‘ಲಾಲ್​ ಸಿಂಗ್ ಚಡ್ಡಾ’ ಸೋತ ಬೆನ್ನಲ್ಲೇ ಕ್ಷಮೆ ಕೇಳಿದ ಆಮಿರ್ ಖಾನ್; ಫ್ಯಾನ್ಸ್​ಗೆ ಮೂಡಿದೆ ದೊಡ್ಡ ಅನುಮಾನ

ಇಂದು (ಸೆಪ್ಟೆಂಬರ್ 11) ಆಮಿರ್ ಖಾನ್ ಪ್ರೊಡಕ್ಷನ್ ಹೌಸ್ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಕ್ಷಮೆ ಕೇಳಲಾಗಿದೆ.

‘ಲಾಲ್​ ಸಿಂಗ್ ಚಡ್ಡಾ’ ಸೋತ ಬೆನ್ನಲ್ಲೇ ಕ್ಷಮೆ ಕೇಳಿದ ಆಮಿರ್ ಖಾನ್; ಫ್ಯಾನ್ಸ್​ಗೆ ಮೂಡಿದೆ ದೊಡ್ಡ ಅನುಮಾನ
ಆಮಿರ್
Edited By:

Updated on: Sep 01, 2022 | 2:21 PM

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ (Laal Singh Chaddha Movie) ಸೋತಿದೆ. ಈ ಬಗ್ಗೆ ಆಮಿರ್ ಖಾನ್ ಮೌನ ತಾಳಿದ್ದಾರೆ. ಆಮಿರ್ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಕಾಲ ಬದಲಾಗಿದೆ. ಆಮಿರ್ ನೀಡಿದ್ದ ಅಸಹಿಷ್ಣುತೆ ಹೇಳಿಕೆಯಿಂದ ಅವರಿಗೆ ಸಂಕಷ್ಟ ಎದುರಾಗಿದೆ. ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾ ಸೋಲಿಗೆ ಇದೂ ಕೂಡ ಒಂದು ಕಾರಣ. ಈಗ ಸೋಲಿನ ಬೆನ್ನಲ್ಲೇ ಆಮಿರ್ ಖಾನ್ (Aamir Khan) ಅವರು ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಫ್ಯಾನ್ಸ್ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ.

ಇಂದು (ಸೆಪ್ಟೆಂಬರ್ 11) ಆಮಿರ್ ಖಾನ್ ಪ್ರೊಡಕ್ಷನ್ ಹೌಸ್ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಕ್ಷಮೆ ಕೇಳಲಾಗಿದೆ. ಕೆಲವರು ಆಮಿರ್ ಖಾನ್ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದರೆ, ಇನ್ನೂ ಕೆಲವರು ಆಮಿರ್ ನಿರ್ಮಾಣ ಸಂಸ್ಥೆಯ ಇನ್​ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಚರ್ಚೆಗಳು ನಡೆಯುತ್ತಿರುವಾಗಲೇ ಕ್ಷಮೆ ಕೇಳಿ ಮಾಡಿರುವ ಪೋಸ್ಟ್ ಡಿಲೀಟ್ ಆಗಿದೆ.

‘ನಾವೆಲ್ಲರೂ ಮನುಷ್ಯರು. ನಾವು ತಪ್ಪುಗಳನ್ನು ಮಾಡುತ್ತೇವೆ. ನಮ್ಮ ಶಬ್ದಗಳಿಂದ, ನಮ್ಮ ಕೆಲಸದಿಂದ, ನಮಗೆ ಗೊತ್ತಿಲ್ಲದೆ, ನಮ್ಮ ಕೋಪದಿಂದ, ನಮ್ಮ ಹಾಸ್ಯದಿಂದ, ಕೆಲವೊಮ್ಮೆ ನಮ್ಮ ಮಾತುಗಳಿಂದ ಬೇಸರ ಆಗುತ್ತದೆ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಇರಲಿ’ ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್​ ಅನ್ನು ಕೆಲವೇ ಸಮಯದ ನಂತರದಲ್ಲಿ ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ
ಆಮಿರ್​​ Vs ಅಕ್ಷಯ್​​; ಮೊದಲ ದಿನ ‘ಲಾಲ್​ ಸಿಂಗ್​ ಚಡ್ಡಾ’ ಗಳಿಕೆ 12 ಕೋಟಿ
Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ
Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ
Aamir Khan: ‘ನನಗೆ ಭಾರತ ಇಷ್ಟವಿಲ್ಲ ಅನ್ನೋದು ಸುಳ್ಳು, ನನ್ನ ಸಿನಿಮಾ ಬಹಿಷ್ಕಾರ ಮಾಡಬೇಡಿ ಪ್ಲೀಸ್​’: ಆಮಿರ್​ ಖಾನ್​

ಆಮಿರ್ ಖಾನ್ ಅವರ ಬಗ್ಗೆ ಅನೇಕರಿಗೆ ಕೋಪ ಇದೆ. ಅವರು ಅಸಹಿಷ್ಣುತೆ ಬಗ್ಗೆ ನೀಡಿದ್ದ ಹೇಳಿಕೆಯಿಂದ ಸಾಕಷ್ಟು ವಿರೋಧ ಕಟ್ಟಿಕೊಂಡರು. ಇನ್ನು ಸಿನಿಮಾ ಆಯ್ಕೆಯಲ್ಲಿ ಪದೇಪದೇ ಅವರು ಎಡವುತ್ತಿದ್ದಾರೆ. ಈ ಕಾರಣದಿಂದ ಅವರ ಅಭಿಮಾನಿ ಬಳಗ ಚಿಕ್ಕದಾಗುತ್ತಿದೆ. ಕೆಲವರಿಗೆ ಆಮಿರ್ ಮೇಲೆ ಸಿಟ್ಟಿದೆ. ‘ಲಾಲ್​ ಸಿಂಗ್ ಚಡ್ಡಾ’ ಸೋಲಿನ ಬಗ್ಗೆ ಆಮಿರ್ ಈವರೆಗೆ ಮಾತನಾಡಿಲ್ಲ. ಈ ಕಾರಣದಿಂದ ಆಮಿರ್ ಖಾನ್ ಅವರ ಖಾತೆ ಹ್ಯಾಕ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಲಾಲ್ ಸಿಂಗ್ ಚಡ್ಡಾ’ದಿಂದ ಆಮಿರ್ ಖಾನ್​ಗೆ 100 ಕೋಟಿ ರೂಪಾಯಿ ನಷ್ಟ​? ಸೋಲಿನ ಹೊಣೆ ಹೊತ್ತ ನಟ

‘ಲಾಲ್ ಸಿಂಗ್ ಚಡ್ಡಾ’ ಸೋಲಿನ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಸೋಲಿನ ಹೊಣೆ ಹೊತ್ತಿರುವ ಆಮಿರ್ ಖಾನ್ ಅವರು, 100 ಕೋಟಿ ರೂಪಾಯಿ ನಷ್ಟ ಭರಿಸುತ್ತಿದ್ದಾರೆ ಎನ್ನಲಾಗಿದೆ.

TV9 Web

TV9 Kannada

Read More
Loading...
Unable to load recommendations.
Follow Us