ದೇಶದ ಅತಿದೊಡ್ಡ ಐ.ಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್),ಈ ವರ್ಷ 40 ಸಾವಿರ ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಐಟಿ ದಿಗ್ಗಜದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್‌ಒ) ಮಿಲಿಂದ್ ಲಕ್ಕಡ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ನೇಮಕಾತಿ, ಬೇಡಿಕೆ, ಎಐ ಪ್ರಥಮ ಸಂಸ್ಥೆಯಾಗುತ್ತಿರುವ ಕುರಿತು ವಿವರಿಸಿದರು. ಆದರೆ, 2024-25ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ 5 ಸಾವಿರದಷ್ಟು ಕಡಿಮೆಯಾಗಿದೆ ಎಂದು ಟಿಸಿಎಸ್ ಹೇಳಿದೆ.
ಕಂಪನಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆಯನ್ನು ವಿಭಾಗಗಳಾದ್ಯಂತ ಹೆಚ್ಚು ಹೆಚ್ಚು ಸಂಯೋಜಿಸುತ್ತಿದೆ. ಅದಕ್ಕಾಗಿಯೇ ಟಿಸಿಎಸ್ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಬಯಸುವವರು ಕೇವಲ ಕೋಡಿಂಗ್ ಕೌಶಲಗಳನ್ನು ಹೊಂದಿರದೇ ಸೂಕ್ತ ಶೈಕ್ಷಣಿಕ ಅರ್ಹತೆಯನ್ನೂ ಹೊಂದಿರಬೇಕು ಎಂದು ಅವರು ಬಹಿರಂಗಪಡಿಸಿದರು. ಕೃತಕ ಬುದ್ಧಿಮತ್ತೆಯಿಂದ ನೌಕರರ ದಕ್ಷತೆ ಹೆಚ್ಚಲಿದ್ದು, ಯಾರ ಕೆಲಸವೂ ನಷ್ಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹವಾಮಾನ ಇಲಾಖೆಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಲು ಆಸಕ್ತಿ ನಿಮಗಿದ್ಯಾ? ಹಾಗಿದ್ರೆ ಉಪಯುಕ್ತ ಮಾಹಿತಿ ಇಲ್ಲಿದೆ
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ