ಭಾರತಿರಾಜ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ತಪ್ಪಿದ್ದು ಹೇಗೆ?

Bharathiraja movie: ತಮಿಳು ಚಿತ್ರರಂಗದ ಹಾದಿಯನ್ನು ಬದಲಿಸಿದ ನಿರ್ದೇಶಕ ಎಂದು ಭಾರತಿರಾಜ ಅವರನ್ನು ಕರೆಯಲಾಗುತ್ತದೆ. ಭಾರತಿರಾಜ ಅವರ ಮೊದಲ ಸಿನಿಮಾ ‘16 ವಯದಿನಿಲೆ’ 1977 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಭಾರತಿರಾಜ ಅವರ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ಆದರೆ ಅದು ಕೈತಪ್ಪಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಂದ!

ಭಾರತಿರಾಜ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ತಪ್ಪಿದ್ದು ಹೇಗೆ?
Bharathiraja

Updated on: Jun 10, 2026 | 1:37 PM

ತಮಿಳು ಚಿತ್ರರಂಗದ (Kollywood) ಲೆಜೆಂಡರಿ ಸಿನಿಮಾ ನಿರ್ದೇಶಕ ಭಾರತಿರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿರಾಜ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ತಮಿಳು ಚಿತ್ರರಂಗದ ಹಾದಿಯನ್ನು ಬದಲಿಸಿದ ನಿರ್ದೇಶಕ ಎಂದು ಭಾರತಿರಾಜ ಅವರನ್ನು ಕರೆಯಲಾಗುತ್ತದೆ. ಭಾರತಿರಾಜ ಅವರ ಮೊದಲ ಸಿನಿಮಾ ‘16 ವಯದಿನಿಲೆ’ 1977 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಭಾರತಿರಾಜ ಅವರ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ಆದರೆ ಅದು ಕೈತಪ್ಪಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಂದ!

ಎಸ್​​ಪಿ ಬಾಲಸುಬ್ರಹ್ಮಣ್ಯಂ ಹಾಗೂ ಭಾರತಿರಾಜ ಇಬ್ಬರೂ ಚಿತ್ರರಂಗಕ್ಕೆ ಬರುವ ಮುಂಚಿನಿಂದಲೂ ಆಪ್ತ ಗೆಳೆಯರು. 1970-80ರ ದಶಕದಲ್ಲಿ ಹಲವು ಪರ ಭಾಷೆ ಸಿನಿಮಾ ನಿರ್ದೇಶಕರುಗಳು ಕನ್ನಡದಲ್ಲಿ ಸಿನಿಮಾ ಮಾಡಲು ಗುಂಪು-ಗುಂಪಾಗಿ ಬರುತ್ತಿದ್ದರು. ಅದಕ್ಕೆ ಮುಖ್ಯ ಕಾರಣ, ಕರ್ನಾಟಕ ಸರ್ಕಾರ ನೀಡುತ್ತಿದ್ದ ಸಬ್ಸಿಡಿ. ಮಣಿರತ್ನಂ ಸಹ ತಮ್ಮ ಮೊದಲ ಸಿನಿಮಾ ಕನ್ನಡದಲ್ಲಿ ನಿರ್ದೇಶಿಸಿದ್ದು ಇದೇ ಕಾರಣಕ್ಕೆ. ಈ ಸಬ್ಸಿಡಿಗಾಗಿಯೇ ಭಾರತಿರಾಜ ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಉದ್ದೇಶಿಸಿದ್ದರು. ಆ ಐಡಿಯಾ ಕೊಟ್ಟಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ.

ಇದನ್ನೂ ಓದಿ:ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ?

ಬೆಂಗಳೂರಿನಲ್ಲಿ ಎಸ್​​ಪಿಬಿ ಅವರ ಸಂಬಂಧಿಯೊಬ್ಬರ ಮನೆಯನ್ನೇ ಸಿನಿಮಾ ಆಫೀಸ್ ಎಂದು ತೋರಿಸಲಾಗಿತ್ತು. ಅಲ್ಲಿಯೇ ಭಾರತಿರಾಜ ಅವರು ತಮ್ಮ ಹೊಸ ಸಿನಿಮಾದ ಚಿತ್ರಕತೆಯನ್ನು ಬರೆದು ಅಲ್ಲಿಯೇ ಇರಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ನಿರ್ಮಾಪಕರು ಸಿಗಲಿಲ್ಲ. ಆದರೆ ಕೆಲ ತಿಂಗಳುಗಾದ ಬಳಿಕ ನಿರ್ಮಾಪಕ ಸಿಕ್ಕು, ಚಿತ್ರಕತೆ ಕೊಡುವಂತೆ ಕೇಳಿದರೆ, ಎಸ್​​ಪಿಬಿ ಅವರ ಸಂಬಂಧಿ ಆ ಚಿತ್ರಕತೆ ಹೊಂದಿದ್ದ ಪುಸ್ತಕವನ್ನು ಕಳೆದುಬಿಟ್ಟಿದ್ದರಂತೆ.

ಎಸ್​​ಪಿಬಿ ಹೇಳಿರುವಂತೆ ಅದಾಗಲೇ ಅವರ ಸಂಬಂಧಿ ಮೂರು ಬಾರಿ ಮನೆ ಚೇಂಜ್ ಮಾಡಿದ್ದನಂತೆ. ಅದರಿಂದಾಗಿ ಚಿತ್ರಕತೆ ಎಲ್ಲೋ ಮಿಸ್ ಆಗಿ ಹೋಗಿತ್ತಂತೆ. ಆ ವಿಷಯ ತಿಳಿದು, ಭಾರತಿರಾಜ, ತೀರ ಕೆಟ್ಟ-ಕೆಟ್ಟದಾಗಿ ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಬೈದಿದ್ದರಂತೆ. ಆದರೆ ಆದದ್ದೆಲ್ಲ ಒಳ್ಳೆಯದಕ್ಕೆ ಎಂದಿರುವ ಎಸ್​​ಪಿಬಿ, ಅದರಿಂದಾಗಿ ‘16 ವಯದಿನಿಲೆ’ ಸಿನಿಮಾ ನಿರ್ಮಾಣ ಆಯ್ತು’ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us