‘ನಾನು 3ನೇ ಮದುವೆ ಆಗುತ್ತಿರುವುದು ನಿಜ’; ನೇರವಾಗಿ ಒಪ್ಪಿಕೊಂಡ ಆಮಿರ್ ಖಾನ್

2025ರ ಮಾರ್ಚ್‌ನಲ್ಲಿ ನಡೆದ ತಮ್ಮ 60ನೇ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಗೌರಿ ಅವರನ್ನು ಮಾಧ್ಯಮಗಳಿಗೆ ಮೊದಲ ಬಾರಿಗೆ ಪರಿಚಯಿಸಿದ್ದರು. ಈಗ ಅವರೊಂದಿಗೆ ಮದುವೆಯಾಗಲು ಅವರು ನಿರ್ಧರಿಸಿದ್ದಾರೆ. ಮದುವೆಯ ಸುದ್ದಿಯನ್ನು ಅವರು ಖಚಿತಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..

‘ನಾನು 3ನೇ ಮದುವೆ ಆಗುತ್ತಿರುವುದು ನಿಜ’; ನೇರವಾಗಿ ಒಪ್ಪಿಕೊಂಡ ಆಮಿರ್ ಖಾನ್
Aamir Khan, Gauri Spratt
Image Credit source: PTI

Updated on: Jun 04, 2026 | 6:26 PM

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ (Aamir Khan) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ತಮ್ಮ ಜೊತೆಗಿರುವ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಅವರನ್ನು ಜುಲೈ 5ರಂದು ವಿವಾಹವಾಗುತ್ತಿರುವುದಾಗಿ ನಟ ಆಮೀರ್ ಖಾನ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಅವರು, ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ, ‘ಮದುವೆ ಸುದ್ದಿ ನಿಜ. ಜುಲೈ 5ರಂದು ವಿವಾಹ ನಡೆಯಲಿದೆ. ನಾನೀಗ ಅಮೆರಿಕದಲ್ಲಿ ಪ್ರಯಾಣ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇತರೆ ಸೆಲೆಬ್ರಿಟಿಗಳಂತೆ ಅದ್ಧೂರಿ ಮದುವೆಯ ಬದಲಾಗಿ, ಈ ಜೋಡಿಯು ಅತ್ಯಂತ ಸರಳ ಮತ್ತು ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ನಿರ್ಧರಿಸಿದೆ. ಇವರ ಮನೆಯಲ್ಲೇ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ವರದಿ ಆಗಿದೆ.

ಮೂಲತಃ ಬೆಂಗಳೂರಿನವರಾದ ಗೌರಿ ಸ್ಪ್ರ್ಯಾಟ್ ಅವರು ಫ್ಯಾಷನ್, ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಇವರಿಗೆ ಒಬ್ಬ ಚಿಕ್ಕ ಮಗನಿದ್ದಾನೆ. ಇವರಿಬ್ಬರ ಪರಿಚಯ ಇಂದಿನದಲ್ಲ, ಬರೋಬ್ಬರಿ 25 ವರ್ಷಗಳ ಹಿಂದೆಯೇ ಇವರು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಸಂಪರ್ಕ ಕಳೆದುಕೊಂಡಿದ್ದ ಈ ಜೋಡಿ, ಕೆಲವು ವರ್ಷಗಳ ಹಿಂದೆ ಮತ್ತೆ ಒಂದಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿದೆ.

ಆಮಿರ್ ಖಾನ್ ಅವರಿಗೆ ಇದು ಮೂರನೇ ವಿವಾಹ. 1986ರಲ್ಲಿ ಮೊದಲು ರೀನಾ ದತ್ತಾ ಜೊತೆ ಅವರಿಗೆ ಮದುವೆ ಆಗಿತ್ತು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳು ಜನಿಸಿದರು. 2005ರಲ್ಲಿ ಚಿತ್ರನಿರ್ಮಾಪಕಿ ಕಿರಣ್ ರಾವ್ ಜೊತೆ ಆಮಿರ್ ಖಾನ್ ಅವರಿಗೆ ಎರಡನೇ ವಿವಾಹ ಆಯಿತು. ಇವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ.

ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು

ಹಳೆಯ ಎರಡೂ ಮದುವೆ ಮುರಿದುಬಿದ್ದಿದ್ದರೂ, ಆಮಿರ್ ಖಾನ್ ಅವರು ತಮ್ಮ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗೆ ಇಂದಿಗೂ ಉತ್ತಮ ಸ್ನೇಹ ಹಾಗೂ ಗೌರವಯುತ ಬಾಂಧವ್ಯವನ್ನು ಕಾಯ್ದುಕೊಂಡಿದ್ದಾರೆ. ಸದ್ಯ ಗೌರಿ ಸ್ಪ್ರ್ಯಾಟ್ ಆಗಮನದಿಂದ ತಮ್ಮ ಜೀವನದಲ್ಲಿ ನೆಮ್ಮದಿ ಹಾಗೂ ಪರಿಪೂರ್ಣತೆ ಸಿಕ್ಕಿದೆ ಎಂದು ಆಮಿರ್ ಖಾನ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us