ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಪ್ರಧಾನ ಕಛೇರಿ (Headquarters of Southern Command) ನೇಮಕಾತಿ (Recruitment) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಾಷರ್‌ಮ್ಯಾನ್ ಮತ್ತು ಟ್ರೇಡ್ಸ್‌ಮ್ಯಾನ್ ಮೇಟ್ ಹುದ್ದೆಗಳಿಗೆ ಅರ್ಜಿದಾರರನ್ನು ನೇಮಿಸಿಕೊಳ್ಳಲಾಗುತ್ತದೆ. ಉದ್ಯೋಗ ಸುದ್ದಿಯಲ್ಲಿ ಈ ಜಾಹೀರಾತನ್ನು ಪ್ರಕಟಿಸಿದ ದಿನಾಂಕದಿಂದ 45 ದಿನಗಳಲ್ಲಿ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಆಫ್‌ಲೈನ್ ಮೂಲಕ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 65 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ದಕ್ಷಿಣ ಕಮಾಂಡ್ ಅಡಿಯಲ್ಲಿ ಯಾವುದೇ AMC ಘಟಕದಲ್ಲಿ ಎಲ್ಲಿ ಬೇಕಾದರೂ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು.
ಇದನ್ನೂ ಓದಿ: Jobs: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿನ 130 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಪ್ರಮುಖ ದಿನಾಂಕ, ವಯಸ್ಸಿನ ಮಿತಿ ಮತ್ತು ಹುದ್ದೆಯ ವಿವರಗಳು
ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ: ಜಾಹೀರಾತು ಪ್ರಕಟಣೆಯ ದಿನಾಂಕದಿಂದ 45 ದಿನಗಳು
ವಾಷರ್ಮನ್: 39 ಹುದ್ದೆಗಳು
ಟ್ರೇಡ್ಸ್‌ಮನ್ ಮೇಟ್: 26 ಹುದ್ದೆಗಳು
ವಯಸ್ಸಿನ ಮಿತಿ: 18 ರಿಂದ 25 ವರ್ಷ ವಯಸ್ಸಿನ ಒಳಗಿನವರು
ಅರ್ಜಿ ಶುಲ್ಕ: 100 ರೂಪಾಯಿ
ಇದನ್ನೂ ಓದಿ: NPCIL Recruitment 2022: ಪರೀಕ್ಷೆ ಇಲ್ಲದೆ ಉದ್ಯೋಗ ಪಡೆಯುವ ಸುವರ್ಣ ಅವಕಾಶ! ಬೇಗ ಅರ್ಜಿ ಸಲ್ಲಿಸಿ
ಅರ್ಹತಾ ಮಾನದಂಡ
ವಾಷರ್‌ಮನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಮಿಲಿಟರಿ/ನಾಗರಿಕ ಬಟ್ಟೆಗಳನ್ನು ಚೆನ್ನಾಗಿ ತೊಳೆಯಲು ಶಕ್ತರಾಗಿರಬೇಕು. ಟ್ರೇಡ್ಸ್‌ಮನ್ ಮೇಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವ್ಯಾಪಾರದಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.
ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗಳಲ್ಲಿನ ಮೆರಿಟ್ ಮತ್ತು ಸ್ಟಿಲ್/ಟ್ರೇಡ್ ಗುಣಮಟ್ಟದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಪ್ರತಿಯೊಬ್ಬ ಅರ್ಜಿದಾರರು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ‘ದಿ ಕಮಾಂಡೆಂಟ್, ಮಿಲಿಟರಿ ಹಾಸ್ಪಿಟಲ್, ಡಿಫೆನ್ಸ್ ಕಾಲೋನಿ ರಸ್ತೆ ಚೆನ್ನೈ, ತಮಿಳುನಾಡು, ಪಿನ್ : 600032’ಕ್ಕೆ ಕಳುಹಿಸಬೇಕು. ಅರ್ಜಿಯನ್ನು ನೋಂದಾಯಿತ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಸಲ್ಲಿಸಬೇಕು. ಅಭ್ಯರ್ಥಿಗಳು ಕ್ಯಾಪಿಟಲ್ ಲೆಟರ್‌ನಲ್ಲಿ ಲಕೋಟೆ ಮತ್ತು ವರ್ಗದ ಮೇಲ್ಭಾಗದಲ್ಲಿ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಬರೆಯಬೇಕು. ಮೀಸಲು ವರ್ಗದ ಅಭ್ಯರ್ಥಿಯು ಲಕೋಟೆಯ ಎಡ ಮೂಲೆಯಲ್ಲಿ ತಮ್ಮ ವರ್ಗವನ್ನು ಸಹ ಬರೆಯಬೇಕು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Sun, 12 June 22