UPSC: NDA ಮತ್ತು NA 2 ಅಂತಿಮ ಫಲಿತಾಂಶ 2021: ಶಿಫಾರಸ್ಸು ಮಾಡಿದ ಅಭ್ಯರ್ಥಿಗಳ ಅಂಕಗಳು ಬಿಡುಗಡೆ
UPSC ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ನೇವಲ್ ಅಕಾಡೆಮಿ ಪರೀಕ್ಷೆ (II) 2021ರ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ ಶಿಫಾರಸ್ಸು ಮಾಡಿದ ಅಭ್ಯರ್ಥಿಗಳ ಅಂಕಗಳನ್ನು ಬಿಡುಗಡೆ ಮಾಡಿದೆ. ಅಂಕ ಪರಿಶೀಲನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ನೇವಲ್ ಅಕಾಡೆಮಿ ಪರೀಕ್ಷೆ (II) 2021ರ ಅಂತಿಮ ಫಲಿತಾಂಶಗಳನ್ನು ಇತ್ತೀಚೆಗಷ್ಟೇ ಪ್ರಕಟಿಸಿತ್ತು. ಇದೀಗ ಶಿಫಾರಸ್ಸು ಮಾಡಿದ ಅಭ್ಯರ್ಥಿಗಳ ಅಂಕಗಳನ್ನು ಬಿಡುಗಡೆ ಮಾಡಲಾಗಿದ್ದು, ಅಂಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 2021ರ ನವೆಂಬರ್ 14ರಂದು ನಡೆದ ಪರೀಕ್ಷೆ ಇದಾಗಿದ್ದು, ಶಿಫಾರಸ್ಸು ಮಾಡಲಾದ ಅಭ್ಯರ್ಥಿಗಳ ಅಂತಿಮ ಫಲಿತಾಂಶವನ್ನು ಡೌನ್‌ಲೋಡ್ ಮಾಡುವ ಹಂತಗಳು ಈ ಕೆಳಗಿನಂತಿವೆ.
ಇದನ್ನೂ ಓದಿ: Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
ಅಂಕಪಟ್ಟಿಯನ್ನು ಪರಿಶೀಲಿಸುವುದು ಹೇಗೆ?
- UPSCಯ ಅಧಿಕೃತ ವೆಬ್‌ಸೈಟ್ upsc.gov.inಗೆ ಭೇಟಿ ನೀಡಿ
- ಈಗ ಏನಿದೆ ಹೊಸ ವಿಭಾಗವನ್ನು ಪರಿಶೀಲಿಸಿ ಕ್ಲಿಕ್ ಮಾಡಿ
- ಮುಖಪುಟದಲ್ಲಿ, “ಶಿಫಾರಸು ಮಾಡಿದ ಅಭ್ಯರ್ಥಿಗಳ ಅಂಕಗಳು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆ (II), 2021” ಅನ್ನು ಕ್ಲಿಕ್ ಮಾಡಿ.
- ಹೊಸ ಪಿಡಿಎಫ್ ತೆರೆಯುತ್ತದೆ.
- ನಿಮ್ಮ ಹೆಸರು ಮತ್ತು ಪಡೆದ ಅಂಕಗಳನ್ನು ಪರಿಶೀಲಿಸಲು PDF ಅನ್ನು ಸ್ಕ್ರಾಲ್ ಮಾಡಿ.
- UPSC NDA ಮತ್ತು NA 2 ಅಂತಿಮ ಫಲಿತಾಂಶ 2021 PDF ಅನ್ನು ಡೌನ್‌ಲೋಡ್ ಮಾಡಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ.
ಇದನ್ನೂ ಓದಿ: SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
ಈ ವರ್ಷ ಆಯೋಗವು, ಸೇನೆ ಮತ್ತು ವಾಯುಪಡೆ ಮತ್ತು ನೌಕಾ ಅಕಾಡೆಮಿಗೆ ತರಬೇತಿಗಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ದಾಖಲಾತಿಗಾಗಿ ಒಟ್ಟು 462 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಯಾವುದೇ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯೋಗದ ಗೇಟ್ ‘ಸಿ’ ಬಳಿ ಇರುವ ಫೆಸಿಲಿಟೇಶನ್ ಕೌಂಟರ್ ಅನ್ನು ವೈಯಕ್ತಿಕವಾಗಿ ಅಥವಾ 011-23385271/011- 23381125/011-23098543 ದೂರವಾಣಿ ಸಂಖ್ಯೆಯನ್ನು ಕೆಲಸದ ದಿನಗಳಂದು ಮಾತ್ರ ಸಂಪರ್ಕಿಸಬಹುದು.
ಉದ್ಯೋಗ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ