KIOCL Recruitment 2022: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Jun 06, 2022 | 5:04 PM

KIOCL Recruitment 2022: ಈ ನೇಮಕಾತಿಗಾಗಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ kioclltd.in ಗೆ ಭೇಟಿ ನೀಡಿ ಅರ್ಜಿ ಹಾಕಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

KIOCL Recruitment 2022: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ
KIOCL Recruitment 2022
Follow us on

KIOCL Recruitment 2022: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್​ನ (KIOCL) ಮುಖ್ಯ ಜನರಲ್ ಮ್ಯಾನೇಜರ್ ಮತ್ತು ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಗಾಗಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ kioclltd.in ಗೆ ಭೇಟಿ ನೀಡಿ ಅರ್ಜಿ ಹಾಕಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರಗಳು:
ಮುಖ್ಯ ಜನರಲ್ ಮ್ಯಾನೇಜರ್ (HR) – 1 ಹುದ್ದೆ
ಜನರಲ್ ಮ್ಯಾನೇಜರ್ (ಫೈನಾನ್ಸ್) – 1 ಹುದ್ದೆ
ಜನರಲ್ ಮ್ಯಾನೇಜರ್ (ಕಾಮರ್ಸ್) – 1 ಹುದ್ದೆ
ಜನರಲ್ ಮ್ಯಾನೇಜರ್ (ಮೆಟೀರಿಯಲ್) – 1 ಹುದ್ದೆ

ಶೈಕ್ಷಣಿಕ ಅರ್ಹತೆ:
ಮುಖ್ಯ ಜನರಲ್ ಮ್ಯಾನೇಜರ್ (HR) – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ನಿರ್ವಹಣಾ ಸಂಸ್ಥೆಯಿಂದ HR/IR ವಿಶೇಷತೆಯೊಂದಿಗೆ ಪೂರ್ಣ ಸಮಯದ MBA/MSW ಅಥವಾ ಸಮಾನ ಪದವಿ ಮಾಡಿರಬೇಕು.
ಜನರಲ್ ಮ್ಯಾನೇಜರ್ (ಫೈನಾನ್ಸ್) – ಪದವಿ ಮತ್ತು ಸತತವಾಗಿ ಉತ್ತಮ ಶೈಕ್ಷಣಿಕ ದಾಖಲೆಯೊಂದಿಗೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ / ಇನ್‌ಸ್ಟಿಟ್ಯೂಟ್ ಆಫ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿರಬೇಕು.
ಜನರಲ್ ಮ್ಯಾನೇಜರ್ (ವಾಣಿಜ್ಯ) – BE/B.Tech ಜೊತೆಗೆ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ PG MBA ಅಥವಾ ಯಾವುದೇ ವಿಭಾಗದಲ್ಲಿ ತತ್ಸಮಾನ/ಎರಡು ವರ್ಷಗಳ PG ಡಿಪ್ಲೊಮಾ ಮಾಡಿರಬೇಕು.
ಜನರಲ್ ಮ್ಯಾನೇಜರ್ (ಮೆಟೀರಿಯಲ್ಸ್)- ಬಿಇ ಅಥವಾ ಬಿ.ಟೆಕ್ ಅಥವಾ ತತ್ಸಮಾನ ಡಿಪ್ಲೊಮಾ ಅಥವಾ ಉತ್ತಮ ಶೈಕ್ಷಣಿಕ ದಾಖಲೆಯೊಂದಿಗೆ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಮಾಡಿರಬೇಕು.

ಇದನ್ನೂ ಓದಿ
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

ತಿಂಗಳ ವೇತನ:
ಮುಖ್ಯ ಜನರಲ್ ಮ್ಯಾನೇಜರ್ (HR)- 120000 ರೂ. ರಿಂದ 280000 ರೂ.
ಜನರಲ್ ಮ್ಯಾನೇಜರ್ (ಹಣಕಾಸು)- 120000 ರೂ. ರಿಂದ 280000 ರೂ.
ಜನರಲ್ ಮ್ಯಾನೇಜರ್ (ವಾಣಿಜ್ಯ)- 120000 ರೂ. ರಿಂದ 280000 ರೂ.
ಜನರಲ್ ಮ್ಯಾನೇಜರ್ (ಮೆಟೀರಿಯಲ್)- 120000 ರೂ. ರಿಂದ 280000 ರೂ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 23, 2022

ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.