ರೈಲ್ವೆ ನೇಮಕಾತಿ ಕೋಶವು (RRDC) ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ವಿಭಾಗೀಯ/ವರ್ಕ್‌ಶಾಪ್‌ಗಳಲ್ಲಿ 2023-24ನೇ ಸಾಲಿಗೆ 3,624 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ( Recruitment 2023) ಆಹ್ವಾನಿಸಿದೆ. ಲಿಖಿತ ಪರೀಕ್ಷೆಯಿಲ್ಲದೆ, ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಟ್ರೇಡ್ ವಿವರಗಳು: ಫಿಟ್ಟರ್, ವೆಲ್ಡರ್, ಪೈಪ್ ಫಿಟ್ಟರ್, ಪ್ಲಂಬರ್, ಡ್ರಾಫ್ಟ್ಸ್‌ಮನ್ (ಸಿವಿಲ್), ಸ್ಟೆನೋಗ್ರಾಫರ್, ಮೆಷಿನಿಸ್ಟ್, ಟರ್ನರ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ವೈರ್‌ಮ್ಯಾನ್, ರೆಫ್ರಿಜರೇಟರ್ ಮೆಕ್ಯಾನಿಕ್ (ಎಸಿ-ಮೆಕ್ಯಾನಿಕ್), ಪೇಂಟರ್, ಡೀಸೆಲ್ ಮೆಕ್ಯಾನಿಕ್, ಮೋಟಾರು ವಾಹನಗಳು ಮತ್ತು ಇತರ ಟ್ರೇಡ್ ಗಳಲ್ಲಿ ಖಾಲಿ ಹುದ್ದೆಗಳಿವೆ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಟ್ರೇಡ್‌ಗಳಲ್ಲಿ 10 ನೇ ಪಾಸ್ ಮತ್ತು ಐಟಿಐ ಪ್ರಮಾಣಪತ್ರ ಹೊಂದಿರುವ ಯಾರಾದರೂ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿದಾರರ ವಯಸ್ಸು 26ನೇ ಜುಲೈ 2023 ರಂತೆ 15 ರಿಂದ 24 ವರ್ಷಗಳ ನಡುವೆ ಇರಬೇಕು. ಈ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 26, 2023. ಸಾಮಾನ್ಯ ವರ್ಗಕ್ಕೆ ಸೇರಿದವರು 100 ರೂ. ನೋಂದಣಿ ಶುಲ್ಕವನ್ನು ಪಾವತಿಸಬೇಕು. ಇತರರು ಪಾವತಿಸಬೇಕಾಗಿಲ್ಲ.
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ