ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಾಟಾ ಸಲಹಾ ಸೇವೆಗಳು-TCS) ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ 35 ಸಾವಿರಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಅಂದರೆ ಪೂರ್ಣ ಹಣಕಾಸು ವರ್ಷದ ಕೊನೆಯಲ್ಲಿ ಒಟ್ಟು 78 ಸಾವಿರ ಮಂದಿ ಹೊಸ ಪದವೀಧರರನ್ನು ನೇಮಕ ಮಾಡಿಕೊಳ್ಳಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಇದೀಗ ಹೆಚ್ಚುತ್ತಿರುವ ಸಂಘರ್ಷಣದಿಂದಾಗಿ ನಮ್ಮ ಸಂಸ್ಥೆಯಲ್ಲಿ ನೇಮಕಾತಿ ವೇಗವವನ್ನು ಹೆಚ್ಚಿಸಬೇಕಾಗಿಬಂದಿದೆ. ಇಷ್ಟು ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿ ಬಂದಿದೆ ಎಂದು ಟಿಸಿಎಚ್ ಮುಖ್ಯ ಸಂಪನ್ಮೂಲಕ ಅಧಿಕಾರಿ ಮಿಲಿಂದ್ ಲಕ್ಕದ್ ತಿಳಿಸಿದ್ದಾರೆ. ಹಣಕಾಸು ವರ್ಷ 2021-22ರ ಮೊದಲಾರ್ಧ ಭಾಗದಲ್ಲಿ, 43 ಸಾವಿರ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಾವು ಅಳವಡಿಸಿಕೊಂಡಿರುವ ಶಿಫ್ಟ್-ಲೆಫ್ಟ್ ತರಬೇತಿ ಕಾರ್ಯತಂತ್ರದಿಂದಾಗಿ ನೇಮಕಾತಿ ವೇಗವೂ ಅಧಿಕಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಟಾಟಾ ಕನ್ಸ್ಲ್ಟೆನ್ಸಿ ಸರ್ವೀಸ್ ಭಾರತದ ಅತಿದೊಡ್ಡ ಐಟಿ ಸರ್ವೀಸ್ ಕಂಪನಿಯಾಗಿದೆ. ಇದೀಗ ದೊಡ್ಡ ಮಟ್ಟದಲ್ಲಿ ನೇಮಕಾತಿ ಯೋಜನೆಗಳನ್ನು ಘೋಷಿಸಿದೆ. ಇದು ಖಂಡಿತವಾಗಿಯೂ ಹೊಸಬರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲಿದೆ. ಇದೇ ಹೊತ್ತಲ್ಲಿ ಟಾಟಾ ಕನ್ಸಲ್ಟೆನ್ಸಿ ತನ್ನ ಎರಡನೇ ತ್ರೈಮಾಸಿಕದ ದಾಖಲೆ ಮಟ್ಟದ ಲಾಭವನ್ನೂ ಘೋಷಿಸಿದೆ. ಅಂದಹಾಗೆ ಕಳೆದ 6ತಿಂಗಳಿಂದೀಚೆಗೆ ಟಿಸಿಎಸ್ ಸುಂಆರು 43 ಸಾವಿರ ಹೊಸಬರಿಗೆ ಉದ್ಯೋಗ ನೀಡಿದೆ.
ಇದನ್ನೂ ಓದಿ: Coal Crisis: ರಾಯಚೂರು, ಬಳ್ಳಾರಿಗೆ ಕಲ್ಲಿದ್ದಲು ಪೂರೈಕೆ; ವಿದ್ಯುತ್ ವ್ಯತ್ಯಯ ಆತಂಕ ಕೊಂಚ ದೂರ
ಐಟಿ ದಾಳಿಯಲ್ಲಿ 750 ಕೋಟಿ ಅಕ್ರಮ ಆಸ್ತಿ ಪತ್ತೆ: ಅಧಿಕೃತ ವಿವರ ನೀಡಿದ ಐಟಿ ಇಲಾಖೆ
Published On - 6:24 pm, Tue, 12 October 21