ಹವಾಮಾನ ಇಲಾಖೆಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಲು ಆಸಕ್ತಿ ನಿಮಗಿದ್ಯಾ? ಹಾಗಿದ್ರೆ ಉಪಯುಕ್ತ ಮಾಹಿತಿ ಇಲ್ಲಿದೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಹವಾಮಾನ ಇಲಾಖೆಯ 150ನೇ ವಾರ್ಷಿಕೋತ್ಸವದಲ್ಲಿ 'ಮಿಷನ್ ಮೌಸಂ'ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಭಾರತ ಕ್ಲೈಮೇಟ್ ಸ್ಮಾರ್ಟ್ ರಾಷ್ಟ್ರವಾಗಬೇಕು ಎಂಬುದು ಇದರ ಉದ್ದೇಶ. ನೀವೂ ಕೂಡ ಹವಾಮಾನ ಇಲಾಖೆಯಲ್ಲಿ ಕೆಲಸಮಾಡಲು ಬಯಸುವಿರಾ? ಹಾಗಿದ್ರೆ ಹವಾಮಾನಶಾಸ್ತ್ರಜ್ಞರಾಗಲು ಅರ್ಹತೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿನ್ನೆ ಜ.14ರಂದು ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ‘ಮಿಷನ್ ಮೌಸಂ’ಗೆ ಚಾಲನೆ ನೀಡಿದರು. ಭವಿಷ್ಯದ ಭಾರತವು ಎಲ್ಲಾ ಹವಾಮಾನ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುವುದು ಮತ್ತು ಈ ಮೂಲಕ ಕ್ಲೈಮೇಟ್ ಸ್ಮಾರ್ಟ್ ರಾಷ್ಟ್ರವಾಗಬೇಕು ಎಂಬುದು ಈ ಯೋಜನೆಯ ಉದ್ದೇಶ.
ಕೇಂದ್ರ ಸರ್ಕಾರದ ಭೂ ವಿಜ್ಞಾನ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಮೆಟ್ರೊಲೊಜಿ ಅಥವಾ ಹವಾಮಾನ ಮುನ್ಸೂಚನೆ ಮತ್ತು ಮಾಪನ ವಿಭಾಗವು ಕೇವಲ ಮಳೆ ಮುನ್ಸೂಚನೆಗಳನ್ನು ಮಾತ್ರ ನೀಡುವುದಿಲ್ಲ. ಬದಲಾಗಿ ರೈತರಿಗೆ ಮಳೆ ಮುನ್ಸೂಚನೆ ನೀಡುವ ಜೊತೆಗೆ ದೇಶದ ಪ್ರತಿಯೊಂದು ವಿಮಾನ ನಿಲ್ದಾಣದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಹವಾಮಾನ ಮಾಹಿತಿ ನೀಡುತ್ತದೆ. ಈ ಇಲಾಖೆ ನೀಡುವ ಹವಾಮಾನ ಮುನ್ಸೂಚನೆಯನ್ನು ದೇಶದ ಹಲವು ಕೈಗಾರಿಕೆಗಳು, ಇಲಾಖೆಗಳು, ಉದ್ಯಮಗಳು ಬಳಸಿಕೊಳ್ಳುತ್ತವೆ. ವಿಮಾನ ಹಾರಾಟದಲ್ಲಿ ಹವಾಮಾನ ಇಲಾಖೆ ನೀಡುವ ವರದಿ ಅತ್ಯಂತ ಮಹತ್ವದ್ದಾಗಿರುತ್ತದೆ. ಮೀನುಗಾರರು, ಬೃಹತ್ ಹಡುಗುಗಳಿಗೂ ಸಹ ಸಮುದ್ರದ ವರ್ತನೆ ಬಗೆಗಿನ ಹಲವು ಮಾಹಿತಿಗಳನ್ನು ಇದು ಒದಗಿಸುತ್ತದೆ.
ಈ ರೀತಿ ಪ್ರತಿಯೊಂದು ಕ್ಷೇತ್ರದಲ್ಲೂ ಸಹಾಯಕವಾಗುವ ಹವಾಮಾನ ಇಲಾಖೆಯಲ್ಲಿ ಕೆಲಸಮಾಡಲು ಬಯಸುವಿರಾ? ಹಾಗಿದ್ರೆ ಹವಾಮಾನ ಇಲಾಖೆಯಲ್ಲಿ ಕೆಲಸ ಪಡೆಯಲು ಏನು ಮಾಡಬೇಕು? ಹವಾಮಾನ ವಿಜ್ಞಾನಿಯಾಗಲು ಶೈಕ್ಷಣಿಕ ಅರ್ಹತೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹವಾಮಾನಶಾಸ್ತ್ರಜ್ಞರಾಗಲು ಯಾವ ಅರ್ಹತೆಗಳು ಬೇಕಾಗುತ್ತವೆ?
ಹವಾಮಾನಶಾಸ್ತ್ರಜ್ಞ ಕೋರ್ಸ್ ಮಾಡಲು, ಮಾನ್ಯತೆ ಪಡೆದ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿರಬೇಕು. ಅಲ್ಲದೆ, ಹವಾಮಾನಶಾಸ್ತ್ರ ಅಥವಾ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. ಉತ್ತಮ ವೃತ್ತಿ ಭವಿಷ್ಯಕ್ಕಾಗಿ ನೀವು ಕ್ಷೇತ್ರದಲ್ಲಿ ಸ್ನಾತಕೋತ್ತರ ಅಥವಾ ಪಿಎಚ್‌ಡಿ ಕೂಡ ಮಾಡಬಹುದು.
ಹವಾಮಾನಶಾಸ್ತ್ರಜ್ಞರಾಗಲು ನೀವು ಯಾವ ಕೋರ್ಸ್ ಆಯ್ಕೆ ಮಾಡಬೇಕು?
ಹವಾಮಾನಶಾಸ್ತ್ರಜ್ಞರಾಗಲು, ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಂದ ಈ ಕೆಳಗಿನ ಕೋರ್ಸ್‌ಗಳನ್ನು ಮುಂದುವರಿಸಬಹುದು:
- ಭೌತಿಕ ಹವಾಮಾನಶಾಸ್ತ್ರ, ಹವಾಮಾನಶಾಸ್ತ್ರ, ಕೃಷಿ ಪವನಶಾಸ್ತ್ರ, ವಾಯುಯಾನ ಪವನಶಾಸ್ತ್ರ, ಸಿನೊಪ್ಟಿಕ್ ಪವನಶಾಸ್ತ್ರ
ಇದನ್ನೂ ಓದಿ: ಸಬ್ ಇನ್‌ಸ್ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತದಲ್ಲಿ ಹವಾಮಾನಶಾಸ್ತ್ರಜ್ಞರ ಕೋರ್ಸ್‌ಗಳಿಗೆ ಅತ್ಯುತ್ತಮ ಕಾಲೇಜುಗಳು:
ಹವಾಮಾನಶಾಸ್ತ್ರಜ್ಞರಾಗಲು, ಈ ಕೆಳಗೆ ನೀಡಲಾದ ದೇಶದ ಅತ್ಯುತ್ತಮ ಕಾಲೇಜುಗಳಿಂದ ಹವಾಮಾನ ಕೋರ್ಸ್ ಅನ್ನು ಮುಂದುವರಿಸಬಹುದು.
- ಐಐಟಿ ದೆಹಲಿ
- ಐಐಟಿ ಖರಗ್‌ಪುರ
- ಐಐಟಿಎಂ ಪುಣೆ
- ಐಐಎಸ್ಸಿ ಬೆಂಗಳೂರು
- ಪಂಜಾಬ್ ವಿಶ್ವವಿದ್ಯಾಲಯ
- ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಕೊಚ್ಚಿ
- ಡಿಎವಿ ಇಂದೋರ್
- ದೇವಿ ಅಹಲ್ಯಾ ವಿಶ್ವವಿದ್ಯಾಲಯ, ಇಂದೋರ್
- ಒರಿಸ್ಸಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ