SSC Recruitment 2022: ಸಿಬ್ಬಂದಿ ನೇಮಕಾತಿ ಆಯೋಗ (SSC) ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 2065 ಖಾಲಿ ಹುದ್ದೆಗಳಿದ್ದು, ಇದರಲ್ಲಿ 27 ಹುದ್ದೆಗಳು ಕರ್ನಾಟಕಕ್ಕೆ ಸೀಮಿತವಿದೆ. ಹೀಗಾಗಿ ರಾಜ್ಯದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ssckkr.kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಂತೆ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಒಟ್ಟು ಹುದ್ದೆಗಳ ಸಂಖ್ಯೆ- 2065
ಸಾಮಾನ್ಯ – 915 ಹುದ್ದೆಗಳು
SC – 248 ಹುದ್ದೆಗಳು
ST – 121 ಹುದ್ದೆಗಳು
OBC – 599 ಹುದ್ದೆಗಳು
EWS – 182 ಹುದ್ದೆಗಳು
ವಿದ್ಯಾರ್ಹತೆ?
ಮೆಟ್ರಿಕ್ ಲೆವೆಲ್ ಪೋಸ್ಟ್‌ಗಳು – ಯಾವುದೇ ಮಾನ್ಯತೆ ಪಡೆದ ಮಂಡಳಿಯಲ್ಲಿ 10 ನೇ ತರಗತಿ ಪಾಸಾಗಿರಬೇಕು.
ಮಧ್ಯಂತರ ಮಟ್ಟದ ಹುದ್ದೆಗಳು – ಯಾವುದೇ ಮಾನ್ಯತೆ ಪಡೆದ ಮಂಡಳಿಯಲ್ಲಿ 10+2 (ಪಿಯುಸಿ) ಪಾಸಾಗಿರಬೇಕು.
ಪದವಿ ಮಟ್ಟದ ಹುದ್ದೆಗಳು -ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ಸ್ಟ್ರೀಮ್‌ನಲ್ಲಿ ಬ್ಯಾಚುಲರ್ ಪದವಿ ಪಾಸಾಗಿರಬೇಕು.
SSC ಅರ್ಜಿ ಶುಲ್ಕ ಎಷ್ಟು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 100/-ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ದಿನಾಂಕಗಳು: 12.05.2022 ರಿಂದ 13.06.2022
ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 13.06.2022 (23.00 PM ವರೆಗೆ)
ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ ಮತ್ತು ಸಮಯ: 15.06.2022 (23.00 PM)
ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕ್‌ನ ಕೆಲಸದ ಸಮಯದಲ್ಲಿ): 18.06.2022
ಆನ್‌ಲೈನ್ ಪಾವತಿ ಸೇರಿದಂತೆ ‘ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ’ ದಿನಾಂಕಗಳು: 20.06.2022 ರಿಂದ 24.06.2022 (23:00 PM)
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕಗಳು: ಆಗಸ್ಟ್ 2022 (ತಾತ್ಕಾಲಿಕವಾಗಿ)
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕದ ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಹಾಗೆಯೇ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
Published On - 7:22 pm, Wed, 18 May 22