನ್ನಿಸಿತು?

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಕಂಪನಿಯು ಭೋಜನ ಕೂಟವನ್ನು ಆಯೋಜಿಸಿದೆ ಎಂದು ಚೆನ್ ಎಂಬ ಹೆಸರಿನ ಸಂಸ್ಥೆಯ ಉದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದರು. ಉದ್ಯೋಗಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದೇ ಲಕ್ಕಿ ಡ್ರಾ ಯೋಜನೆಯಾಗಿದೆ ಎಂದು ಅವರು ಹೇಳಿದರು. ಇದು ಒಂದು ದಿನ ಅಥವಾ ಎರಡು ಹೆಚ್ಚುವರಿ ಪಾವತಿಸಿದ ಸಮಯ-ವಿರಾಮದಂತಹ ಬಹುಮಾನಗಳನ್ನು ಒಳಗೊಂಡಿತ್ತು. ಆದರೆ ದಂಡಗಳು ಇತರ ವಿಷಯಗಳ ಜೊತೆಗೆ ಸೇವಕನಾಗಿ ಸೇವೆ ಸಲ್ಲಿಸುವುದನ್ನು ಒಳಗೊಂಡಿತ್ತು. ಇಂತಹುದನ್ನು ಯಾರಾದರೂ ಆಯೋಜಿಸುತ್ತಾರೆ ಎಂದು ನಾವು ಎಂದಿಗೂ ಯೋಚಿಸಲಿಲ್ಲ. ಸ್ವತಃ ಕಂಪನಿಯ ಬಾಸ್ ದಿಗ್ಭ್ರಮೆಗೊಂಡರು ಎಂದು ಚೆನ್ ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ