ಬಿಗ್ ಬಾಸ್ ಮನೆಯಲ್ಲಿ ಫ್ಲರ್ಟಿಂಗ್, ಅಡಲ್ಟ್ ಟಾಕ್​​​ಗೆ ಸೀಮಿತವಾದ ಯಶಸ್; ಆಟವನ್ನೇ ಮರೆತ ನಟ 

ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿ ಯಶಸ್ ಆಟದ ಕಡೆಗೆ ಗಮನ ಕೊಡದೆ ಕೇವಲ ಫ್ಲರ್ಟಿಂಗ್‌ಗೆ ಸೀಮಿತವಾಗಿದ್ದಾರೆ. ಸೌಂದರ್ಯಾ ಜೊತೆ ಮದುವೆ ವಿಷಯ ಹಾಗೂ ಗಾನವಿ ಜೊತೆ ಅಡಲ್ಟ್ ಟಾಕ್ ಆಡಿ ವಿವಾದಕ್ಕೀಡಾಗಿದ್ದು, ಹೀಗೆಯೇ ಮುಂದುವರಿದರೆ ಅವರು ಶೀಘ್ರದಲ್ಲೇ ಮನೆಯಿಂದ ಎಲಿಮಿನೇಟ್ ಆಗುವುದು ಖಚಿತ ಎನ್ನಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಫ್ಲರ್ಟಿಂಗ್, ಅಡಲ್ಟ್ ಟಾಕ್​​​ಗೆ ಸೀಮಿತವಾದ ಯಶಸ್; ಆಟವನ್ನೇ ಮರೆತ ನಟ 
ಯಶಸ್

Updated on: Oct 01, 2026 | 11:54 AM

ಮುಖ್ಯಾಂಶಗಳು

  • ಆಟ ಮರೆತು ಫ್ಲರ್ಟಿಂಗ್‌ನಲ್ಲಿ ಬ್ಯುಸಿ
  • ದೊಡ್ಮನೆಯಲ್ಲಿ ಯಶಸ್ ನಡವಳಿಕೆಗೆ ವೀಕ್ಷಕರು ಫುಲ್ ಗರಂ
  • ಸೌಂದರ್ಯಾ ಜೊತೆ ಮದುವೆ, ಗಾನವಿ ಜೊತೆ ಅಡಲ್ಟ್ ಟಾಕ್ 
‘ಬಿಗ್ ಬಾಸ್ ಕನ್ನಡ ಸೀಸನ್ 13’ ಅತ್ಯಂತ ಕುತೂಹಲಕಾರಿಯಾಗಿ ಸಾಗುತ್ತಿದ್ದು, ದಿನದಿಂದ ದಿನಕ್ಕೆ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಜೋರಾಗಿದೆ. ಆದರೆ ದೊಡ್ಮನೆಯ ಸ್ಪರ್ಧಿ ಯಶಸ್ ಕೃಷ್ಣ ತಮ್ಮ ಆಟದ ಶೈಲಿಯಿಂದ ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಮುಖ್ಯ ಆಟ ಹಾಗೂ ಟಾಸ್ಕ್‌ಗಳ ಕಡೆಗೆ ಗಮನ ಹರಿಸದೆ ಕೇವಲ ಆಟದ ಬದಲು ಫ್ಲರ್ಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಆರೋಪಗಳು ಎದುರಾಗಿವೆ.
ಮನೆಯಲ್ಲಿ ಯಶಸ್ ತಮ್ಮ ನಿಜವಾದ ಆಟವನ್ನು ಪ್ರದರ್ಶಿಸುವ ಬದಲು ಸಹ-ಸ್ಪರ್ಧಿಗಳ ಜೊತೆ ಅನಗತ್ಯ ಮಾತುಕತೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಸ್ಪರ್ಧಿ ಸೌಂದರ್ಯಾ ಜೊತೆ ಮದುವೆ ವಿಚಾರದ ಕುರಿತು ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಮನೆಗೆ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಜೊತೆಗೂ ಅಡಲ್ಟ್ ಟಾಕ್ ಮಾದರಿಯ ಸಂಭಾಷಣೆ ನಡೆಸಿರುವುದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಯಶಸ್ ಅವರ ಈ ರೀತಿಯ ನಡವಳಿಕೆ ಬಿಗ್ ಬಾಸ್ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಕಿರಿಕಿರಿ ಉಂಟುಮಾಡಿದೆ. ರಿಯಾಲಿಟಿ ಶೋನಲ್ಲಿ ಉಳಿಯಲು ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕೆ ಹೊರತು ಇಂತಹ ಅಗ್ಗದ ಗಿಮಿಕ್‌ಗಳು ಕೆಲಸ ಮಾಡುವುದಿಲ್ಲ ಎಂದು ಅನೇಕರು ಚಾಟಿ ಬೀಸಿದ್ದಾರೆ. ಆಟದ ಮೇಲೆ ಯಾವುದೇ ಗಮನ ಹರಿಸದೆ ಸಮಯ ವ್ಯರ್ಥ ಮಾಡುತ್ತಿರುವ ಅವರ ಶೈಲಿಗೆ ಸೋಶಿಯಲ್ ಮೀಡಿಯಾದಲ್ಲೂ ವಿರೋಧ ವ್ಯಕ್ತವಾಗುತ್ತಿದೆ.
ಇದೇ ರೀತಿ ಅವರು ತಮ್ಮ ಆಟದ ಶೈಲಿಯನ್ನು ಮುಂದುವರಿಸಿದರೆ ಮುಂಬರುವ ವಾರಗಳಲ್ಲಿ ಮನೆಯಿಂದ ಹೊರಬೀಳುವುದು ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ದೊಡ್ಮನೆಗೆ ಬಂದಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೂಡ ಯಶಸ್ ಅವರ ಕೊಡುಗೆ ಮತ್ತು ಆಟದ ಅರ್ಹತೆಯನ್ನು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಈಗಲಾದರೂ ಯಶಸ್ ತಮ್ಮ ತಪ್ಪನ್ನು ತಿದ್ದುಕೊಂಡು, ಫ್ಲರ್ಟ್ ಮಾಡುವುದನ್ನು ಬದಿಗಿಟ್ಟು ನಿಜವಾದ ಆಟಕ್ಕೆ ಮರಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇಲ್ಲದಿದ್ದರೆ ಎಲಿಮಿನೇಷನ್ ಬಾಗಿಲು ಅವರಿಗೆ ತರೆಯುವುದು ಖಚಿತ. ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿ ಅವರೂ ಇದ್ದು, ಎಲಿಮಿನೇಷನ್ ಖಚಿತ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us