ರೇಣುಕಾಸ್ವಾಮಿ ಕೊಲೆ ಕೇಸ್: ಪ್ರದೋಶ್ ಮಾಫಿ ಸಾಕ್ಷಿಗೆ ​ಒಪ್ಪಿದ ಕೋರ್ಟ್, ದರ್ಶನ್​​ಗೆ ಶಾಕ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ದೊಡ್ಡ ತಿರುವು ನೀಡಿದೆ. 14ನೇ ಆರೋಪಿ ಆಗಿರುವ ಪ್ರದೋಶ್ ತಾವು ಅಪ್ರೂವರ್ (ಮಾಫಿ ಸಾಕ್ಷಿ) ಆಗುವುದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಕೋರ್ಟ್ ಸಹ ಒಪ್ಪಿಗೆ ಸೂಚಿಸಿದೆ. ಅಲ್ಲದೇ ದರ್ಶನ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಇನ್ನು ಕೋರ್ಟ್ ಏನೆಲ್ಲಾ ಹೇಳಿದೆ ಎನ್ನುವ ಡಿಟೇಲ್ಸ್​ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಕೇಸ್: ಪ್ರದೋಶ್ ಮಾಫಿ ಸಾಕ್ಷಿಗೆ ​ಒಪ್ಪಿದ ಕೋರ್ಟ್, ದರ್ಶನ್​​ಗೆ ಶಾಕ್
ದರ್ಶನ್-ಪ್ರದೋಷ್
Edited By:

Updated on: Sep 16, 2026 | 7:12 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಹಿನ್ನಡೆಯಾಗಿದ್ದು, 59ನೇ ಸಿಸಿಹೆಚ್ ಕೋರ್ಟ್ ಕೋರ್ಟ್ ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕಾರ ಮಾಡಿದೆ. ಪ್ರದೋಷ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಟ ದರ್ಶನ್‌ ಮಾಫಿ ಸಾಕ್ಷಿ ತಡೆ ಹಿಡಿಯುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಪ್ರದೋಷ್ ಮಾಫಿ ಸಾಕ್ಷಿ ಆದೇಶ ಮುಂದೂಡಿಕೆಗೆ ನಿರಾಕರಿಸಿದ್ದು, ಪ್ರದೋಷ್ ಮಾಫಿ ಸಾಕ್ಷಿಗೆ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಅಲ್ಲದೇ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಹೈಕೋರ್ಟ್‌, ಸೆಷನ್‌ ಕೋರ್ಟ್‌ಗೆ ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಸಂಬಂಧ ನೀಡಿದ್ದ ಆದೇಶವನ್ನು ಮಾರ್ಪಡಿಸಿ, ಹೊಸ ಆದೇಶ ನೀಡುವಂತೆ ತಿಳಿಸಿತ್ತು, ಅದರಂತೆ ಇದೀಗ ಸೆಷನ್‌ ಕೋರ್ಟ್‌ ಹೊಸ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಮಾಡಲಿದೆ.

ಇದನ್ನೂ ಓದಿ: ಜೈಲಲ್ಲಿ ಕೂತು ಹೊರಗೆ ಆಟ ಆಡಿಸುತ್ತಿರುವ ಪ್ರದೋಶ್: ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ

Renukaswamy Murder Case: ಪ್ರದೋಷ್ ಮಾಫಿ ಸಾಕ್ಷಿಗೆ ಮತ್ತೆ ಕೋರ್ಟ್ ಒಪ್ಪಿಗೆ | ಜಾಮೀನು ಕೋರಿ ಪವಿತ್ರಾಗೌಡ ಅರ್ಜಿ
ಅರ್ಜಿ ವಿಚಾರಣೆ ವೇಳೆ ಕೋರ್ಟ್, ಮಾಫಿ ಸಾಕ್ಷಿಗೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಪ್ರದೋಷ್​ಗೆ ಪ್ರಶ್ನಿಸಿದ್ದು, ಇದಕ್ಕೆ ಪ್ರದೋಷ್ ಒಪ್ಪಿಗೆ ಇದೆ ಎಂದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿರುವುದರಿಂದ ಅಸೂಯೆ, ಷಡ್ಯಂತ್ರ ಮಾಡಿ ಪ್ರದೋಷ್ ವಿರುದ್ಧ ಪೊಲೀಸರು ಎನ್‌ಸಿಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ತನಿಖೆ ಮುಗಿಯುವವರೆಗೂ ಮಾಫಿ ಸಾಕ್ಷಿ ಮುಂದೂಡುವಂತೆ ದರ್ಶನ್ ವಕೀಲರು ಮನವಿ ಮಾಡಿದರು. ಆದರೆ ಕೋರ್ಟ್, ದರ್ಶನ್ ವಕೀಲರ ಮನವಿ ತಿರಸ್ಕರಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Wed, 16 September 26

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us