
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) 2025-26ನೇ ಸಾಲಿನ ಪರಿಷ್ಕೃತ ಉದ್ಯೋಗ ಕ್ಯಾಲೆಂಡರ್ ಬಿಡುಗಡೆಯಾಗಿದೆ. ಇದರಲ್ಲಿ, IBPS RRB, PO, ಸ್ಪೆಷಲಿಸ್ಟ್ ಆಫೀಸರ್ಸ್, CSA ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಬ್ಯಾಂಕಿಂಗ್ ಉದ್ಯೋಗಗಳನ್ನು ಗುರಿಯಾಗಿಸಿಕೊಂಡಿರುವ ಅಭ್ಯರ್ಥಿಗಳು ಈ ದಿನಾಂಕಗಳ ಪ್ರಕಾರ ತಯಾರಿ ನಡೆಸಬಹುದು. ವೇಳಾಪಟ್ಟಿಯ ಪ್ರಕಾರ IBPS ಬ್ಯಾಂಕ್ ಉದ್ಯೋಗಗಳಿಗೆ ಲಿಖಿತ ಪರೀಕ್ಷೆಗಳು ಆಗಸ್ಟ್ 2025 ರಿಂದ ಫೆಬ್ರವರಿ 2026 ರವರೆಗೆ ನಡೆಯಲಿದೆ.
ಆರ್‌ಆರ್‌ಬಿ ಅಧಿಕಾರಿ (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು) ಸಿಆರ್‌ಪಿ ಪಿಒ, ಸಿಆರ್‌ಪಿ ಎಸ್‌ಪಿಎಲ್, ಸಿಆರ್‌ಪಿ ಸಿಎಸ್‌ಎ ಹುದ್ದೆಗಳಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳು ನಡೆಯಲಿವೆ. ಪಿಒ ಹುದ್ದೆಗಳಿಗೆ ಪೂರ್ವಭಾವಿ ಲಿಖಿತ ಪರೀಕ್ಷೆ ಆಗಸ್ಟ್ 17, 23 ಮತ್ತು 24 ರಂದು ನಡೆಯಲಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮುಖ್ಯ ಪರೀಕ್ಷೆ ಅಕ್ಟೋಬರ್ 12 ರಂದು ನಡೆಯಲಿದೆ. ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ಆಗಸ್ಟ್ 30 ರಂದು ಮತ್ತು ಮುಖ್ಯ ಪರೀಕ್ಷೆ ನವೆಂಬರ್ 9 ರಂದು ನಡೆಯಲಿದೆ. ಗ್ರಾಹಕ ಸೇವಾ ಸಹಾಯಕ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ಅಕ್ಟೋಬರ್ 4, 5 ಮತ್ತು 11 ರಂದು ಮತ್ತು ಮುಖ್ಯ ಪರೀಕ್ಷೆ ನವೆಂಬರ್ 29 ರಂದು ನಡೆಯಲಿದೆ.
ಇದನ್ನೂ ಓದಿ: ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಲ್ಲಿ 250 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ, ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ
IBPS ಆಫೀಸರ್ ಸ್ಕೇಲ್ 1 ಹುದ್ದೆಗಳಿಗೆ ನವೆಂಬರ್ 22 ಮತ್ತು 23 ರಂದು ಪ್ರಿಲಿಮ್ಸ್ ಮತ್ತು ಡಿಸೆಂಬರ್ 28 ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಆಫೀಸರ್ ಸ್ಕೇಲ್ II ಮತ್ತು III ಹುದ್ದೆಗಳಿಗೆ, ಮುಖ್ಯ ಪರೀಕ್ಷೆ ಡಿಸೆಂಬರ್ 28 ರಂದು ನಡೆಯಲಿದೆ (ಪೂರ್ವಭಾವಿ ಪರೀಕ್ಷೆ ದಿನಾಂಕ ಅಂತಿಮಗೊಳಿಸಲಾಗಿಲ್ಲ), ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ, ಪೂರ್ವಭಾವಿ ಪರೀಕ್ಷೆ ಡಿಸೆಂಬರ್ 6, 7, 13 ಮತ್ತು 14 ರಂದು ಮತ್ತು ಮುಖ್ಯ ಪರೀಕ್ಷೆ ಫೆಬ್ರವರಿ 1, 2026 ರಂದು ನಡೆಯಲಿದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ