ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಚಿಂತೆ; ವೈದ್ಯರ ಜೊತೆಗಿನ ಫೋಟೋ ವೈರಲ್

ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲಿ ಆದ ಪೆಟ್ಟುಗಳಿಂದಾಗಿ ಪ್ರಭಾಸ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ವೈದ್ಯರ ಜೊತೆಗಿನ ಅವರ ಫೋಟೋ ನೋಡಿ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ‘ಸ್ಪಿರಿಟ್’, ‘ಫೌಜಿ’, ‘ಕಲ್ಕಿ 2898 ಎಡಿ’ ಮುಂತಾದ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಅದರ ನಡುವೆ ಆರೋಗ್ಯದ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.

ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಚಿಂತೆ; ವೈದ್ಯರ ಜೊತೆಗಿನ ಫೋಟೋ ವೈರಲ್
Prabhas, Kj Reddy

Updated on: Aug 20, 2026 | 9:07 PM

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರು ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ವೇಳೆ ಹಲವು ಬಾರಿ ಗಾಯಗೊಂಡಿರುವುದು ಅವರ ಅಭಿಮಾನಿಗಳಿಗೆ ತಿಳಿದೇ ಇದೆ. ‘ಬಾಹುಬಲಿ’, ‘ಸಾಹೋ’, ‘ಸಲಾರ್’ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣದ ಸಮಯದಲ್ಲಿ ಅವರು ಸಾಕಷ್ಟು ಪೆಟ್ಟು ಮಾಡಿಕೊಂಡಿದ್ದರು. ಇದೀಗ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ಪ್ರಸಿದ್ಧ ಆರ್ಥೋಪಿಡಿಕ್ ಸರ್ಜನ್ ಡಾ. ಕೆ.ಜೆ. ರೆಡ್ಡಿ ಅವರು ಪ್ರಭಾಸ್ ಅವರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಮತ್ತೆ ಆತಂಕ ಶುರುವಾಗಿದೆ.

35ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಮಂಡಿ, ಸೊಂಟ ಮತ್ತು ಸ್ಪೋರ್ಟ್ಸ್ ಇಂಜುರಿ ತಜ್ಞ ಡಾ. ಕೆ.ಜೆ. ರೆಡ್ಡಿ ಅವರು ಪ್ರಭಾಸ್ ಜೊತೆಗಿನ ಫೋಟೋ ಹಂಚಿಕೊಂಡು, ‘ಕೆಲವರು ತಮ್ಮ ಯಶಸ್ಸಿನ ಮೂಲಕ ನಿಮಗೆ ಸ್ಫೂರ್ತಿ ನೀಡಿದರೆ, ಇನ್ನು ಕೆಲವರು ತಮ್ಮ ವಿನಯತೆಯಿಂದ ಶಾಶ್ವತ ಛಾಪು ಮೂಡಿಸುತ್ತಾರೆ. ಪ್ರಭಾಸ್ ಅವರ ಪರಿಚಯವಾಗಿರುವುದು ಮತ್ತು ಅವರ ಆರೋಗ್ಯದ ಜವಾಬ್ದಾರಿ ವಹಿಸಿಕೊಂಡಿರುವುದು ನನ್ನ ಭಾಗ್ಯ. ಅಪಾರ ಯಶಸ್ಸಿನ ನಡುವೆಯೂ ಅವರು ಅತ್ಯಂತ ಸರಳ ಮತ್ತು ಪ್ರೀತಿಯ ವ್ಯಕ್ತಿ. ಅವರ ಸಕಾರಾತ್ಮಕ ಮನೋಭಾವ ಅವರನ್ನು ವಿಶೇಷವಾಗಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ‘ಯಶಸ್ವಿ ವ್ಯಕ್ತಿಯನ್ನು ನೋಡಿದಾಗ ಪ್ರಪಂಚಕ್ಕೆ ಅವರ ವೈಭವ ಮಾತ್ರ ಕಾಣಿಸುತ್ತದೆ. ಆದರೆ ಅದನ್ನು ತಲುಪಲು ಅವರು ಮಾಡಿದ ವೈಯಕ್ತಿಕ ತ್ಯಾಗಗಳು ಯಾರಿಗೂ ತಿಳಿಯುವುದಿಲ್ಲ’ ಎಂದು ವೈದ್ಯರು ಬರೆದಿರುವುದು ಅಭಿಮಾನಿಗಳ ನಿದ್ದೆಗೆಡಿಸಿದೆ. ‘ವೈಯಕ್ತಿಕ ತ್ಯಾಗಗಳು’ ಎಂಬುದನ್ನು ಅವರು ಯಾವ ಅರ್ಥದಲ್ಲಿ ಹೇಗಿರಬಹುದು ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ‘ಪ್ರಭಾಸ್ ಅಣ್ಣನಿಗೆ ಏನಾಗಿದೆ ಸರ್’ ಎಂದು ಪ್ರಶ್ನಿಸಿದ್ದಾರೆ. ‘ನಮ್ಮ ಅಣ್ಣ ಚೆನ್ನಾಗಿದ್ದರೆ ಅಷ್ಟೇ ಸಾಕು, ದಯವಿಟ್ಟು ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ‘ಫೌಜಿ’ ಹೊಸ ಪೋಸ್ಟರ್ ವೈರಲ್: ಮುಖ ತೋರಿಸದೇ ಕೌತುಕ ಮೂಡಿಸಿದ ಪ್ರಭಾಸ್

ಪ್ರಭಾಸ್ ಅವರು ಕಳೆದ ಕೆಲವು ವರ್ಷಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಎರಡು ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಪ್ರಭಾಸ್ ಅವರು ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’, ಹನು ರಾಘವಪೂಡಿ ಅವರ ‘ಫೌಜಿ’ ಹಾಗೂ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us