ವೃತ್ತಿಪರರಿಗಾಗಿ ಬೆಂಗಳೂರಿನಲ್ಲಿರುವ ಉನ್ನತ ಉದ್ಯೋಗಗಳ ಪಟ್ಟಿ ಹಂಚಿಕೊಂಡ ಲಿಂಕ್ಡ್‌ಇನ್‌

|

Updated on: Jan 23, 2024 | 11:24 AM

ಭಾರತದಲ್ಲಿರುವ ಶೇ.95ರಷ್ಟು ನೇಮಕಾತಿದಾರರು ಈ ವರ್ಷ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಯೋಜಿಸುತ್ತಿದ್ದಾರೆ. ಇಂತಹವರಿಗಾಗಿ ಸರಿಯಾದ ಅಭ್ಯರ್ಥಿಗಳನ್ನು ಹುಡುಕಲು ಮತ್ತು ಭವಿಷ್ಯದ ಕೌಶಲ್ಯಗಳೊಂದಿಗೆ ತಮ್ಮ ಉದ್ಯೋಗಿಗಳನ್ನು ಸಜ್ಜುಗೊಳಿಸಲು ಸಹಾಯ ಮಾಡಲು ಲಿಂಕ್ಡ್‌ಇನ್‌ ಸಹಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಲಿಂಕ್ಡ್‌ಇನ್‌ ಹೊಸ ಕೃತಕಬುದ್ಧಿಮತ್ತೆಯ ಟೂಲ್‌ಗಳನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.

ವೃತ್ತಿಪರರಿಗಾಗಿ ಬೆಂಗಳೂರಿನಲ್ಲಿರುವ ಉನ್ನತ ಉದ್ಯೋಗಗಳ ಪಟ್ಟಿ ಹಂಚಿಕೊಂಡ ಲಿಂಕ್ಡ್‌ಇನ್‌
ಸಾಂದರ್ಭಿಕ ಚಿತ್ರ
Follow us on

ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಕರೆಸಿಕೊಳ್ಳುವ ಬೆಂಗಳೂರಿನಲ್ಲಿರುವ ಉದ್ಯೋಗಿಗಳು ಆರ್ಥಿಕ ಅನಿಶ್ಚಿತತೆಯ ನಡುವೆಯೂ ಧೈರ್ಯವಾಗಿ ತಮ್ಮ ವೃತ್ತಿಯನ್ನು ಬದಲಿಸಲು ಸಿದ್ಧರಿದ್ದಾರೆ. ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್‌ವರ್ಕ್‌ ಆದಂತಹ ಲಿಂಕ್ಡ್‌ಇನ್‌ ನಡೆಸಿರುವ ಸಂಶೋಧನೆಯು ಬೆಂಗಳೂರಿನಲ್ಲಿರುವ 10ರಲ್ಲಿ 9 ಮಂದಿ (89%) ಉದ್ಯೋಗಿಗಳು 2024ರಲ್ಲಿ ತಮ್ಮ ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.

ಕೃತಕ ಬುದ್ಧಿಮತ್ತೆಯು ಕೌಶಲ್ಯ ಬದಲಾವಣೆಯ ವೇಗವನ್ನು ಹೆಚ್ಚಿಸಿದ ಕಾರಣಕ್ಕೆ 2015ರಿಂದ ಭಾರತದಲ್ಲಿ ಔದ್ಯೋಗಿಕ ಕೌಶಲ್ಯಗಳು ಶೇ.30ರಷ್ಟು ಬದಲಾಗಿವೆ ಎಂಬುದನ್ನು ಲಿಂಕ್ಡ್‌ಇನ್‌ ದತ್ತಾಂಶಗಳು ಬಹಿರಂಗಪಡಿಸಿವೆ. 2030ರ ಹೊತ್ತಿಗೆ ಇದು ಜಾಗತಿಕವಾಗಿ ಶೇ.65ರಷ್ಟು ಬದಲಾಗುವ ನಿರೀಕ್ಷೆಯಿದೆ. ಈ ಬದಲಾವಣೆಗಳ ನಡುವೆ, ಉದ್ಯೋಗ ಹುಡುಕುವುದು ಸವಾಲಾಗಿ ಪರಿಣಮಿಸಬಹುದು. ಆದರೆ ಬೆಂಗಳೂರಿಗರು ಉದ್ಯೋಗ ಬದಲಾವಣೆಗೆ ತೀರ್ಮಾನಿಸಿದ್ದಾರೆ. ನಗರದಲ್ಲಿನ ಶೇ.68ರಷ್ಟು ಮಂದಿ ಉದ್ಯೋಗಿಗಳು ತಮ್ಮ ಉದ್ಯೋಗದ ಹುಡುಕಾಟದಲ್ಲಿ ಯಶಸ್ವಿಯಾಗಲು ಹೊಸ ಮಾರ್ಗಗಳಲ್ಲಿ ಪ್ರಯತ್ನಿಸುತ್ತಿದ್ದಾರೆ. ಶೇ.75ರಷ್ಟು ಮಂದಿ ಲಿಂಕ್ಡ್‌ಇನ್‌ನಲ್ಲಿ ಹೆಚ್ಚಿನ ವಿಷಯವನ್ನು ಪೋಸ್ಟ್‌ ಮಾಡುವ ಮೂಲಕ ವೈಯಕ್ತಿಕ ಬ್ರಾಂಡಿಂಗ್‌ನಲ್ಲಿ ತೊಡಗಿದ್ದಾರೆ. ಶೇ.83ರಷ್ಟು ಮಂದಿ ತಮ್ಮ ವೃತ್ತಿಪರ ನೆಟ್‌ವರ್ಕ್‌ ಬೆಳೆಸುವಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಶೇ.77ರಷ್ಟು ಮಂದಿ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಲು ಉತ್ಸುಕರಾಗಿದ್ದು, ಇದು ಉದ್ಯೋಗ ಹುಡುಕಾಟವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಇಂತಹ ಉದ್ಯೋಗಾಕಾಂಕ್ಷಿಗಳಿಗೆ ಸಹಾಯ ಮಾಡಲು ಲಿಂಕ್ಡ್‌ಇನ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಉದ್ಯೋಗಗಳ ಪಟ್ಟಿಯನ್ನು ಬಹಿರಂಗಪಡಿಸಿದೆ:

  1. ಇನ್ವೆಸ್ಟ್ಮೆಂಟ್ ಅಸೋಸಿಯೇಟ್
  2. ಸೇಲ್ಸ್‌ ಡೆವೆಲಪ್‌ಮೆಂಟ್‌ ಪ್ರತಿನಿಧಿ
  3. ಇನ್‌ಸೈಟ್‌ ಅನಾಲಿಸ್ಟ್‌
  4. ಗ್ರೋಥ್‌ ಮ್ಯಾನೇಜರ್
  5. ಸಾರ್ವಜನಿಕ ಸಂಪರ್ಕ ಕಾರ್ಯನಿರ್ವಾಹಕ
  6. ವಿತರಣಾ ಸಲಹೆಗಾರ
  7. ತೆರಿಗೆ ತಜ್ಞರು
  8. ವ್ಯಾಪಾರ ಅಭಿವೃದ್ಧಿ ಪ್ರತಿನಿಧಿ
  9. ಅಫಿಲಿಯೇಟ್‌ ವ್ಯವಸ್ಥಾಪಕ
  10. ಯೂಸರ್‌ ಎಕ್ಸ್‌ಪೀರಿಯನ್ಸ್‌ ರಿಸರ್ಚರ್‌

ಭಾರತದಲ್ಲಿರುವ ಶೇ.95ರಷ್ಟು ನೇಮಕಾತಿದಾರರು ಈ ವರ್ಷ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಯೋಜಿಸುತ್ತಿದ್ದಾರೆ. ಇಂತಹವರಿಗಾಗಿ ಸರಿಯಾದ ಅಭ್ಯರ್ಥಿಗಳನ್ನು ಹುಡುಕಲು ಮತ್ತು ಭವಿಷ್ಯದ ಕೌಶಲ್ಯಗಳೊಂದಿಗೆ ತಮ್ಮ ಉದ್ಯೋಗಿಗಳನ್ನು ಸಜ್ಜುಗೊಳಿಸಲು ಸಹಾಯ ಮಾಡಲು ಲಿಂಕ್ಡ್‌ಇನ್‌ ಸಹಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಲಿಂಕ್ಡ್‌ಇನ್‌ ಹೊಸ ಕೃತಕಬುದ್ಧಿಮತ್ತೆಯ ಟೂಲ್‌ಗಳನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.

ನೇಮಕಾತಿ 2024: ಲಿಂಕ್ಡ್‌ಇನ್‌ನ ಹೊಸ AI-ನೆರವಿನ ನೇಮಕಾತಿ ಅನುಭವವು ನೇಮಕಾತಿಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಆದ್ದರಿಂದ ಪ್ರತಿಭಾವಂತರು ಕಾರ್ಯತಂತ್ರ ಮತ್ತು ಜನಕೇಂದ್ರಿತ ಕೆಲಸಗಳ ಮೇಲೆ ಗಮನವನ್ನು ಕೇಂದ್ರೀಕರಿಸಬಹುದು. ನೇಮಕಾತಿದಾರರು ಸಾಮಾನ್ಯ ಭಾಷೆಯ ಹುಡುಕಾಟದ ಪ್ರಾಂಪ್ಟ್‌ಗಳನ್ನು ಬಳಸಬಹುದು. ಉದಾಹಣೆಗೆ “ಐ ವಾಂಟ್ ಟು ಹೈರ್ ಎ ಸೀನಿಯರ್ ಗ್ರೋತ್ ಮಾರ್ಕೆಟಿಂಗ್ ಮ್ಯಾನೇಜರ್ “. ಲಿಂಕ್ಡ್‌ಇನ್‌ನ ಎಐ ಮಾದರಿಗಳು 1 ಶತಕೋಟಿ ವೃತ್ತಿಪರರು, 67.1 ಮಿಲಿಯನ್‌ ಕಂಪನಿಗಳು ಮತ್ತು 41,000 ಲಿಂಕ್ಡ್‌ಇನ್‌ ಕೌಶಲ್ಯಗಳೊಂದಿಗೆ ಸಂಪರ್ಕ ಹೊಂದಿದ್ದು, ಇದು ನೇಮಕಾತಿದಾರರು ಹುಡುಕುತ್ತಿರುವ ಅಭ್ಯರ್ಥಿಯನ್ನು ಶಿಫಾರಸು ಮಾಡಲಿದೆ.

ಲಿಂಕ್ಡ್‌ಇನ್ ಲರ್ನಿಂಗ್‌ನ AI-ಚಾಲಿತ ತರಬೇತಿ: ಎಲ್ಲಾ ರೀತಿಯ ಉದ್ಯೋಗಗಳಿಗೆ ಅನ್ವಯಿಸುವ ಹೆಚ್ಚು ಬೇಡಿಕೆಯಲ್ಲಿರುವ ಕೌಶಲ್ಯಗಳಾದ ನಾಯಕತ್ವ ಮತ್ತು ನಿರ್ವಹಣೆಯ ನೈಜ ಸಮಯದ ಸಲಹೆಯನ್ನು ಲಿಂಕ್ಡ್‌ಇನ್‌ ಪರೀಕ್ಷಿಸುತ್ತಿದೆ. ಉದಾರಣೆಗೆ ಕಲಿಯುತ್ತಿರುವವರು ‘ನಾನು ಹೇಗೆ ಕೆಲಸಗಳನ್ನು ಮತ್ತು ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಯೋಜಿಸಬಹುದು? ಎಂಬ ಪ್ರಶ್ನೆಗಳನ್ನು ಕೇಳಬಹದು. ಇದಕ್ಕೆ ಒಂದು ನಿರ್ದಿಷ್ಟ ಉತ್ತರವನ್ನು ನೀಡುವ ಬದಲು, ನಿಮ್ಮ ನಿರ್ದಿಷ್ಟ ಪರಿಸ್ಥಿತಿ ಮತ್ತು ಅನುಭವವನ್ನು ಹೆಚ್ಚು ಆಳವಾಗಿ ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟೀಕರಣದ ಪ್ರಶ್ನೆಗಳನ್ನು ಕೇಳುತ್ತದೆ ಮತ್ತು ಲಿಂಕ್ಡ್‌ಇನ್‌ನ ಪರಿಣಿತರು ಒದಗಿಸಿರುವ ನೂರಾರು ಗಂಟೆಗಳ ವಿಷಯದ ಆಧಾರದ ಮೇಲೆ ಸಲಹೆ ಉದಾಹರಣೆ ಮತ್ತು ಪ್ರತಿಕ್ರಿಯೆಗಳನ್ನು ನೀಡುತ್ತದೆ.