DHFWS Yadgir Recruitment 2025: ಎಸ್​​ಎಸ್​ಎಲ್​ಸಿ, ಪಿಯುಸಿ ಪಾಸ್ ಆದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗವಕಾಶ

ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (ಡಿಎಚ್‌ಎಫ್‌ಡಬ್ಲ್ಯುಎಸ್)ವು 21 ಕೀಟ ಸಂಗ್ರಾಹಕ ಮತ್ತು ಸ್ವಯಂಸೇವಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪಾಸಾದ ಅಭ್ಯರ್ಥಿಗಳು ಜೂನ್ 9 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು. ತಿಂಗಳಿಗೆ ರೂ. 15114 ಸಂಬಳ. ಯಾದಗಿರಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ.

DHFWS Yadgir Recruitment 2025: ಎಸ್​​ಎಸ್​ಎಲ್​ಸಿ, ಪಿಯುಸಿ ಪಾಸ್ ಆದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗವಕಾಶ
Dhfws Yadgir Recruitment

Updated on: May 31, 2025 | 2:45 PM

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿಯು ಅಧಿಕೃತ ಅಧಿಸೂಚನೆಯ ಮೂಲಕ ಕೀಟ ಸಂಗ್ರಾಹಕ, ಸ್ವಯಂಸೇವಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವಿಶೇಷವಾಗಿ ನೀವು ಯಾದಗಿರಿಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪಾಸ್​​ ಆದವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಜೂನ್ 09 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

DHFWS ಯಾದಗಿರಿ ಹುದ್ದೆಯ ಅಧಿಸೂಚನೆ:

  • ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ( DHFWS )
  • ಹುದ್ದೆಗಳ ಸಂಖ್ಯೆ: 21
  • ಉದ್ಯೋಗ ಸ್ಥಳ: ಯಾದಗಿರಿ – ಕರ್ನಾಟಕ
  • ಹುದ್ದೆ ಹೆಸರು: ಕೀಟ ಸಂಗ್ರಾಹಕ, ಸ್ವಯಂಸೇವಕರು
  • ಸಂಬಳ: ತಿಂಗಳಿಗೆ ರೂ.15114/-

ಇದನ್ನೂ ಓದಿ: ವಿದೇಶದಲ್ಲಿ MBBS ಓದುವ ಭಾರತೀಯರ ಗಮನಕ್ಕೆ, ಈ ವಿಷ್ಯ ಗೊತ್ತಿಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ

ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣ, ಯಾದಗಿರಿ.

ಕೀಟ ಸಂಗ್ರಾಹಕ ಹುದ್ದೆಯ ಕರ್ತವ್ಯಗಳು, ನಿಬಂಧನೆಗಳು:

  • ನಗರ/ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆ/ಕೀಟಗಳ ಸಂಗ್ರಹಣೆಗಾಗಿ ಮುಂಜಾನೆ 05:00 ಗಂಟೆ ಹಾಗೂ ರಾತ್ರಿ 08:00ರ ಸಮಯದಲ್ಲಿ ಕಾರ್ಯನಿರ್ವಹಿಸುವುದು, ಸಂದರ್ಭಕ್ಕೆ ಅನುಸಾರವಾಗಿ ವಾಸ್ತವ್ಯವಾಗಿರಬೇಕು.
  • ತಿಂಗಳಲ್ಲಿ ಕನಿಷ್ಠ 16ದಿನ ಪ್ರವಾಸ ಮಾಡುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ವಿವರಗಳನ್ನು ಕಛೇರಿಯಲ್ಲಿ ಪಡೆಯಬಹುದಾಗಿದೆ.
  • ಕಂಪ್ಯೂಟರ್​​ ನಿರ್ವಹಣೆಯ ಜ್ಞಾನ ಹೊಂದಿರಬೇಕು.
  • ಸದರಿ ಹುದ್ದೆಯು ಗುತ್ತಿಗೆ ಅವಧಿಗೆ ಸೀಮಿತವಾಗಿದ್ದು ಖಾಯಂ ಎಂದು ಪರಿಗಣಿಸುವುದಿಲ್ಲ.
  • ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು.

ಕೀಟ ಸಂಗ್ರಾಹಕ ಹುದ್ದೆಗಾಗಿ 100ದಿನಗಳ ಅವಧಿಗೆ ಸೂಕ್ತ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ನೇರ ಸಂದರ್ಶವನ್ನು ಕರೆಯಲಾಗಿದ್ದು ಆಸಕ್ತಿಉಳ್ಳವ ಅಭ್ಯರ್ಥಿಗಳು (ಪ್ರತಿ ದಿನ ಗೌರವಧನ 400/-) ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಸಭಾಂಗಣದಲ್ಲಿ ದಿನಾಂಕ:04.06.2025ರ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 05:00 ರೊಳಗಾಗಿ ನೇರ ಸಂದರ್ಶನದ (Walk In Interview) ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಅಧಿಸೂಚನೆಯಲ್ಲಿ ಓದಿ: 21-Insect-Collector-Volunteers-Posts-Advt-Details-DHFWS-Yadgir

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Sat, 31 May 25