BHU Recruitment 2025: ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನೇಮಕಾತಿ; ಲಿಖಿತ ಪರೀಕ್ಷೆಯಿಲ್ಲದೆ ಆಯ್ಕೆ

ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಟ್ರಯಲ್ ಮ್ಯಾನೇಜರ್ (ರಿಸರ್ಚ್ ಅಸೋಸಿಯೇಟ್) ಮತ್ತು ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ/ಪಿಎಚ್‌ಡಿ ಮತ್ತು ಕೆಲಸದ ಅನುಭವ ಹೊಂದಿರುವವರು ಡಿಸೆಂಬರ್ 5ರೊಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ತಿಂಗಳಿಗೆ 80 ಸಾವಿರ ರೂ. ವೇತನ ಸಿಗಲಿದೆ.

BHU Recruitment 2025: ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನೇಮಕಾತಿ; ಲಿಖಿತ ಪರೀಕ್ಷೆಯಿಲ್ಲದೆ ಆಯ್ಕೆ
ಬನಾರಸ್ ಹಿಂದೂ ವಿಶ್ವವಿದ್ಯಾಲಯ

Updated on: Dec 02, 2025 | 5:44 PM

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಐತಿಹಾಸಿಕ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಟ್ರಯಲ್ ಮ್ಯಾನೇಜರ್ (ರಿಸರ್ಚ್ ಅಸೋಸಿಯೇಟ್) ಮತ್ತು ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 5ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಹುದ್ದೆಯ ವಿವರಗಳು ಈ ಕೆಳಗಿನಂತಿವೆ:

  • ಟ್ರಯಲ್ ಮ್ಯಾನೇಜರ್ (ರಿಸರ್ಚ್ ಅಸೋಸಿಯೇಟ್) ಹುದ್ದೆಗಳ ಸಂಖ್ಯೆ: 1
  • ರಿಸರ್ಚ್ ಫೆಲೋ ಹುದ್ದೆಗಳ ಸಂಖ್ಯೆ: 2

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.55 ಅಂಕಗಳೊಂದಿಗೆ ಸಂಬಂಧಿತ ವಿಭಾಗದಲ್ಲಿ ಎಂಎ, ಎಂ.ಎಸ್ಸಿ, ಪಿಎಚ್‌ಡಿ ಉತ್ತೀರ್ಣರಾಗಿರಬೇಕು. ಜೊತೆಗೆ ಕೆಲಸದ ಅನುಭವವನ್ನು ಸಹ ಹೊಂದಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯಸ್ಸಿನ ಮಿತಿ 28 ವರ್ಷದಿಂದ 42 ವರ್ಷಗಳನ್ನು ಮೀರಬಾರದು. ಎಸ್‌ಸಿ, ಎಸ್‌ಟಿ, ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಐದು ವರ್ಷಗಳವರೆಗೆ ಸಡಿಲಿಕೆ ಇದೆ.

ಇದನ್ನೂ ಓದಿ: 25,487 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ; 10 ನೇ ತರಗತಿ ಪಾಸಾಗಿದ್ರೆ ಸಾಕು

ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು createindia2025@gmail.com ಗೆ ಇಮೇಲ್ ಮೂಲಕ ಕಳುಹಿಸಬೇಕು. ಅರ್ಜಿಗಳನ್ನು ಡಿಸೆಂಬರ್ 5ರೊಳಗೆ ಕಳುಹಿಸಬೇಕು. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಟ್ರಯಲ್ ಮ್ಯಾನೇಜರ್ ಹುದ್ದೆಗಳಿಗೆ ತಿಂಗಳಿಗೆ ರೂ. 80 ಸಾವಿರ ಮತ್ತು ರಿಸರ್ಚ್ ಫೆಲೋ ಹುದ್ದೆಗಳಿಗೆ ತಿಂಗಳಿಗೆ ರೂ. 60 ಸಾವಿರ ವೇತನವನ್ನು ನೀಡಲಾಗುತ್ತದೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉದ್ಯೋಗ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Tue, 2 December 25