BNU Recruitment 2025: ಬೆಂಗಳೂರು ನಾರ್ತ್ ಯೂನಿವರ್ಸಿಟಿಯಲ್ಲಿ ನೇಮಕಾತಿ; ಪದವಿಯಿಂದ ಪಿಎಚ್​ಡಿ ವರೆಗಿನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ

ಬೆಂಗಳೂರು ನಾರ್ತ್ ಯೂನಿವರ್ಸಿಟಿ 2025ರ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಸಹಾಯಕ ಗ್ರಂಥಪಾಲಕ ಮತ್ತು ದೈಹಿಕ ನಿರ್ದೇಶಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಎಂಪಿಇಡಿ/ಪಿಜಿ, ಎಂ.ಎಲ್.ಐ.ಎಸ್.ಸಿ/ಪಿಎಚ್.ಡಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಮಾಸಿಕ 30,000-41,000 ರೂ. ವೇತನ ಲಭ್ಯ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಉದ್ಯೋಗಾವಕಾಶ. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ.

BNU Recruitment 2025: ಬೆಂಗಳೂರು ನಾರ್ತ್ ಯೂನಿವರ್ಸಿಟಿಯಲ್ಲಿ ನೇಮಕಾತಿ; ಪದವಿಯಿಂದ ಪಿಎಚ್​ಡಿ ವರೆಗಿನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ
ಬೆಂಗಳೂರು ನಾರ್ತ್ ಯೂನಿವರ್ಸಿಟಿ

Updated on: Nov 21, 2025 | 5:19 PM

ಬೆಂಗಳೂರು ನಾರ್ತ್ ಯೂನಿವರ್ಸಿಟಿ ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಗ್ರಂಥಪಾಲಕ, ದೈಹಿಕ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಉದ್ಯೋಗ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 30ರ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಬೆಂಗಳೂರು ನಾರ್ತ್ ಯೂನಿವರ್ಸಿಟಿ ಹುದ್ದೆಗಳ ಅಧಿಸೂಚನೆ:

  • ಹುದ್ದೆಗಳ ಸಂಖ್ಯೆ: 5
  • ಉದ್ಯೋಗ ಸ್ಥಳ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು
  • ಹುದ್ದೆ ಹೆಸರು: ಸಹಾಯಕ ಗ್ರಂಥಪಾಲಕ, ದೈಹಿಕ ನಿರ್ದೇಶಕ
  • ಸಂಬಳ: ತಿಂಗಳಿಗೆ 30,000 – 41,000 ರೂ.

ಶೈಕ್ಷಣಿಕ ಅರ್ಹತೆಯ ವಿವರಗಳು:

ಬೆಂಗಳೂರು ನಾರ್ತ್ ಯೂನಿವರ್ಸಿಟಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಬಿಇ/ ಬಿ.ಟೆಕ್, ಎಂಪಿಇಡಿ/ ಪಿಜಿ, ಎಂ.ಎಲ್.ಐ.ಬಿ/ ಎಂ.ಎಲ್.ಐ.ಎಸ್.ಸಿ/ ಪಿಎಚ್.ಡಿ ಪೂರ್ಣಗೊಸಿರುವವರಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳು: 500 ರೂ.
  • BC ಅಭ್ಯರ್ಥಿಗಳು: 250 ರೂ.
  • ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು: 100 ರೂ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ರೈಲ್ವೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ; 10th ಪಾಸಾಗಿದ್ರೆ ಸಾಕು

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ಬೆಂಗಳೂರು ನಾರ್ತ್ ಯೂನಿವರ್ಸಿಟಿಯ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.(Bengaluru-North-University-Recruitment-2025-Apply-for-5-Assistant-Librarian-Physical-Director-Posts-Notification-Appplication-form)
  • ಮೇಲಿನ ಲಿಂಕ್‌ನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಲಾದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
  • ಕೊನೆಗೆ ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ ಕಳುಹಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ