Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ

Agnipath Recruitment 2022: ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ​​/ ಯುದ್ದ ಸಾಮಗ್ರಿ) ಹುದ್ದೆಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಶೇ.50 ಅಂಕಗಳೊಂದಿಗೆ 12ನೇ ತರಗತಿ ತೇರ್ಗಡೆಯಾಗಿರಬೇಕು.

Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
Agniveer Recruitment 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jun 20, 2022 | 3:38 PM

Agnipath Recruitment 2022, Agniveer Bharti Rally Notification: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್‌ಗಳ ನೇಮಕಾತಿಗಾಗಿ (Agniveer Recruitment 2022) ಭಾರತೀಯ ಸೇನೆಯು ಅಧಿಸೂಚನೆಯನ್ನು ಹೊರಡಿಸಿದೆ. ಸೇನೆಯ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಜುಲೈನಿಂದ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡುವ ಮೂಲಕ  ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ವಿವರಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  1. ಅಗ್ನಿವೀರ್ ಜನರಲ್ ಡ್ಯೂಟಿ
  2. ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ​​/ ಯುದ್ದ ಸಾಮಗ್ರಿ)
  3. ಇದನ್ನೂ ಓದಿ
    Image
    HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
    Image
    IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
    Image
    Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
    Image
    ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ
  4. ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್
  5. ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (10ನೇ ತರಗತಿ ಪಾಸ್ ಆದವರಿಗೆ)
  6. ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (8ನೇ ತರಗತಿ ಪಾಸ್ ಆದವರಿಗೆ)

ವಿದ್ಯಾರ್ಹತೆಗಳು:

  1. – ಜನರಲ್ ಡ್ಯೂಟಿ ಹುದ್ದೆಗಳಿಗೆ ನೇಮಕಾತಿಗಾಗಿ ಅಭ್ಯರ್ಥಿಗಳು ಕನಿಷ್ಠ 45% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  2. – ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ​​/ ಯುದ್ದ ಸಾಮಗ್ರಿ) ಹುದ್ದೆಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಶೇ.50 ಅಂಕಗಳೊಂದಿಗೆ 12ನೇ ತರಗತಿ ತೇರ್ಗಡೆಯಾಗಿರಬೇಕು.
  3. – ಕ್ಲರ್ಕ್ / ಸ್ಟೋರ್‌ಕೀಪರ್ ಹುದ್ದೆಗಳಿಗೆ, ಅಭ್ಯರ್ಥಿಗಳು ಯಾವುದೇ ಸ್ಟ್ರೀಮ್‌ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇಂಗ್ಲಿಷ್ ಮತ್ತು ಗಣಿತದಲ್ಲಿ 50% ಅಂಕಗಳನ್ನು ಹೊಂದಿರಬೇಕು.
  4. – 10 ನೇ ಮತ್ತು 8 ನೇ ಉತ್ತೀರ್ಣರಾದವರನ್ನು ಟ್ರೇಡ್ಸ್‌ಮ್ಯಾನ್​ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ವಿಷಯಗಳಲ್ಲಿ 33% ಅಂಕಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ವಯೋಮಿತಿ:

ಈ ಎಲ್ಲಾ ಹುದ್ದೆಗಳಿಗೆ 17.5 ವರ್ಷದಿಂದ 23 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಪ್ರಕ್ರಿಯೆ: ಅಧಿಸೂಚನೆಯ ಪ್ರಕಾರ, ಲಭ್ಯವಿರುವ ಖಾಲಿ ಹುದ್ದೆಗಳ ಆಧಾರದ ಮೇಲೆ ನೇಮಕಾತಿಗಳು ನಡೆಯಲಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಮೆರಿಟ್ ಆಧಾರದ ಮೇಲೆ ನಡೆಯಲಿದೆ. ಹೀಗಾಗಿ ಕೇವಲ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದ ಮಾತ್ರಕ್ಕೆ ಸೇನೆಯಲ್ಲಿ ಅವಕಾಶ ಸಿಗುವುದಿಲ್ಲ. ಅರ್ಹ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ವೇತನ: ಈ ನೇಮಕಾತಿ ಅಡಿಯಲ್ಲಿ ಅಭ್ಯರ್ಥಿಗಳನ್ನು 4 ವರ್ಷಗಳಿಗಾಗಿ ಆಯ್ಕೆ ಮಾಡಲಾಗುತ್ತದೆ . ಅದರಂತೆ ವೇತನವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ..

  1. ಮೊದಲ ವರ್ಷದ ವೇತನ- ರೂ. 30,000/ ಮತ್ತು ಭತ್ಯೆಗಳು
  2. ಎರಡನೇ ವರ್ಷದ ವೇತನ- ರೂ. 33,000/- ಮತ್ತು ಭತ್ಯೆಗಳು
  3. ಮೂರನೇ ವರ್ಷದ ವೇತನ- ರೂ. 36,500/- ವೇತನ ಮತ್ತು ಭತ್ಯೆಗಳು
  4. ಕೊನೆಯ ವರ್ಷದ ವೇತನ- ರೂ 40,000/- ವೇತನ ಮತ್ತು ಭತ್ಯೆಗಳು

ವಿಶೇಷ ಭತ್ಯೆ: ವಾರ್ಷಿಕ ವೇತನ ಪ್ಯಾಕೇಜ್ ಹೊರತುಪಡಿಸಿ, ಅಗ್ನಿವೀರರಿಗೆ ಕೆಲವು ಭತ್ಯೆಗಳನ್ನು ಸಹ ನೀಡಲಾಗುತ್ತದೆ. ಇವುಗಳಲ್ಲಿ ವಿಮೆ, ಪಡಿತರ, ಉಡುಗೆ ಮತ್ತು ಪ್ರಯಾಣ ಭತ್ಯೆ ಸೇರಿವೆ. ಇನ್ನು ‘ಸೇವಾ ನಿಧಿ’ ಸಂಪೂರ್ಣ ಆದಾಯ ತೆರಿಗೆ ಮುಕ್ತವಾಗಲಿದೆ. ಹಾಗೆಯೇ ಅಗ್ನಿವೀರರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿಯ ಲಾಭವೂ ಸಿಗಲಿದೆ. ಇನ್ನು ತಮ್ಮ ಸೇವಾ ಅವಧಿಯಲ್ಲಿ 48 ಲಕ್ಷ ರೂಪಾಯಿಗಳ ಕೊಡುಗೆ ರಹಿತ ಜೀವ ವಿಮಾ ರಕ್ಷಣೆಯನ್ನು ಸಹ ಪಡೆಯುತ್ತಾರೆ. ಸೇವೆಯಲ್ಲಿದ್ದಾಗ ಹುತಾತ್ಮರಾದರೆ ಹೆಚ್ಚುವರಿಯಾಗಿ 44 ಲಕ್ಷ ರೂ. ನೀಡಲಾಗುತ್ತದೆ.

ಪ್ರಮಾಣ ಪತ್ರ: ನಾಲ್ಕು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅಗ್ನಿವೀರರು ಸೇವಾ ನಿಧಿ ಪ್ಯಾಕೇಜ್, ಅಗ್ನಿವೀರ್ ಕೌಶಲ್ಯ ಪ್ರಮಾಣಪತ್ರ ಮತ್ತು 12 ನೇ ತರಗತಿಯ ಸಮಾನ ಅರ್ಹತಾ ಪ್ರಮಾಣಪತ್ರವನ್ನು ಪಡೆಯುತ್ತಾರೆ. 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು 4 ವರ್ಷಗಳ ನಂತರ 12ನೇ ತತ್ಸಮಾನ ಪಾಸ್ ಪ್ರಮಾಣಪತ್ರವನ್ನು ಪಡೆಯುತ್ತಾರೆ.

NCC ಪ್ರಮಾಣಪತ್ರ ಹೊಂದಿರುವವರಿಗೆ ಬೋನಸ್ ಅಂಕಗಳು: ಈ ಎಲ್ಲಾ ಹುದ್ದೆಗಳ ನೇಮಕಾತಿಗಾಗಿ NCC A ಪ್ರಮಾಣಪತ್ರ ಹೊಂದಿರುವವರಿಗೆ 05 ಬೋನಸ್ ಅಂಕಗಳನ್ನು ನೀಡಲಾಗುತ್ತದೆ. NCC B ಪ್ರಮಾಣಪತ್ರ ಹೊಂದಿರುವವರು 10 ಬೋನಸ್ ಅಂಕಗಳನ್ನು ಪಡೆಯಲಿದ್ದಾರೆ. ಹಾಗೆಯೇ NCC C ಪ್ರಮಾಣಪತ್ರ ಹೊಂದಿರುವವರಿಗೆ 15 ಬೋನಸ್ ಅಂಕಗಳನ್ನು ಸಿಗಲಿದೆ. ಅಗ್ನಿವೀರ್ ಜನರಲ್ ಡ್ಯೂಟಿ ಮತ್ತು ಕ್ಲರ್ಕ್/ಸ್ಟೋರ್ಕೀಪರ್ ಹುದ್ದೆಗಳಿಗೆ ಎನ್‌ಸಿಸಿ ಸಿ ಪ್ರಮಾಣಪತ್ರ ಹೊಂದಿರುವವರಿಗೆ ಸಿಇಇ (ಸಾಮಾನ್ಯ ಪ್ರವೇಶ ಪರೀಕ್ಷೆ) ಯಿಂದ ವಿನಾಯಿತಿ ನೀಡಲಾಗುತ್ತದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:35 pm, Mon, 20 June 22