KVS Recruitment 2022: ಕೇಂದ್ರೀಯ ವಿದ್ಯಾಲಯದ 6990 ಹುದ್ದೆಗಳಿಗೆ ಅರ್ಜಿ ಆಹ್ವಾನ

|

Updated on: Dec 03, 2022 | 2:33 PM

KVS Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು KVS ನ ಅಧಿಕೃತ ವೆಬ್‌ಸೈಟ್ kvsangathan.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

KVS Recruitment 2022: ಕೇಂದ್ರೀಯ ವಿದ್ಯಾಲಯದ 6990 ಹುದ್ದೆಗಳಿಗೆ ಅರ್ಜಿ ಆಹ್ವಾನ
KVS Recruitment 2022
Follow us on

KVS Recruitment 2022: ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ಬಯಸುವವರಿಗೆ ಇಲ್ಲಿದೆ ಸುವರ್ಣಾವಕಾಶ. ಇದಕ್ಕಾಗಿ, ಕೆವಿಎಸ್ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು KVS ನ ಅಧಿಕೃತ ವೆಬ್‌ಸೈಟ್ kvsangathan.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ-6990
  • ಅಸಿಸ್ಟೆಂಟ್ ಕಮಿಷನರ್: 52 ಹುದ್ದೆಗಳು
  • ಪ್ರಿನ್ಸಿಪಾಲ್: 239 ಹುದ್ದೆಗಳು
  • ವೈಸ್ ಪ್ರಿನ್ಸಿಪಾಲ್: 203
  • ಹುದ್ದೆಗಳು ಪಿಜಿಟಿ: 1409 ಹುದ್ದೆಗಳು
  • ಟಿಜಿಟಿ: 3176 ಹುದ್ದೆಗಳು
  • ಲೈಬ್ರೇರಿಯನ್: 355 ಹುದ್ದೆಗಳು
  • ಪ್ರಾಥಮಿಕ ಶಿಕ್ಷಕರು: 303 ಹುದ್ದೆಗಳು
  • ಹಣಕಾಸು ಅಧಿಕಾರಿ: 6 ಹುದ್ದೆಗಳು
  • ಸಹಾಯಕ ಎಂಜಿನಿಯರ್: 2 ಹುದ್ದೆಗಳು
  • ಸಹಾಯಕ ಸೆಕ್ಷನ್ ಆಫೀಸರ್: 156 ಹುದ್ದೆಗಳು
  • ಹಿಂದಿ ಟ್ರಾನ್ಸ್ಲಾಟರ್: 156 ಹುದ್ದೆಗಳು 11 ಹುದ್ದೆಗಳು
  • ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್: 322 ಹುದ್ದೆಗಳು
  • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್: 702 ಪೋಸ್ಟ್
  • ಸ್ಟೆನೋಗ್ರಾಫರ್ ಗ್ರೇಡ್ II: 54 ಹುದ್ದೆಗಳು

ಅರ್ಹತಾ ಮಾನದಂಡಗಳು:

ಆಯಾ ವಿಭಾಗಕ್ಕೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದಾಗಿದೆ.

ಅರ್ಜಿ ಶುಲ್ಕ:

  • ಜನರಲ್/ OBC/ EWS: ₹ 1000 /-
  • SC/ST/ PwD/ ESM: ಯಾವುದೇ ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕ್ಲಾಸ್ ಡೆಮೊ / ಸಂದರ್ಶನ / ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ – ಡಿಸೆಂಬರ್ 5, 2022
  • ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 26, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.