Bank of India Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಕ್ರೆಡಿಟ್ ಆಫೀಸರ್ ಹುದ್ದೆಗೆ ನೇಮಕಾತಿ

ಬ್ಯಾಂಕ್ ಆಫ್ ಇಂಡಿಯಾ 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ (MMGS 2, 3, 4) ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪದವಿ, MBA, CA ಅರ್ಹತೆಯುಳ್ಳವರು ಡಿಸೆಂಬರ್ 20 ರಿಂದ ಜನವರಿ 5 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಕರ್ಷಕ ವೇತನ ಶ್ರೇಣಿ ಹೊಂದಿದ್ದು,ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

Bank of India Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಕ್ರೆಡಿಟ್ ಆಫೀಸರ್ ಹುದ್ದೆಗೆ ನೇಮಕಾತಿ
ಬ್ಯಾಂಕ್ ಆಫ್ ಇಂಡಿಯಾ

Updated on: Dec 19, 2025 | 5:30 PM

ಬ್ಯಾಂಕ್ ಆಫ್ ಇಂಡಿಯಾ ಬೃಹತ್​​ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತದ ತನ್ನ ಶಾಖೆಗಳಲ್ಲಿ ಜನರಲ್ ಬ್ಯಾಂಕಿಂಗ್ ಆಫೀಸರ್ ಸ್ಟ್ರೀಮ್‌ನಲ್ಲಿ ನಿಯಮಿತವಾಗಿ ಕ್ರೆಡಿಟ್ ಆಫೀಸರ್ (MMGS 3, MMGS 2, SMGS 4) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 514 ಕ್ರೆಡಿಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 20 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

  • ಕ್ರೆಡಿಟ್ ಆಫೀಸರ್ (SMGS 4) ಹುದ್ದೆಗಳು: 36
  • ಕ್ರೆಡಿಟ್ ಆಫೀಸರ್ (MMGS 3) ಹುದ್ದೆಗಳು: 60
  • ಕ್ರೆಡಿಟ್ ಆಫೀಸರ್ (MMGS 2) ಹುದ್ದೆಗಳು: 418

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪದವಿ, ಎಂಬಿಎ, ಪಿಜಿಡಿಬಿಎಂ, ಪಿಜಿ, ಸಿಎ, ಸಿಎಂಎ ಪದವಿ ಪಡೆದಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಅವರು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಜನವರಿ 5 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ ಮತ್ತು ಸಂಬಳದ ವಿವರ:

ಸಾಮಾನ್ಯ ಅಭ್ಯರ್ಥಿಗಳು 850 ರೂ., ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳು ತಲಾ 175 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಎಂಎಂಜಿಎಸ್ 2 ಹುದ್ದೆಗಳಿಗೆ ರೂ. 64,820 ರಿಂದ ರೂ. 93,960, ಎಸ್‌ಎಂಜಿಎಸ್ 4 ಹುದ್ದೆಗಳಿಗೆ ರೂ. 1,02,300 ರಿಂದ ರೂ. 1,20,940 ಮತ್ತು ಎಂಎಂಜಿಎಸ್ 3 ಹುದ್ದೆಗಳಿಗೆ ರೂ. 85,920 ರಿಂದ ರೂ. 1,05,280 ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Fri, 19 December 25