UPSC Recruitment 2025: ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಿರಿ

ಯುಪಿಎಸ್ಸಿ 493 ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಲಿಖಿತ ಪರೀಕ್ಷೆಯಿಲ್ಲದೆ, ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಕಾನೂನು ಅಧಿಕಾರಿ, ಕಾರ್ಯಾಚರಣೆ ಅಧಿಕಾರಿ, ವಿಜ್ಞಾನಿ ಮುಂತಾದ ಹುದ್ದೆಗಳು ಲಭ್ಯವಿದೆ. ಆದರೆ ಅರ್ಜಿ ಸಲ್ಲಿಕೆಗೆ ನಾಳೆಯೇ ಅಂದರೆ ಜೂನ್ 12, ಕೊನೆಯ ದಿನಾಂಕ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

UPSC Recruitment 2025: ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಸುಲಭವಾಗಿ ಸರ್ಕಾರಿ ಉದ್ಯೋಗ ಪಡೆಯಿರಿ
Upsc Recruitment 2025

Updated on: Jun 11, 2025 | 3:12 PM

ಕೇಂದ್ರ ಲೋಕಸೇವಾ ಆಯೋಗ (UPSC) ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಅಧಿಸೂಚನೆಯಡಿಯಲ್ಲಿ ಒಟ್ಟು 493 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಸಂದರ್ಶನದ ಮೂಲಕ ಮಾತ್ರ ಆಯ್ಕೆಯನ್ನು ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಜೂನ್ 12 ರ ಕೊನೆಯ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

  • ಕಾನೂನು ಅಧಿಕಾರಿ (ಗ್ರೇಡ್-1) ಹುದ್ದೆಗಳ ಸಂಖ್ಯೆ: 02
  • ಕಾರ್ಯಾಚರಣೆ ಅಧಿಕಾರಿ ಹುದ್ದೆಗಳ ಸಂಖ್ಯೆ: 121
  • ವೈಜ್ಞಾನಿಕ ಅಧಿಕಾರಿ ಹುದ್ದೆಗಳ ಸಂಖ್ಯೆ: 12
  • ಸೈಂಟಿಸ್ಟ್-ಬಿ (ಮೆಕ್ಯಾನಿಕಲ್) ಹುದ್ದೆಗಳ ಸಂಖ್ಯೆ: 01
  • ಅಸೋಸಿಯೇಟ್ ಪ್ರೊಫೆಸರ್ (ಸಿವಿಲ್) ಹುದ್ದೆಗಳ ಸಂಖ್ಯೆ: 02
  • ಅಸೋಸಿಯೇಟ್ ಪ್ರೊಫೆಸರ್ (ಮೆಕ್ಯಾನಿಕಲ್) ಹುದ್ದೆಗಳ ಸಂಖ್ಯೆ: 01
  • ಸಿವಿಲ್ ಹೈಡ್ರೋಗ್ರಾಫಿಕ್ ಅಧಿಕಾರಿ ಹುದ್ದೆಗಳ ಸಂಖ್ಯೆ: 03
  • ಜೂನಿಯರ್ ರಿಸರ್ಚ್ ಆಫೀಸರ್ ಹುದ್ದೆಗಳ ಸಂಖ್ಯೆ: 24
  • ಸ್ಪೆಷಲಿಸ್ಟ್ ಗ್ರೇಡ್-3 ಹುದ್ದೆಗಳ ಸಂಖ್ಯೆ: 122
  • ತರಬೇತಿ ಅಧಿಕಾರಿ ಹುದ್ದೆಗಳ ಸಂಖ್ಯೆ: 94
  • ಸಹಾಯಕ ಉತ್ಪಾದನಾ ವ್ಯವಸ್ಥಾಪಕ ಹುದ್ದೆಗಳ ಸಂಖ್ಯೆ: 02
  • ಸಹಾಯಕ ಎಂಜಿನಿಯರ್ ಹುದ್ದೆಗಳ ಸಂಖ್ಯೆ: 05
  • ವಿಜ್ಞಾನಿ-ಬಿ ಹುದ್ದೆಗಳ ಸಂಖ್ಯೆ: 06
  • ಉಪ ನಿರ್ದೇಶಕ ಹುದ್ದೆಗಳ ಸಂಖ್ಯೆ: 02
  • ಸಹಾಯಕ ನಿಯಂತ್ರಕ ಹುದ್ದೆಗಳ ಸಂಖ್ಯೆ: 05
  • ಸ್ಪೆಷಲಿಸ್ಟ್ ಗ್ರೇಡ್-3 (ರೇಡಿಯೋ ಡಯಾಗ್ನೋಸಿಸ್) ಹುದ್ದೆಗಳ ಸಂಖ್ಯೆ: 21

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿಟೆಕ್, ಎಲ್‌ಎಲ್‌ಬಿ ಪದವಿ ಪಡೆದಿರಬೇಕು ಮತ್ತು ಅಧಿಸೂಚನೆಯಲ್ಲಿ ತಿಳಿಸಿದಂತೆ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿ 30 ರಿಂದ 50 ವರ್ಷಗಳ ನಡುವೆ ಇರಬೇಕು. ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.25 ಪಾವತಿಸಬೇಕು. ಇತರ ವರ್ಗಗಳಿಗೆ ಯಾವುದೇ ಶುಲ್ಕವಿಲ್ಲ. ಅಭ್ಯರ್ಥಿಗಳ ಅಂತಿಮ ಆಯ್ಕೆಯು ಸಂದರ್ಶನ, ಶೈಕ್ಷಣಿಕ ಅರ್ಹತೆ ಮತ್ತು ಅನುಭವವನ್ನು ಆಧರಿಸಿರುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ:

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Wed, 11 June 25