BDL Recruitment 2022: ಬಿಡಿಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Jul 18, 2022 | 3:23 PM

BDL Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bdl-india.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

BDL Recruitment 2022: ಬಿಡಿಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
jobs
Follow us on

Govt Jobs 2022 : ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಸಹಾಯಕ ವ್ಯವಸ್ಥಾಪಕ, ಹಿರಿಯ ಶಿಕ್ಷಣ ವ್ಯವಸ್ಥಾಪಕ ಮತ್ತು ಇತರೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಜೂನ್ 16 ರಿಂದ ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bdl-india.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಇಲ್ಲಿ ಒಟ್ಟು 18 ಹುದ್ದೆಗಳು ಖಾಲಿಯಿದ್ದು, ಅದರಂತೆ
ಜನರಲ್ ಮ್ಯಾನೇಜರ್ ಎಚ್‌ಆರ್, ಡೆಪ್ಯುಟಿ ಜನರಲ್ ಮ್ಯಾನೇಜರ್ (ಸಿವಿಲ್), ಸೀನಿಯರ್ ಮ್ಯಾನೇಜರ್ (Explosive), ಮ್ಯಾನೇಜರ್ (Explosive), ಡೆಪ್ಯುಟಿ ಮ್ಯಾನೇಜರ್ (ಸಿವಿಲ್), ಡೆಪ್ಯುಟಿ ಮ್ಯಾನೇಜರ್ (Explosive), ಸಹಾಯಕ ವ್ಯವಸ್ಥಾಪಕರು (ಸಿವಿಲ್), ಡೆಪ್ಯುಟಿ ಮ್ಯಾನೇಜರ್ (Explosive), ಅಸಿಸ್ಟೆಂಟ್ ಮ್ಯಾನೇಜರ್ (ಸಿವಿಲ್), ಅಸಿಸ್ಟೆಂಟ್ ಮ್ಯಾನೇಜರ್ (Explosive), ಜೂನಿಯರ್ ಮ್ಯಾನೇಜರ್ (ರಷ್ಯನ್/ಇಂಗ್ಲಿಷ್ ಅನುವಾದ) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ವಿವರಗಳು:

  • ಜನರಲ್ ಮ್ಯಾನೇಜರ್ (HR) – 1 ಹುದ್ದೆ
  • ಡೆಪ್ಯುಟಿ ಜನರಲ್ ಮ್ಯಾನೇಜರ್ (ಸಿವಿಲ್) – 1 ಹುದ್ದೆ
  • ಸೀನಿಯರ್ ಮ್ಯಾನೇಜರ್ (ಸಿವಿಲ್) – 2 ಹುದ್ದೆ
  • ಸೀನಿಯರ್ ಮ್ಯಾನೇಜರ್ (Explosive) – 3 ಹುದ್ದೆಗಳು
  • ಮ್ಯಾನೇಜರ್ (Explosive)- 1 ಹುದ್ದೆ
  • ಡೆಪ್ಯುಟಿ ಮ್ಯಾನೇಜರ್ (ಸಿವಿಲ್) – 1 ಹುದ್ದೆ
  • ಡೆಪ್ಯೂಟಿ ಮ್ಯಾನೇಜರ್ (Explosive) – 4 ಹುದ್ದೆಗಳು
  • ಸಹಾಯಕ ವ್ಯವಸ್ಥಾಪಕ (ಸಿವಿಲ್ / ಸ್ಫೋಟಕಗಳು) – 3 ಹುದ್ದೆಗಳು
  • ಜೂನಿಯರ್ ಮ್ಯಾನೇಜರ್ (ರಷ್ಯನ್ / ಇಂಗ್ಲಿಷ್ ಅನುವಾದ) – 1 ಹುದ್ದೆ

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳು / ಸಂಸ್ಥೆಯಿಂದ ಸಿವಿಲ್‌ನಲ್ಲಿ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪ್ರಥಮ ದರ್ಜೆ ಪದವಿ (ಅಥವಾ 05 ವರ್ಷಗಳ ಸಮಗ್ರ ಕೋರ್ಸ್) ಪಡೆದಿರಬೇಕು. ಇದಾಗ್ಯೂ ಆಯಾ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಈ ಬಗ್ಗೆಗಿನ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ
ರಾಜ್ಯ ಬೀಜ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 42 ಸಾವಿರ ರೂ.
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
Indian Navy recruitment 2022: ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ವೇತನ:

  • ಡೆಪ್ಯುಟಿ ಜನರಲ್ ಮ್ಯಾನೇಜರ್ (ಸಿವಿಲ್/ಎಚ್‌ಆರ್) – ರೂ. 28.58 ಲಕ್ಷ
  • ಸೀನಿಯರ್ ಮ್ಯಾನೇಜರ್ ಸಿವಿಲ್/Explosive – ರೂ 20.10 ಲಕ್ಷ
  • ಮ್ಯಾನೇಜರ್ (Explosive) – ರೂ 17.27 ಲಕ್ಷ ಡೆಪ್ಯುಟಿ
  • ಮ್ಯಾನೇಜರ್ ಸ್ಫೋಟಕಗಳು/ ಸಿವಿಲ್ – ರೂ 14.44 ಲಕ್ಷ
  • ಅಸಿಸ್ಟೆಂಟ್ ಮ್ಯಾನೇಜರ್ (Explosive)/ ಸಿವಿಲ್- 1 ಲಕ್ಷ ರೂ.
  • ಮ್ಯಾನೇಜರ್ (ರಷ್ಯನ್/ಇಂಗ್ಲಿಷ್ ಅನುವಾದ) – ರೂ 8.78 ಲಕ್ಷ

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 16, 2022

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.