ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ಹೊಸ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 15 ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ಸಂಖ್ಯೆ ಮತ್ತು ವಿವರ:
ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): 02 ಹುದ್ದೆಗಳು
ಮ್ಯಾನೇಜರ್ (SME ಪ್ರೊಡಕ್ಟ್): 06 ಹುದ್ದೆಗಳು
ಡೆಪ್ಯುಟಿ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): 07 ಹುದ್ದೆಗಳು
ವಿದ್ಯಾರ್ಹತೆ:
ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ಸದಸ್ಯರಾಗಿರಬೇಕು. ಇತರ ಅಪೇಕ್ಷಣೀಯ ಅರ್ಹತೆಗಳೆಂದರೆ LLB, CA, ICWA, FRM.
ಮ್ಯಾನೇಜರ್ (SME ಪ್ರೊಡಕ್ಟ್): ಮಾನ್ಯತೆ ಪಡೆದಿರುವ ವಿದ್ಯಾ ಸಂಸ್ಥೆಯಿಂದ ಪೂರ್ಣ ಸಮಯದ MBA/PGDM ಅಥವಾ ತತ್ಸಮಾನವಾದ ಸ್ನಾತಕೋತ್ತರ ಮ್ಯಾನೇಜ್ಮೆಂಟ್ ಪದವಿ ಮತ್ತು ಪೂರ್ಣ ಸಮಯದ BE/BTech ಪದವಿ ಪಡೆದಿರಬೇಕು.
ಡೆಪ್ಯುಟಿ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): ಚಾರ್ಟರ್ಡ್ ಅಕೌಂಟೆಂಟ್ ಆಗಿರಬೇಕು. (ಒಂದೇ ಪ್ರಯತ್ನದಲ್ಲಿ ಉತ್ತೀರ್ಣರಾಗಿರಬೇಕು).
ವಯೋಮಿತಿ:
ಜುಲೈ 1, 2021 ರಂತೆ ಗರಿಷ್ಠ 45 ವರ್ಷಗಳೊಳಗಿನ ಅಭ್ಯರ್ಥಿಗಳು ಮುಖ್ಯ ವ್ಯವಸ್ಥಾಪಕ (ಕಂಪನಿ ಕಾರ್ಯದರ್ಶಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆಗಸ್ಟ್ 1, 2021 ರಂತೆ ಗರಿಷ್ಠ 35 ವರ್ಷಗಳ ಒಳಗಿನ ಅಭ್ಯರ್ಥಿಗಳು ಮ್ಯಾನೇಜರ್ (SME) ಹುದ್ದೆಗಳಿಗೆ ಅರ್ಜಿ ಹಾಕಬಹುದು.
ಅಕ್ಟೋಬರ್ 1, 2021 ರಂತೆ ಕನಿಷ್ಠ 25 ಮತ್ತು ಗರಿಷ್ಠ 35 ವರ್ಷಗಳೊಳಗಿನ ಅಭ್ಯರ್ಥಿಗಳು ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್) ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ವೇತನ:
ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): ರೂ. 76010-2220/4-84890-2500/2-89890
ಮ್ಯಾನೇಜರ್ (SME ಪ್ರೊಡಕ್ಟ್): ರೂ. 63840-1990/5-73790-2220/2-78230
ಡೆಪ್ಯುಟಿ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): ರೂ. 48170-1740/1-49910-1990/10-69810
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದರಂತೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ https://bank.sbi/careers ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:
ಅಭ್ಯರ್ಥಿಗಳು ಜನವರಿ 13, 2022 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
(State Bank of India Recruitment: SBI announces various vacancies)