ಜೆಟ್ ಏರ್ವೇಸ್ ವಿಮಾನ ಯಾನ ಸಂಸ್ಥೆಯು ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸಿದೆ. 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಮೇಲೆ ಮತ್ತೆ ಆರಂಭ ಮಾಡಲಾಗುತ್ತಿದೆ. 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಜೆಟ್ ಏರ್ವೇಸ್ (Jet Airways) ವಿಮಾನ ಯಾನ ಸಂಸ್ಥೆ ಮತ್ತೆ ಹಾರಾಟ ನಡೆಸುವತ್ತ ಮುಂದಡಿ ಇಟ್ಟಿದೆ. ಜೆಟ್ ಏರ್ವೇಸ್ ಬಾನಂಗಳದಲ್ಲಿ ಉದ್ಯೋಗಾವಕಾಶಗಳ ಸುರಿಮಳೆಗೆರೆಯಲು ಸಜ್ಜಾಗಿದೆ. ಈಗಾಗಲೇ ಮೇಲ್ಮಟ್ಟದ ಕೆಲ ನೇಮಕಾತಿಗಳು ನಡೆದಿವೆ.
ಶೀಘ್ರದಲ್ಲೇ ವಾಯು ಯಾನ ಕಾರ್ಯಾಚರಣೆ ಪರವಾನಗಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿದೆ. ಏರ್ಲೈನ್ ಸಿಇಒ ಸಂಜೀವ್ ಕಪೂರ್ ಅವರು ಹೈಬ್ರಿಡ್ ಮಾಡೆಲ್ ಬಗ್ಗೆ ಮಾತನಾಡಿದ್ದು, ವಿಮಾನ ಯಾನ ವಲಯ ನಿಧಾನಗತಿ ಆಗಿತ್ತು. ಸದ್ಯದ ಸನ್ನಿವೇಶದಲ್ಲಿ ಭಾರತೀಯ ವಿಮಾನ ಯಾನ ವಲಯವು ಕಡಿಮೆ ಪ್ರಯಾಣ ವೆಚ್ಚದ ಸಂಸ್ಥೆಗಳು ಪಾರಮ್ಯ ಸಾಧಿಸಿವೆ. 2019ನೇ ಇಸವಿಯಲ್ಲಿ, ಯಾವಾಗ ಜೆಟ್ ಏರ್ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತೋ ಆಗ ಶೇ 87ರಷ್ಟು ಸಂಪೂರ್ಣ ದೇಶೀಯ ವಾಯು ಸಂಚಾರವನ್ನು ಕಡಿಮೆ ದರದ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಹೈಬ್ರಿಡ್ ಮಾಡೆಲ್ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಪ್ರಯಾಣ ವೆಚ್ಚ ಕಡಿಮೆ. ಆದರೆ ಪ್ರಯಾಣಿಕರು ಆಹಾರ ಮತ್ತಿತರ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ.
#JetAirwaysIsHiring
ಇಂದು ಮಂಗಳವಾರ ಸಂಜೆ ತನ್ನ ನೂತನ ನೇಮಕಾತಿ ಪ್ರಕ್ರಿಯೆ ಬಗ್ಗೆ ಟ್ವೀಟ್ ಮಾಡಿ, ಮಾಹಿತಿ ನೀಡಿರುವ ಜೆಟ್ ಏರ್ವೇಸ್ ವಿಮಾನ ಯಾನ ಸಂಸ್ಥೆಯು ಇನ್ನು ಮುಂದೆ ಸಂಸ್ಥೆಯ ವತಿಯಿಂದ ಆಯಕಟ್ಟಿನ ಸ್ಥಾನಗಳಿಗೆ ನೇಮಕಾತಿಗಳು ನಿರಂತರವಾಗಿ ನಡೆಯಲಿದ್ದು, ತನ್ನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ನೋಡುವಂತೆ ಕೋರಿದೆ. ಜೊತೆಗೆ ಯಾವುದೇ ಉದ್ಯೋಗ ನೇಮಕಾತಿಗೆ ಆಮಿಷಗಳು ಇಲ್ಲದೆ, ಅರ್ಹ ಅಭ್ಯರ್ಥಿಗಳನ್ನು ಮಾತ್ರವೇ ನೇಮಕ ಮಾಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ. ಹಾಗಾಗಿ ಯಾವುದೇ ನೇಮಕಾತಿ ಅಕ್ರಮಗಳಿಗೆ ಅಭ್ಯರ್ಥಿಗಳು ತುತ್ತಾಗಬಾರದು ಎಚ್ಚರಿಸಿದೆ. careers@jetairways.com ಈ ವಿಳಾಸಕ್ಕೆ ಮಾತ್ರವೇ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆ ಸೂಚಿಸಿದೆ.
ಜೆಟ್ ಏರ್ವೇಸ್ ವಿಮಾನ ಯಾನ ಸಂಸ್ಥೆಯ ಟ್ವೀಟ್ ಸಾರಾಂಶ ಹೀಗಿದೆ:
Are you looking to join us inroles? If yes, please read below. #JetAirwaysIsHiring
Excited by Product Development? Experienced in doing this for airlines? Energized by the thought of being part of Jet Airways re-launch team? If your answer is Yes! for all of the above, please send your CV to careers@jetairways.com. Read below for more info. #JetAirwaysIsHiring
Are you looking to join us in operational roles? If yes, please read below. #JetAirwaysIsHiring pic.twitter.com/Kv8PuyNkBj
— Jet Airways (@jetairways) April 26, 2022