ಸ್ಟಾರ್​ ಹೀರೋಗಳ ಹಂಗಿಲ್ಲದೇ 100 ಕೋಟಿ ರೂಪಾಯಿ ಗಳಿಸಿದ ‘ಮುಂಜ್ಯ’ ಸಿನಿಮಾ

ನೋಡನೋಡುತ್ತಿದ್ದಂತೆಯೇ ‘ಮುಂಜ್ಯ’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ 100 ಕೋಟಿ ರೂಪಾಯಿ ದಾಟಿದೆ. ಈ ಸಿನಿಮಾದಲ್ಲಿ ಯಾವುದೇ ಸ್ಟಾರ್​ ಹೀರೋಗಳು ನಟಿಸಿಲ್ಲ. ಹಾಗಿದ್ದರೂ ಕೂಡ ಜನರು ಈ ಚಿತ್ರಕ್ಕೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. 25 ದಿನ ಪ್ರದರ್ಶನದ ಬಳಿಕ ಈ ಸಿನಿಮಾದ ಕಲೆಕ್ಷನ್​ 100 ಕೋಟಿ ರೂಪಾಯಿ ಆಗಿದೆ. ಹಾರರ್​ ಸಿನಿಮಾ ಇಷ್ಟಪಡುವ ಪ್ರೇಕ್ಷಕರು ‘ಮುಂಜ್ಯ’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಸ್ಟಾರ್​ ಹೀರೋಗಳ ಹಂಗಿಲ್ಲದೇ 100 ಕೋಟಿ ರೂಪಾಯಿ ಗಳಿಸಿದ ‘ಮುಂಜ್ಯ’ ಸಿನಿಮಾ
‘ಮುಂಜ್ಯ’ ಸಿನಿಮಾ ಪೋಸ್ಟರ್​

Updated on: Jul 02, 2024 | 10:42 PM

ಬಾಲಿವುಡ್​ನಲ್ಲಿ ಸ್ಟಾರ್​ ನಟರ ಸಿನಿಮಾಗಳು ಕೂಡ ಮುಗ್ಗರಿಸುತ್ತಿವೆ. ಅಕ್ಷಯ್​ ಕುಮಾರ್​ ಅಭಿನಯದ ಚಿತ್ರಗಳು ಸಹ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಾಗದೇ ಸೋತಿವೆ. ಅಂಥದ್ದರಲ್ಲಿ ಸ್ಟಾರ್​ ಕಲಾವಿದರೇ ಇಲ್ಲದ ಸಿನಿಮಾವೊಂದು ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಗಮನ ಸೆಳೆದಿದೆ. ಹೌದು, ಹಿಂದಿಯ ‘ಮುಂಜ್ಯ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಇದು ಹಾರರ್​ ಕಹಾನಿ ಇರುವ ಸಿನಿಮಾ. ಪ್ರೇಕ್ಷಕರು ಈ ಚಿತ್ರಕ್ಕೆ ಮನಸೋತಿದ್ದಾರೆ. ಸ್ಟಾರ್​ ನಟರ ಸಿನಿಮಾಗಳ ನಡುವೆಯೂ ‘ಮಂಜ್ಯ’ ಚಿತ್ರ ಅತ್ಯುತ್ತಮ ಪ್ರದರ್ಶನ ಕಂಡಿದೆ.

ಟ್ರೇಲರ್​ ಬಿಡುಗಡೆ ಆಗುವ ತನಕ ‘ಮುಂಜ್ಯ’ ಚಿತ್ರದ ಬಗ್ಗೆ ಅಷ್ಟೇನೂ ಕ್ರೇಜ್​ ಇರಲಿಲ್ಲ. ಆದರೆ ಟ್ರೇಲರ್​ ರಿಲೀಸ್​ ಆದ ನಂತರ ಜನರು ಈ ಸಿನಿಮಾ ಬಗ್ಗೆ ಮಾತನಾಡಲು ಆರಂಭಿಸಿದರು. ಜೂನ್​ 7ರಂದು ಚಿತ್ರಮಂದಿರಗಳಲ್ಲಿ ‘ಮುಂಜ್ಯ’ ತೆರೆಕಂಡಿತು. ಮೊದಲ ಶೋ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್​ ವಿಮರ್ಶೆ ಸಿಕ್ಕಿತು. ನಂತರದ ದಿನಗಳಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡಿತು.

Maddock Films ಸಂಸ್ಥೆಯ ಮೂಲಕ ದಿನೇಶ್​ ವಿಜನ್​ ಮತ್ತು ಅಮರ್​ ಕೌಶಿಕ್​ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಆದಿತ್ಯ ಸರ್ಪೋತ್ದಾರ್​ ಅವರು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರು ಹೇಳಿರುವ ಹಾರರ್​ ಕಹಾನಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಶಾರ್ವರಿ ವಾಘ್​, ಅಭಯ್​ ವರ್ಮಾ, ಮೋನಾ ಸಿಂಗ್​, ಸತ್ಯರಾಜ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಸಿನಿಮಾಗಳನ್ನು ನಿರ್ಮಿಸಿ, ಆಸ್ತಿ ಕಳೆದುಕೊಂಡ ನಿರ್ಮಾಪಕ

‘ಮುಂಜ್ಯ’ ಸಿನಿಮಾಗೆ ಮೊದಲ ದಿನ 4.21 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ 7.40 ಕೋಟಿ ರೂಪಾಯಿ ಗಳಿಕೆ ಆಯಿತು. ಮೂರನೇ ದಿನ 8.43 ಕೋಟಿ ರೂಪಾಯಿ ಹರಿದುಬಂತು. ನಂತರ ಪ್ರತಿ ದಿನ 3 ಅಥವಾ 4 ಕೋಟಿ ರೂಪಾಯಿ ಗಳಿಸುತ್ತಾ ಈ ಸಿನಿಮಾ ಮುನ್ನುಗ್ಗಿತು. ನಂತರದ ವಾರಾಂತ್ಯದಲ್ಲಿ ಕಲೆಕ್ಷನ್​ ಹೆಚ್ಚಾಯಿತು. 25 ದಿನಗಳ ಯಶಸ್ವಿ ಪ್ರದರ್ಶನ ಕಂಡು ಈ ಸಿನಿಮಾದ ಒಟ್ಟು ಕಲೆಕ್ಷನ್​ 100 ಕೋಟಿ ರೂಪಾಯಿ ಮೀರಿದೆ.

ಪ್ರಭಾಸ್​ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಹಿಂದಿ ಪ್ರೇಕ್ಷಕರ ವಲಯದಲ್ಲಿ ಕೂಡ ಈ ಸಿನಿಮಾ ಸದ್ದು ಮಾಡುತ್ತಿವೆ. ಬಹುತೇಕ ಚಿತ್ರಮಂದಿಗಳನ್ನು ‘ಕಲ್ಕಿ 2898 ಎಡಿ’ ಆವರಿಸಿಕೊಂಡಿದೆ. ಹಾಗಾಗಿ ಈ ಸಿನಿಮಾ ಬಿಡುಗಡೆ ಆದ ನಂತರ ‘ಮುಂಜ್ಯ’ ಕಲೆಕ್ಷನ್​ ಕುಸಿದಿದೆ. 100 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು ಎಂಬ ಖುಷಿ ಈ ಚಿತ್ರತಂಡಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us