ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, IPPB ಜೂನಿಯರ್ ಅಸೋಸಿಯೇಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು IPPB ಯ ಅಧಿಕೃತ ಸೈಟ್ ippbonline.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 28, 2023. ಈ ನೇಮಕಾತಿ ಪ್ರಕ್ರಿಯೆಯು ಸಂಸ್ಥೆಯಲ್ಲಿ 41 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.
ಸಂದರ್ಶನದ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುವುದು. ಆದರೆ ಸಂದರ್ಶನದ ಜೊತೆಗೆ ಮೌಲ್ಯಮಾಪನ (Assesment), ಗುಂಪು ಚರ್ಚೆ (Group Discussion) ಅಥವಾ ಆನ್‌ಲೈನ್ ಪರೀಕ್ಷೆಯನ್ನು ನಡೆಸುವ ಹಕ್ಕನ್ನು ಬ್ಯಾಂಕ್ ಹೊಂದಿದೆ.
ಆಸಕ್ತ ಅಭ್ಯರ್ಥಿಗಳು ಮೇಲೆ ತಿಳಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರೆ ಎಂದು ಪರಿಶೀಲಿಸಿ ಸಹಿ ಮಾಡಿದ ಅರ್ಜಿಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ನಿಗದಿತ ನಮೂನೆಯಲ್ಲಿ (enclosed as Annexure I) ವಿವರಗಳೊಂದಿಗೆ ಇಮೇಲ್ ಅನ್ನು ಕಳುಹಿಸಬಹುದು. ಜೊತೆಗೆ ಅರ್ಜಿಯಲ್ಲಿ ತಿಳಿಸಿರುವ ರೀತಿ ಅಭ್ಯರ್ಥಿ ಅದೇ ಇಮೇಲ್ ಐಡಿಯಿಂದ careers@ippbonline.in ಗೆ ರೆಸ್ಯೂಮ್ ಅನ್ನು ಕೊನೆಯ ದಿನಾಂಕದ ಮೊದಲು ಇಮೇಲ್ ಮಾಡಬೇಕು.
Published On - 12:06 pm, Sat, 18 February 23