‘3 ಈಡಿಯಟ್ಸ್’ ನಟನ ಹೊಸ ವೀಡಿಯೊ ವೈರಲ್: ನಟ ಸ್ಥಿತಿ ನೋಡಿ ಅಭಿಮಾನಿಗಳು ಭಾವುಕ

'3 ಈಡಿಯಟ್ಸ್' ಖ್ಯಾತಿಯ ಹಿರಿಯ ನಟ ಪರೀಕ್ಷಿತ್ ಸಾಹ್ನಿ ಅವರ ಹೊಸ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 82 ವರ್ಷದ ನಟ ಸಾಹ್ನಿ ವಾಕಿಂಗ್ ಸ್ಟಿಕ್ ನೆರವಿನಿಂದ ನಡೆಯುತ್ತಿರುವ ದೃಶ್ಯ ಕಂಡ ಅಭಿಮಾನಿಗಳು, ಅವರ ವಯೋಸಹಜ ಆರೋಗ್ಯ ಪರಿಸ್ಥಿತಿ ನೋಡಿ ತೀವ್ರ ಕಳವಳ ಹಾಗೂ ಭಾವುಕತೆ ವ್ಯಕ್ತಪಡಿಸಿದ್ದಾರೆ.

‘3 ಈಡಿಯಟ್ಸ್’ ನಟನ ಹೊಸ ವೀಡಿಯೊ ವೈರಲ್: ನಟ ಸ್ಥಿತಿ ನೋಡಿ ಅಭಿಮಾನಿಗಳು ಭಾವುಕ
ಥ್ರೀ ಈಡಿಯಟ್ಸ್
Edited By:

Updated on: Aug 22, 2026 | 11:49 AM

ಮುಖ್ಯಾಂಶಗಳು

  • ಕೈಯಲ್ಲಿ ಕೋಲು ಹಿಡಿದು ನಡೆದ '3 ಈಡಿಯಟ್ಸ್' ನಟ ಪರೀಕ್ಷಿತ್ ಸಾಹ್ನಿ
  • 82ನೇ ವಯಸ್ಸಿನಲ್ಲಿ ಹಿರಿಯ ನಟ ಪರೀಕ್ಷಿತ್ ಸಾಹ್ನಿ ವೀಡಿಯೊ ವೈರಲ್
  • ನಟ ಸಾಹ್ನಿ ಲುಕ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಕಳವಳ

ಬಾಲಿವುಡ್‌ನ ಹಿರಿಯ ನಟ, ‘3 ಈಡಿಯಟ್ಸ್’ ಚಿತ್ರದ ಫರ್ಹಾನ್ ಅವರ ತಂದೆ (ಸೂರಜ್ ಖುರೇಷಿ) ಪಾತ್ರದ ಮೂಲಕ ಜನಪ್ರಿಯರಾಗಿದ್ದ ಪರೀಕ್ಷಿತ್ ಸಾಹ್ನಿ ಅವರ ಇತ್ತೀಚಿನ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 82 ವರ್ಷದ ಈ ನಟ ಸಾರ್ವಜನಿಕ ಸ್ಥಳದಲ್ಲಿ ವಾಕಿಂಗ್ ಸ್ಟಿಕ್ ನೆರವಿನೊಂದಿಗೆ ಹಾಗೂ ಸಹಾಯಕರ ಆಸರೆಯೊಡನೆ ನಡೆಯುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಅವರನ್ನು ನೋಡಿ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

ವಯೋಸಹಜ ಆರೋಗ್ಯ ಹಾಗೂ ಅಭಿಮಾನಿಗಳ ಕಾಳಜಿ:

ವೀಡಿಯೊದಲ್ಲಿ ಪರೀಕ್ಷಿತ್ ಸಾಹ್ನಿ ಅವರು ಸಾಮಾನ್ಯ ಪೈಜಾಮಾ, ಟಿ-ಶರ್ಟ್, ಕೆಂಪು ಟೋಪಿ ಧರಿಸಿದ್ದು, ಎಡವುತ್ತಿದ್ದಂತೆ ಸಿಬ್ಬಂದಿಯೊಬ್ಬರು ಅವರ ಭುಜ ಹಿಡಿದು ನಡೆಸಿಕೊಡುತ್ತಾರೆ. ವಯೋಸಹಜ ಶಾರೀರಿಕ ದಣಿವಿದ್ದರೂ ಅವರು ಮುಗುಳುನಗುತ್ತಾ ಸಾಗುವುದು ಕಂಡುಬಂದಿದೆ. ಈ ದೃಶ್ಯಗಳನ್ನು ಕಂಡ ಅಭಿಮಾನಿಗಳು, “ಇದೇ ಜೀವನದ ನಿಯಮ”, “ಲೆಜೆಂಡ್ ನಟ” ಹಾಗೂ “ಫರ್ಹಾನ್ ಇನ್ನೂ ಸೆಟ್ ಆಗಿಲ್ಲ ಅನ್ನಿಸುತ್ತೆ” ಎಂದು ಭಾವುಕರಾಗಿ ಹಾಗೂ ಹಾಸ್ಯಮಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಪರೀಕ್ಷಿತ್ ಸಾಹ್ನಿ ಅವರ ಸಿನಿ ಪಯಣ:

ಹಿರಿಯ ನಟ ಬಲರಾಜ್ ಸಾಹ್ನಿ ಅವರ ಪುತ್ರರಾದ ಪರೀಕ್ಷಿತ್ ಸಾಹ್ನಿ, ‘3 ಈಡಿಯಟ್ಸ್’ ಹೊರತಾಗಿ ‘ಪಿಕೆ’, ‘ಸುಲ್ತಾನ್’, ‘ಲಗೇ ರಹೋ ಮುನ್ನಾ ಭಾಯ್’ ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಅವರು ಚಿತ್ರರಂಗ ಹಾಗೂ ಸಾರ್ವಜನಿಕ ಜೀವನದಿಂದ ದೂರವಿದ್ದಾರೆ.

ಇದನ್ನೂ ಓದಿ: ‘3 ಈಡಿಯಟ್ಸ್’ ಸಿನಿಮಾ ಮರು-ಬಿಡುಗಡೆ ವದಂತಿಗೆ ತೆರೆ ಎಳೆದ ನಿರ್ಮಾಪಕರು

‘3 ಈಡಿಯಟ್ಸ್’ ಸೀಕ್ವೆಲ್

ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳಲ್ಲೊಂದಾದ ‘3 ಈಡಿಯಟ್ಸ್’ ಚಿತ್ರಕ್ಕೆ ಸೀಕ್ವೆಲ್ ಬರಲಿರುವುದು ಈಗ ಅಧಿಕೃತವಾಗಿದೆ. ನಿರ್ದೇಶಕ ರಾಜಕುಮಾರ್ ಹಿರಾನಿ ಹಾಗೂ ಬರಹಗಾರ ಅಭಿಜಾತ್ ಜೋಶಿ ಅವರು ಈ ಹೊಸ ಭಾಗದ ಚಿತ್ರಕಥೆಯ ಮೇಲೆ ಕೆಲಸ ಮಾಡುತ್ತಿದ್ದು, ನಟ ಆಮೀರ್ ಖಾನ್ ಕೂಡ ಈ ಕಥೆಯನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಭಾಗದ ಕಾಲೇಜು ಜೀವನದ ನಂತರ, ಸುಮಾರು 15 ರಿಂದ 20 ವರ್ಷಗಳ ಬಳಿಕ ಈ ಮೂವರು ಸ್ನೇಹಿತರ (ರಾಂಚೋ, ಫರ್ಹಾನ್, ರಾಜು) ಜೀವನದಲ್ಲಿ ಏನಾಗುತ್ತದೆ, ಅವರ ಸಂಸಾರ ಮತ್ತು ಮಿಡ್‌ಲೈಫ್ ಕ್ರೈಸಿಸ್ ಹೇಗಿರುತ್ತವೆ ಎಂಬುದನ್ನು ಈ ಸೀಕ್ವೆಲ್‌ನಲ್ಲಿ ತೋರಿಸಲಾಗುತ್ತದೆ. ಮೂಲ ತಾರಾಗಣದ ಆಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರೇ ಈ ಚಿತ್ರದಲ್ಲೂ ಮುಂದುವರಿಯಲಿದ್ದು, ಮೊದಲ ಭಾಗದಂತೆಯೇ ಸಮಾಜಕ್ಕೊಂದು ಉತ್ತಮ ಸಂದೇಶ ಹಾಗೂ ಮನರಂಜನೆಯನ್ನು ನೀಡಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಪರೀಕ್ಷಿತ್ ಸ್ನಾಹಿ ಇರುತ್ತಾರಾ ಎಂಬುದು ಸದ್ಯದ ಪ್ರಶ್ನೆ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us