SSLC ಪಾಸಾಗಿದ್ದವರಿಗೆ ಯಂತ್ರ ಇಂಡಿಯಾ ಲಿಮಿಟೆಡ್​​​ನಲ್ಲಿ ಉದ್ಯೋಗ ಲಭ್ಯ, ಇಲ್ಲಿದೆ ಮಾಹಿತಿ

Yantra India Limited Apprentice Recruitment 2024: ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣ ಅವಕಾಶವಿದ್ದು, ಯಂತ್ರ ಇಂಡಿಯಾ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಕಂಪೆನಿಯಲ್ಲಿ 3000 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದ್ರೆ ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

SSLC ಪಾಸಾಗಿದ್ದವರಿಗೆ ಯಂತ್ರ ಇಂಡಿಯಾ ಲಿಮಿಟೆಡ್​​​ನಲ್ಲಿ ಉದ್ಯೋಗ ಲಭ್ಯ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Edited By:

Updated on: Oct 25, 2024 | 3:55 PM

ಯಂತ್ರ ಇಂಡಿಯಾ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಹತ್ತನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಹುದ್ದೆಗಳಿಗೆ ಸಂಬಂಧ ಪಟ್ಟಂತೆ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಿ

ಹುದ್ದೆಗಳ ವಿವರವಾದ ಮಾಹಿತಿ

* ಇಲಾಖೆ ಹೆಸರು : ಯಂತ್ರ ಇಂಡಿಯಾ ಲಿಮಿಟೆಡ್

* ಐಟಿಐ ಅಲ್ಲದ ಹುದ್ದೆಗಳು : 1,385

• ಐಟಿಐ ಹುದ್ದೆಗಳು : 2,498

* ಹುದ್ದೆಗಳ ಹೆಸರು : ಅಪ್ರೆಂಟಿಸ್

* ಅಪ್ಲಿಕೇಶನ್ ಮೋಡ್ : ಆನ್‌ಲೈನ್ ಮೋಡ್

* ವೇತನ ಶ್ರೇಣಿ : ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಯಮಾನುಸಾರ ಸಂಬಳವಿರುತ್ತದೆ.

* ಅರ್ಜಿ ಶುಲ್ಕ : ಸಾಮಾನ್ಯ/ಒಬಿಸಿ /ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ 200 ಹಾಗೂ ಎಸ್ ಸಿ /ಎಸ್ ಟಿ /ಪಿಡಬ್ಲ್ಯೂ ಡಿ/ಮಹಿಳಾ ಅಭ್ಯರ್ಥಿಗಳಿಗೆ 100 ರೂ ಗಳಾಗಿರುತ್ತದೆ.

ಇದನ್ನೂ ಓದಿ: ಅಂಚೆ ಪೇಮೆಂಟ್ ಬ್ಯಾಂಕ್​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು

ಮಹತ್ವಾಕಾಂಕ್ಷಿ ಅಭ್ಯರ್ಥಿಗಳು ಯಂತ್ರ ಇಂಡಿಯಾ ಲಿಮಿಟೆಡ್ ಅಪ್ರೆಂಟಿಸ್ ಉದ್ಯೋಗಗಳು 2024 ಗೆ ಅರ್ಜಿ ಸಲ್ಲಿಸಲು ಅಧಿಕೃತ ಅಧಿಸೂಚನೆಯ ಅಡಿಯಲ್ಲಿ ಸೂಚಿಸಲಾದ ಅಗತ್ಯ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.

* ಐಟಿಐ ಅಲ್ಲದ ಅಪ್ರೆಂಟಿಸ್ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

* ಮಾಜಿ ಐಟಿಐ ಅಪ್ರೆಂಟಿಸ್ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು.

* ಅಭ್ಯರ್ಥಿಯು ಕನಿಷ್ಠ ವಯೋಮಿತಿ 14 ರಿಂದ ಗರಿಷ್ಠ 35 ವರ್ಷಗಳಾಗಿರಬೇಕು.

ಆಯ್ಕೆ ವಿಧಾನ ಹೇಗಿರುತ್ತದೆ?

* 10ನೇ ತರಗತಿ/ಐಟಿಐ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ.

* ಡಾಕ್ಯುಮೆಂಟ್ ಪರಿಶೀಲನೆ

* ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ನವೆಂಬರ್ 21, 2024 ರಂದು ಅಥವಾ ಮೊದಲು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

* yantraindia.co.in ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.

* ಅಧಿಕೃತ ಸೂಚನೆಯನ್ನು ಓದಿ, ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.

* ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಪಾವತಿಸಿ.

* ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ, ಒಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us