Coal Crisis: ರಾಯಚೂರು, ಬಳ್ಳಾರಿಗೆ ಕಲ್ಲಿದ್ದಲು ಪೂರೈಕೆ; ವಿದ್ಯುತ್ ವ್ಯತ್ಯಯ ಆತಂಕ ಕೊಂಚ ದೂರ

Coal Shortage: ಕಲ್ಲಿದ್ದಲು ಕೊರತೆ ಕುರಿತು ಟಿವಿ9 ಕೂಡ ವಿಸ್ತೃತ ವರದಿ ಮಾಡಿತ್ತು. ಇದೀಗ ವಿದ್ಯುತ್ ಉತ್ಪಾದನೆಗೆ ಮತ್ತೆ ಕಲ್ಲಿದ್ದಲು ಪೂರೈಕೆಯಾಗಿದೆ. ರೈಲಿನಲ್ಲಿ ರಾಯಚೂರು ಆರ್​ಟಿಪಿಎಸ್​ಗೆ ಕಲ್ಲಿದ್ದಲು ಸರಬರಾಜು ಮಾಡಲಾಗಿದೆ.

Coal Crisis: ರಾಯಚೂರು, ಬಳ್ಳಾರಿಗೆ ಕಲ್ಲಿದ್ದಲು ಪೂರೈಕೆ; ವಿದ್ಯುತ್ ವ್ಯತ್ಯಯ ಆತಂಕ ಕೊಂಚ ದೂರ
ಆರ್​ಟಿಪಿಎಸ್

ರಾಯಚೂರು: ಕಲ್ಲಿದ್ದಲು ಕೊರತೆಯ ನಡುವೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುವ ಬಗ್ಗೆ ದೇಶದೆಲ್ಲೆಡೆ ಆತಂಕವಿತ್ತು. ಕರ್ನಾಟಕದಲ್ಲಿ ಕೂಡ ಕತ್ತಲಾವರಿಸುವ ಬಗ್ಗೆ ಭಯವಿತ್ತು. ಆದರೆ, ಇಂದು (ಅಕ್ಟೋಬರ್ 12) ಕಲ್ಲಿದ್ದಲು ಬಿಕ್ಕಟ್ಟಿಗೆ ಸಂಬಂಧಿಸಿ ಮುಖ್ಯ ಬೆಳವಣಿಗೆಯೊಂದು ನಡೆದಿದೆ. ಛತ್ತೀಸ್​​ಗಡದಿಂದ ರಾಯಚೂರಿಗೆ ಕಲ್ಲಿದ್ದಲು ಸರಬರಾಜು ಮಾಡಲಾಗಿದೆ. ರಾಯಚೂರು ಆರ್​ಟಿಪಿಎಸ್​​ಗೆ 1,500 ಟನ್ ಕಲ್ಲಿದ್ದಲು ಬಂದಿದೆ.

ಆರ್​ಟಿಪಿಎಸ್​ನಲ್ಲಿ ವಿದ್ಯುತ್​ ಉತ್ಪಾದನೆ ಬಂದ್ ಆಗಿತ್ತು. ರಾಯಚೂರಿನ ಯರಮರಸ್ ಬಳಿಯ ಶಾಖೋತ್ಪನ್ನ ಘಟಕಗಳು ಬಂದ್ ಆಗಿತ್ತು. ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ನಿಂತುಹೋಗಿತ್ತು. ಕಲ್ಲಿದ್ದಲು ಕೊರತೆ ಕುರಿತು ಟಿವಿ9 ಕೂಡ ವಿಸ್ತೃತ ವರದಿ ಮಾಡಿತ್ತು. ಇದೀಗ ವಿದ್ಯುತ್ ಉತ್ಪಾದನೆಗೆ ಮತ್ತೆ ಕಲ್ಲಿದ್ದಲು ಪೂರೈಕೆಯಾಗಿದೆ. ರೈಲಿನಲ್ಲಿ ರಾಯಚೂರು ಆರ್​ಟಿಪಿಎಸ್​ಗೆ ಕಲ್ಲಿದ್ದಲು ಸರಬರಾಜು ಮಾಡಲಾಗಿದೆ.

ಬಳ್ಳಾರಿ: ಬಿಟಿಪಿಎಸ್​ಗೆ 19,000 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆ
ಬಳ್ಳಾರಿ ತಾಲೂಕಿನ ಕುಡುತಿನಿ ಬಳಿ ಇರುವ ಬಿಟಿಪಿಎಸ್​ಗೆ 19,000 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆ ಮಾಡಲಾಗಿದೆ. ಇದರಿಂದ ವಿದ್ಯುತ್ ಕೇಂದ್ರದ 2 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಆಗಲಿದೆ. 500 ಮೆಗಾವ್ಯಾಟ್​ ಸಾಮರ್ಥ್ಯದ 2 ಘಟಕ ಕಾರ್ಯಾರಂಭ ಆಗಲಿದೆ. ಸದ್ಯ ಬಿಟಿಪಿಎಸ್​​​ನಲ್ಲಿ 30 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇತ್ತು. ಕಲ್ಲಿದ್ದಲು ಅಭಾವದಿಂದ ಒಂದೇ ಘಟಕದಿಂದ ಉತ್ಪಾದನೆ ಮಾಡಲಾಗುತ್ತಿತ್ತು. ಕೆಲ ದಿನಗಳಿಂದ ಒಂದೇ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ಇದೀಗ ಕಲ್ಲಿದ್ದಲು ಪೂರೈಕೆ ಆಗಿದೆ.

ಇದನ್ನೂ ಓದಿ: ಕಲ್ಲಿದ್ದಲು ಸಂಕಷ್ಟದ ಆತಂಕದ ನಡುವೆ ಅಗತ್ಯ ಪ್ರಮಾಣದ ಪೂರೈಕೆಯ ಭರವಸೆ ನೀಡಿದ ಪ್ರಲ್ಹಾದ ಜೋಶಿ

ಇದನ್ನೂ ಓದಿ: Coal Crisis ಕಲ್ಲಿದ್ದಲು ಬಿಕ್ಕಟ್ಟು: ದೇಶದಲ್ಲಿ ವಿದ್ಯುತ್ ಸಮಸ್ಯೆ ನಿರೀಕ್ಷಿತ; ಯಾವ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ?

Read Full Article

Click on your DTH Provider to Add TV9 Kannada