Bank of Baroda Recruitment 2022: ಬ್ಯಾಂಕ್ ಆಫ್ ಬರೋಡಾದಲ್ಲಿದೆ ಉದ್ಯೋಗಾವಕಾಶ

| Updated By: ಝಾಹಿರ್ ಯೂಸುಫ್

Updated on: Apr 09, 2022 | 10:29 PM

Bank of Baroda Recruitment 2022: ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Bank of Baroda Recruitment 2022: ಬ್ಯಾಂಕ್ ಆಫ್ ಬರೋಡಾದಲ್ಲಿದೆ ಉದ್ಯೋಗಾವಕಾಶ
Bank of Baroda Recruitment 2022
Follow us on

Bank of Baroda Recruitment 2022: ಬ್ಯಾಂಕ್ ಆಫ್ ಬರೋಡಾದ ಗ್ರಾಮೀಣ ಮತ್ತು ಅಗ್ರಿ ಬ್ಯಾಂಕಿಂಗ್ ಇಲಾಖೆಯಲ್ಲಿ ಕೃಷಿ ಮಾರ್ಕೆಟಿಂಗ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಏಪ್ರಿಲ್ 26 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Bank of Baroda Recruitment 2022: ನೇಮಕಾತಿ ಎಲ್ಲಿ?
ಕೃಷಿ ಮಾರುಕಟ್ಟೆ ಅಧಿಕಾರಿಯನ್ನು ಪಾಟ್ನಾ, ಚೆನ್ನೈ, ಮಂಗಳೂರು, ನವದೆಹಲಿ, ರಾಜ್‌ಕೋಟ್, ಚಂಡೀಗಢ, ಎರ್ನಾಕುಲಂ, ಕೋಲ್ಕತ್ತಾ, ಮೀರತ್ ಮತ್ತು ಅಹಮದಾಬಾದ್‌ನಲ್ಲಿ ನೇಮಿಸಲಾಗುತ್ತದೆ.

Bank of Baroda Recruitment 2022: ಹುದ್ದೆಯ ವಿವರಗಳು:
ಪಾಟ್ನಾ – 4 ಹುದ್ದೆಗಳು
ಚೆನ್ನೈ – 3 ಹುದ್ದೆಗಳು
ಮಂಗಳೂರು – 2 ಹುದ್ದೆಗಳು
ನವದೆಹಲಿ – 1 ಹುದ್ದೆ
ರಾಜ್ಕೋಟ್ – 2 ಹುದ್ದೆಗಳು
ಚಂಡೀಗಢ – 4 ಹುದ್ದೆಗಳು
ಎರ್ನಾಕುಲಂ – 2 ಹುದ್ದೆಗಳು
ಕೋಲ್ಕತ್ತಾ – 3 ಹುದ್ದೆಗಳು
ಮೀರತ್ – 3 ಹುದ್ದೆಗಳು
ಅಹಮದಾಬಾದ್ – 2 ಹುದ್ದೆಗಳು

Bank of Baroda Recruitment 2022: ಶೈಕ್ಷಣಿಕ ಅರ್ಹತೆ:
ಬ್ಯಾಂಕ್ ಆಫ್ ಬರೋಡಾದಲ್ಲಿ ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳು ಕೃಷಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವೀಧರರಾಗಿರಬೇಕು.

Bank of Baroda Recruitment 2022: ವಯೋಮಿತಿ:
25 ರಿಂದ 40 ವರ್ಷಗಳ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Bank of Baroda Recruitment 2022: ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 26, 2022

Bank of Baroda Recruitment 2022: ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?