REC ಲಿಮಿಟೆಡ್ನ ಮಹಾರತ್ನ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸಸ್ನಲ್ಲಿ (REC limited is a Maharatna Public Sector Enterprise) ಖಾಲಿರುವ ಒಟ್ಟು 125 ಹುದ್ದೆಗಳಿಗೆ(Jobs) ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 2023ರ ಏಪ್ರಿಲ್ 15 ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ recindia.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಇಂಜಿನಿಯರಿಂಗ್ ವಿಭಾಗ, ಫೈನನ್ಸ್ ಹಾಗೂ ಅಕೌಂಟ್ಸ್, ಎಚ್‌ಆರ್, ಐಟಿ, ಕಾರ್ಪೊರೇಟ್ ಕಮ್ಯೂನಿಕೇಶನ್, ಕಂಪನಿ ಸೆಕ್ರೆಟರಿಯೇಟ್ (ಸಿಎಸ್) ವಿಭಾಗದಲ್ಲಿ ಕಾರ್ಯನಿರ್ವಹಿಸಲು ಒಟ್ಟು 125 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ: Agniveer Recruitment 2023: ಅಗ್ನಿವೀರರ ನೇಮಕಾತಿ, ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಕೊನೆಯ ಅವಕಾಶ
ಜನರಲ್ ಮ್ಯಾನೇಜರ್(ಇಂಜಿನಿಯರಿಂಗ್)- 5 ಹುದ್ದೆಗಳು, ಮ್ಯಾನೇಜರ್(ಇಂಜಿನಿಯರಿಂಗ್)-5 ಹುದ್ದೆಗಳು, ಡಿಪ್ಯೂಟಿ ಮ್ಯಾನೇಜರ್(ಇಂಜಿನಿಯರಿಂಗ್)- 4 ಹುದ್ದೆಗಳು, ಅಸಿಸ್ಟೆಂಟ್ ಮ್ಯಾನೇಜರ್(ಇಂಜಿನಿಯರಿಂಗ್)-3 ಹುದ್ದೆಗಳು., ಆಫೀಸರ್(ಇಂಜಿನಿಯರಿಂಗ್)-2 ಹುದ್ದೆಗಳು, ಡಿಪ್ಯೂಟಿ ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್ಸ್)- 7 ಹುದ್ದೆಗಳು, ಮ್ಯಾನೇಜರ್(ಫೈನಾನ್ಸ್ ಮತ್ತು ಅಕೌಂಟ್ಸ್) 5 ಹುದ್ದೆಗಳು, ಆಫೀಸರ್(ಫೈನಾನ್ಸ್ ಮತ್ತು ಅಕೌಂಟ್ಸ್)-2 ಹುದ್ದೆಗಳು, ಅಸಿಸ್ಟೆಂಟ್ ಮ್ಯಾನೇಜರ್(HR) -3 ಹುದ್ದೆಗಳು, ಸೇರಿದಂತೆ ಒಟ್ಟು 125 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇವರನ್ನು ಹೊರತುಪಡಿಸಿ ಇನ್ನುಳಿದ ಅಭ್ಯರ್ಥಿಗಳಿಗೆ 1000 ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಅಧಿಕೃತ ನೋಟಿಫಿಕೇಶನಲ್ಲಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Mon, 20 March 23