Karnataka Excise Department Recruitment 2025: ಸಬ್ ಇನ್‌ಸ್ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಅಬಕಾರಿ ಇಲಾಖೆಯು 1207 ಕಾನ್ಸ್‌ಟೇಬಲ್ ಮತ್ತು ಅಬಕಾರಿ ಉಪನಿರೀಕ್ಷಕ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಶೀಘ್ರದಲ್ಲೇ ಬಿಡುಗಡೆಯಾಗುವ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು. ಅರ್ಹತೆ, ವಯೋಮಿತಿ, ಮತ್ತು ಆಯ್ಕೆ ಪ್ರಕ್ರಿಯೆಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅರ್ಜಿ ಶುಲ್ಕವಿಲ್ಲ.
ಕರ್ನಾಟಕ ಅಬಕಾರಿ ಇಲಾಖೆಯು 1207 ಕಾನ್ಸ್‌ಟೇಬಲ್ ಮತ್ತು ಅಬಕಾರಿ ಉಪನಿರೀಕ್ಷಕ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಬಕಾರಿ ಇಲಾಖೆಯ ಅಧಿಕೃತ ವೆಬ್ ಸೈಟ್ಗೆ (stateexcise.karnataka.gov.in) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಅಬಕಾರಿ ಇಲಾಖೆ ಹುದ್ದೆಯ ಅಧಿಸೂಚನೆ:
ಸಂಸ್ಥೆಯ ಹೆಸರು | ಕರ್ನಾಟಕ ಅಬಕಾರಿ ಇಲಾಖೆ |
ಪೋಸ್ಟ್‌ಗಳ ಸಂಖ್ಯೆ | 1207 |
ಉದ್ಯೋಗ ಸ್ಥಳ | ಕರ್ನಾಟಕ |
ಪೋಸ್ಟ್ ಹೆಸರು | ಕಾನ್ಸ್‌ಟೇಬಲ್ , ಅಬಕಾರಿ ಸಬ್ ಇನ್‌ಸ್ಪೆಕ್ಟರ್ |
ಸಂಬಳ | 21400 – 58250/- ಪ್ರತೀ ತಿಂಗಳು |
ಕರ್ನಾಟಕ ಅಬಕಾರಿ ಇಲಾಖೆ ಹುದ್ದೆಯ ವಿವರಗಳು:
ಪೋಸ್ಟ್ ಹೆಸರು | ಪೋಸ್ಟ್‌ಗಳ ಸಂಖ್ಯೆ | ಸಂಬಳ |
ಅಬಕಾರಿ ಕಾನ್ಸ್ಟೇಬಲ್ | 942 | 21400-42000/-ಪ್ರತೀ ತಿಂಗಳು |
ಅಬಕಾರಿ ಉಪನಿರೀಕ್ಷಕರು | 265 | 30350-58250/- ಪ್ರತೀ ತಿಂಗಳು |
ಇದನ್ನೂ ಓದಿ: ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಅರ್ಹತಾ ವಿವರಗಳು:
- ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ , 12ನೇ, ಪದವಿಯನ್ನು ಪೂರ್ಣಗೊಳಿಸಿರಬೇಕು .
- ವಯಸ್ಸಿನ ಮಿತಿ: 18 ರಿಂದ 35 ವರ್ಷಗಳು
- ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ, PET, PST, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ.
ವಯೋಮಿತಿ ಸಡಿಲಿಕೆ:
- 2A, 2B, 3A, 3B ಅಭ್ಯರ್ಥಿಗಳು: 03 ವರ್ಷಗಳು
- SC/ST ಅಭ್ಯರ್ಥಿಗಳು: 5 ವರ್ಷಗಳು
- ಮುಂಬರುವ ಅಧಿಸೂಚನೆ: Excise_Sub_Inspector-Constable
- ಅಧಿಕೃತ ವೆಬ್‌ಸೈಟ್: stateexcise.karnataka.gov.in
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Sun, 12 January 25