Coal Crisis ಕಲ್ಲಿದ್ದಲು ಬಿಕ್ಕಟ್ಟು: ದೇಶದಲ್ಲಿ ವಿದ್ಯುತ್ ಸಮಸ್ಯೆ ನಿರೀಕ್ಷಿತ; ಯಾವ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ?

TV9 Digital Desk

| Edited By: Rashmi Kallakatta

Updated on: Oct 12, 2021 | 2:23 PM

26 ಸ್ಥಾವರಗಳು ಕೇವಲ ಒಂದು ದಿನದ ಕಲ್ಲಿದ್ದಲು ಪೂರೈಕೆಯನ್ನು ಹೊಂದಿವೆ, 22 ವಿದ್ಯುತ್ ಸ್ಥಾವರಗಳು ಎರಡು ದಿನಗಳ ಪೂರೈಕೆಯನ್ನು ಹೊಂದಿವೆ ಮತ್ತು 13 ವಿದ್ಯುತ್ ಸ್ಥಾವರಗಳು ನಾಲ್ಕು ದಿನಗಳ ಪೂರೈಕೆಯನ್ನು ಹೊಂದಿವೆ.

Coal Crisis ಕಲ್ಲಿದ್ದಲು ಬಿಕ್ಕಟ್ಟು: ದೇಶದಲ್ಲಿ ವಿದ್ಯುತ್ ಸಮಸ್ಯೆ ನಿರೀಕ್ಷಿತ; ಯಾವ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ?
ಪ್ರಾತಿನಿಧಿಕ ಚಿತ್ರ

ದೇಶದಲ್ಲಿ ನಡೆಯುತ್ತಿರುವ ಕಲ್ಲಿದ್ದಲು ಕೊರತೆಯಿಂದಾಗಿ( coal shortages)ಹಲವಾರು ರಾಜ್ಯಗಳು ಸಂಭವನೀಯ ವಿದ್ಯುತ್ ಕಡಿತದ ಎಚ್ಚರಿಕೆ ನೀಡಿದ್ದು ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರವು ಇಂಥಾ ವರದಿಗಳು ತಪ್ಪುದಾರಿಗೆಳೆಯುವಂತಿವೆ ಎಂದು ಹೇಳಿವೆ. ಆದಾಗ್ಯೂ, ಆತಂಕ ಮತ್ತಷ್ಟು ಮುಂದುವರಿದ್ದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA) ಯಿಂದ ಕಲ್ಲಿದ್ದಲು ಲಭ್ಯತೆಯ ಇತ್ತೀಚಿನ ಪರಿಶೀಲನೆಯು ದೇಶದ ಸಂಪನ್ಮೂಲಗಳ ಒಂದು ಕಠೋರ ನೋಟವನ್ನು ಒದಗಿಸುತ್ತದೆ. ತನ್ನ ಕೊನೆಯ ವಿಮರ್ಶೆಯಲ್ಲಿ ಸಿಇಎ 135 ವಿದ್ಯುತ್ ಸ್ಥಾವರಗಳಲ್ಲಿ 115 ರಲ್ಲಿ 115 ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದೆ.  ಇದಲ್ಲದೆ 26 ಸ್ಥಾವರಗಳು ಕೇವಲ ಒಂದು ದಿನದ ಕಲ್ಲಿದ್ದಲು ಪೂರೈಕೆಯನ್ನು ಹೊಂದಿವೆ, 22 ವಿದ್ಯುತ್ ಸ್ಥಾವರಗಳು ಎರಡು ದಿನಗಳ ಪೂರೈಕೆಯನ್ನು ಹೊಂದಿವೆ ಮತ್ತು 13 ವಿದ್ಯುತ್ ಸ್ಥಾವರಗಳು ನಾಲ್ಕು ದಿನಗಳ ಪೂರೈಕೆಯನ್ನು ಹೊಂದಿವೆ.

ಯಾವ ರಾಜ್ಯಗಳಲ್ಲಿ ಯಾವ ಪರಿಸ್ಥಿತಿ ಇದೆ? ಮಹಾರಾಷ್ಟ್ರ ಅಕ್ಟೋಬರ್ 10 ರಂದು ಕಲ್ಲಿದ್ದಲಿನ ಕೊರತೆಯಿಂದಾಗಿ ಮಹಾರಾಷ್ಟ್ರದಲ್ಲಿ 13 ಥರ್ಮಲ್ ಪ್ಲಾಂಟ್‌ಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ಇದರ ನಂತರ ಮಹಾರಾಷ್ಟ್ರ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು ನಾಗರಿಕರಿಗೆ ವಿದ್ಯುತ್ ಮಿತವಾಗಿ ಬಳಸುವಂತೆ ಮನವಿ ಮಾಡಿದೆ. ವಿದ್ಯುತ್ ಉತ್ಪಾದನಾ ಸ್ಥಾವರಗಳು 85 ಪ್ರತಿಶತ ಸಾಮರ್ಥ್ಯದಲ್ಲಿ ನಡೆಯಲು ಪಶ್ಚಿಮ ರಾಜ್ಯಕ್ಕೆ 1,49,000 ಮೆಟ್ರಿಕ್ ಟನ್ ಕಲ್ಲಿದ್ದಲು ಅಗತ್ಯವಿದೆ ಎಂದು ವರದಿಯೊಂದು ಹೇಳಿದೆ. ಆದರೆ ಈಗ 70,000 ಮೆಟ್ರಿಕ್ ಟನ್‌ಗಳಿಗಿಂತ ಕಡಿಮೆ ಪಡೆಯುತ್ತಿದೆ.

ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಸರಿಪಡಿಸದಿದ್ದರೆ, ಮಹಾರಾಷ್ಟ್ರವು ಪ್ರತಿದಿನ ಕನಿಷ್ಠ ಆರರಿಂದ ಎಂಟು ಗಂಟೆಗಳ ಲೋಡ್ ಶೆಡ್ಡಿಂಗ್ ಅನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಂಜಾಬ್ ಪ್ರತಿದಿನ 1,000 ಮೆಗಾವ್ಯಾಟ್ ವಿದ್ಯುತ್ ಕೊರತೆ ಮತ್ತು ಮೂರು ಥರ್ಮಲ್ ಪ್ಲಾಂಟ್‌ಗಳನ್ನು ಮುಚ್ಚುವ ಮೂಲಕ, ಪಂಜಾಬ್‌ನ ಚರಣ್​​ಜಿತ್ ಸಿಂಗ್ ಚನ್ನಿ-ಸರ್ಕಾರವು ಗುಜರಾತಿನ ಮುಂದ್ರಾದಲ್ಲಿರುವ ಟಾಟಾ ಪವರ್‌ನ ಆಮದು ಮಾಡಿದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ಒಂದು ವಾರದವರೆಗೆ ವಿದ್ಯುತ್ ತೆಗೆದುಕೊಳ್ಳಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಮುಖ್ಯಸ್ಥರ ಪ್ರಕಾರ ರಾಜ್ಯದಲ್ಲಿ ಕಲ್ಲಿದ್ದಲು ಸಂಗ್ರಹವು ಒಂದು ಅಥವಾ ಎರಡು ದಿನಗಳ ಅವಶ್ಯಕತೆಗಳನ್ನು ಪೂರೈಸಲು ಸಾಕು. ರಾಜಪುರ ಥರ್ಮಲ್ ಪ್ಲಾಂಟ್ 1.9 ದಿನಗಳ ಕಲ್ಲಿದ್ದಲು ಮೀಸಲು ಹೊಂದಿದೆ, ತಲ್ವಂಡಿ ಸಾಬೋ ಥರ್ಮಲ್ ಪ್ಲಾಂಟ್ 1.3 ದಿನಗಳು ಮತ್ತು ಜಿವಿಕೆ ಕೇವಲ ಅರ್ಧ ದಿನ ಮೀಸಲು ಹೊಂದಿದೆ. ರೋಪರ್ ಮತ್ತು ಲೆಹ್ರಾ ಮೊಹಬ್ಬತ್‌ನಲ್ಲಿರುವ ಎರಡು ಪಿಎಸ್‌ಪಿಸಿಎಲ್ ವಿದ್ಯುತ್ ಸ್ಥಾವರಗಳು ಕೇವಲ ಎರಡು ದಿನಗಳ ಸ್ಟಾಕ್ ಉಳಿದಿವೆ ಎಂದು ಅಕ್ಟೋಬರ್ 10 ರಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿಮಾಡಿದೆ.

ದೆಹಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ವಿದ್ಯುತ್ ಪೂರೈಸುವ ಐದು ಕಲ್ಲಿದ್ದಲಿನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಒಂದು ಸ್ಟಾಕ್ ಸಂಪೂರ್ಣ ಖಾಲಿಯಾಗಿದೆ ಎಂದು ಹೇಳಿದ್ದರು. ಭಾನುವಾರ, ಕೊರತೆಗಳನ್ನು ಪುನರುಚ್ಚರಿಸಿದ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪರಿಸ್ಥಿತಿ ಮುಂದುವರಿದರೆ ರಾಷ್ಟ್ರ ರಾಜಧಾನಿಗೆ ವಿದ್ಯುತ್ ಕಡಿತವಾಗಬಹುದು ಎಂದು ಹೇಳಿದ್ದರು. ದೆಹಲಿಯ ಉಳಿದ ನಾಲ್ಕು ಸ್ಥಾವರಗಳಲ್ಲಿ ಮೂರರಲ್ಲಿ ಕೇವಲ ಒಂದು ದಿನ ಕಲ್ಲಿದ್ದಲು ದಾಸ್ತಾನು ಇದೆ ಎಂದು ವರದಿಯಾಗಿದೆ, ಆದರೆ ನಾಲ್ಕನೆಯದು ಕೇವಲ ನಾಲ್ಕು ದಿನಗಳ ಮೀಸಲು ಹೊಂದಿದೆ.

ಉತ್ತರ ಪ್ರದೇಶ ಉತ್ತರ ಪ್ರದೇಶದಲ್ಲಿ ಎಂಟು ವಿದ್ಯುತ್ ಸ್ಥಾವರಗಳು ಕೊರತೆಯಿಂದಾಗಿ ಈಗಾಗಲೇ ಸ್ಥಗಿತಗೊಂಡಿರುವುದರಿಂದ ಪರಿಸ್ಥಿತಿ ಭೀಕರವಾಗಿ ಕಾಣುತ್ತದೆ. ಪ್ರಸ್ತುತ ಯುಪಿಯ ವಿದ್ಯುತ್ ಬೇಡಿಕೆ 20,000 ದಿಂದ 21,000 ಮೆವ್ಯಾ ಆಗಿದೆ, ಆದರೆ ಪೂರೈಕೆ 17,000 ಮೆಗಾವ್ಯಾಟ್ ಆಗಿದೆ.

ಯುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಎಂ ದೇವರಾಜ್ ಅವರಿಗೆ ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೂಚಿಸಿದ್ದಾರೆ. ವಿದ್ಯುತ್​​ಗೆ ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಹಬ್ಬದ ಸೀಸನ್ ನಡೆಯುತ್ತಿರುವುದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆ 6 ರಿಂದ ಬೆಳಿಗ್ಗೆ 7 ರವರೆಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಆದಿತ್ಯನಾಥ ಸೂಚನೆ ನೀಡಿದರು. ದೋಷಪೂರಿತ ಟ್ರಾನ್ಸ್‌ಫಾರ್ಮರ್‌ಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ 48 ಗಂಟೆಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ನಿಗದಿತ ವ್ಯವಸ್ಥೆಗಳಂತೆ ಬದಲಾಯಿಸಬೇಕು ಮತ್ತು ಬದಲಾದ ಟ್ರಾನ್ಸ್‌ಫಾರ್ಮರ್‌ಗಳ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.

ರಾಜಸ್ಥಾನ ರಾಜಸ್ಥಾನವು ಈಗಾಗಲೇ ರಾಜ್ಯದ ಹಳ್ಳಿಗಳಲ್ಲಿ 2-6 ಗಂಟೆಗಳ ವಿದ್ಯುತ್ ಕಡಿತ ಮತ್ತು ದೂರದ ಹಳ್ಳಿಗಳಲ್ಲಿ 12 ಗಂಟೆಗಳ ಕಡಿತವನ್ನು ಅನುಭವಿಸುವುದಾಗಿ ಘೋಷಿಸಿದೆ.  ಕೊರತೆಯ ನಿವಾರಿಸಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗ್ರಾಹಕರಿಗೆ ಹೆಚ್ಚಿನ ಶಕ್ತಿಯನ್ನು ಬಳಸುವ ವಿದ್ಯುತ್ ಉಪಕರಣಗಳಾದ ಏರ್ ಕಂಡಿಷನರ್, ಗೀಸರ್ ಇತ್ಯಾದಿಗಳನ್ನು ಬಳಸಬೇಡಿ ಮತ್ತು ವ್ಯವಸ್ಥೆಯ ಒತ್ತಡವನ್ನು ಕಡಿಮೆ ಮಾಡಲು ಗರಿಷ್ಠ ನೈಸರ್ಗಿಕ ಬೆಳಕನ್ನು ಬಳಸಿ ಎಂದು ಮನವಿ ಮಾಡಿದ್ದಾರೆ.  ರಾಜಸ್ಥಾನವು ಈಗ ರಾಜ್ಯದ ವಿದ್ಯುತ್ ಮತ್ತು ಬೇಡಿಕೆಗಳಲ್ಲಿ 4,000 ಮೆಗಾವ್ಯಾಟ್ ವ್ಯತ್ಯಾಸವನ್ನು ಎದುರಿಸುತ್ತಿದೆ ಎಂದು ವರದಿಗಳು ಹೇಳುತ್ತವೆ.

ಮಧ್ಯಪ್ರದೇಶ ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ, ಅಲ್ಲಿ ಥರ್ಮಲ್ ಪವರ್ ಸ್ಟೇಷನ್‌ಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದರೆ, ಕಲ್ಲಿದ್ದಲು ಸಂಗ್ರಹವು ಮೂರು ದಿನಗಳಲ್ಲಿ ಮುಗಿಯುತ್ತದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಶ್ರೀ ಸಿಂಗಾಜಿ ಥರ್ಮಲ್ ಪವರ್ ಸ್ಟೇಷನ್ ನಲ್ಲಿ ಕಲ್ಲಿದ್ದಲು ಸಂಗ್ರಹವು ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದರೆ ಕೇವಲ ಒಂದೂವರೆ ದಿನ ಮಾತ್ರ ಉಳಿಯುತ್ತದೆ. ಸಂಜಯ್ ಗಾಂಧಿ ವಿದ್ಯುತ್ ಕೇಂದ್ರವು 3.1 ದಿನಗಳವರೆಗೆ ಮಾತ್ರ ಸ್ಟಾಕ್ ಹೊಂದಿದ್ದರೆ, ಸತ್ಪುರಾ ಟಿಪಿಎ, ಭಾನುವಾರದವರೆಗೆ 3.8 ದಿನಗಳವರೆಗೆ ಮಾತ್ರ ಸ್ಟಾಕ್ ಹೊಂದಿತ್ತು.   ಆದಾಗ್ಯೂ, ಮಧ್ಯಪ್ರದೇಶದ ಇಂಧನ ಸಚಿವ ಪ್ರಧುಮಾನ್ ಸಿಂಗ್ ತೋಮರ್ ಅವರು ತಮ್ಮ ವಿದ್ಯುತ್ ಕೇಂದ್ರಗಳಿಗೆ ಎಂಟು ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಖರೀದಿಸಲು ಟೆಂಡರ್ ಕರೆದಿರುವುದಾಗಿ ಹೇಳಿದ್ದಾರೆ.

ತಮಿಳುನಾಡು

ತಮಿಳುನಾಡು ಉತ್ಪಾದನೆ ಮತ್ತು ವಿತರಣಾ ನಿಗಮ ನಿಯಮಿತ (TANGEDCO) ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಕಡಿತವಿಲ್ಲ ಎಂದು ಘೋಷಿಸಿತು. ಇದು ಮುಂದಿನ 11 ದಿನಗಳವರೆಗೆ ವಿದ್ಯುತ್ ಉತ್ಪಾದಿಸಲು ಸಾಕಷ್ಟು ಕಲ್ಲಿದ್ದಲನ್ನು ಹೊಂದಿದೆ ಎಂದು ಅದು ಹೇಳಿದೆ.

ಆಂಧ್ರಪ್ರದೇಶ ಆಂಧ್ರಪ್ರದೇಶದಲ್ಲಿ ಸಮಸ್ಯೆ ಹೆಚ್ಚು ತೀವ್ರವಾಗಿರುವುದರಿಂದ 70,000 ಟನ್‌ಗಳಷ್ಟು ಕಲ್ಲಿದ್ದಲಿನಿಂದ ಕೇವಲ 40,000 ಟನ್‌ಗಳಷ್ಟು ಪೂರೈಕೆಯಾಗುತ್ತಿದೆ.  ಕಳೆದ ವಾರ, ಕಲ್ಲಿದ್ದಲು ಕೊರತೆಯಿಂದಾಗಿ, ಮೂರು ವಿದ್ಯುತ್ ಕೇಂದ್ರಗಳನ್ನು ಮುಚ್ಚಬೇಕಾಯಿತು. ಪ್ರಸ್ತುತ ಆಂಧ್ರಪ್ರದೇಶದಲ್ಲಿ ಕೇವಲ ಎರಡು ದಿನಗಳ ಸ್ಟಾಕ್ ಉಳಿದಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡಲೇ ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇರಳ ದಕ್ಷಿಣ ರಾಜ್ಯವು ಗರಿಷ್ಠ ಸಮಯದಲ್ಲಿ 120 ರಿಂದ 200 MW ವಿದ್ಯುತ್ ಕೊರತೆಯನ್ನು ಅನುಭವಿಸುತ್ತಿದೆ. ರಾಜ್ಯದ ಹೊರಗಿನ 27 ಉಷ್ಣ ವಿದ್ಯುತ್ ಸ್ಥಾವರಗಳಿಂದ ಕೇರಳ ವಿದ್ಯುತ್ ಪಡೆಯುತ್ತಿದೆ ಎಂದು ಮಾತೃಭೂಮಿ ವರದಿ ಮಾಡಿದೆ. ಈ ಪೈಕಿ, ಮೂರು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ: Coal Crisis: ಕಲ್ಲಿದ್ದಲು ಬಿಕ್ಕಟ್ಟಿನ ಪರಿಸ್ಥಿತಿ ಅವಲೋಕನ; ಇಂದು ಪ್ರಧಾನಿ ಕಚೇರಿಯಿಂದ ಪರಿಶೀಲನಾ ಸಭೆ

ಇದನ್ನೂ ಓದಿ: Coal Crisis ದೇಶದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಇಲ್ಲ ಎಂದ ಕೇಂದ್ರ, ಇದೆ ಎನ್ನುತ್ತಿವೆ ರಾಜ್ಯಗಳು; ಹೇಗಿದೆ ಪರಿಸ್ಥಿತಿ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada