ಬಿಪಾಶಾ ಬಸು ಮಗಳ ಹೃದಯದಲ್ಲಿ ದೊಡ್ಡ ರಂಧ್ರ; ಲೈವ್​​ನಲ್ಲೇ ಕಣ್ಣೀರಿಟ್ಟ ನಟಿ

ಮಗು ಜನಿಸಿದ ಮೂರನೇ ದಿನಕ್ಕೆ ಈ ಆಘಾತಕಾರಿ ವಿಷಯ ವೈದ್ಯರಿಗೆ ತಿಳಿಯಿತು. ಇದನ್ನು ವೈದ್ಯರು ಬಿಪಾಶಾಗೆ ಹೇಳಿದರು. ಆದರೆ, ಈ ವಿಚಾರವನ್ನು ಅವರು ಯಾರಿಗೂ ಹೇಳಲು ಇಷ್ಟ ಪಡಲಿಲ್ಲ.

ಬಿಪಾಶಾ ಬಸು ಮಗಳ ಹೃದಯದಲ್ಲಿ ದೊಡ್ಡ ರಂಧ್ರ; ಲೈವ್​​ನಲ್ಲೇ ಕಣ್ಣೀರಿಟ್ಟ ನಟಿ
ಬಿಪಾಶಾ

Updated on: Aug 06, 2023 | 12:10 PM

ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು (Bipasha Basu) ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರ ಪತಿ ಕರಣ್​ ಸಿಂಗ್ ಗ್ರೋವರ್ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಮಗಳಿಗೆ ದೇವಿ ಎಂದು ಬಿಪಾಶಾ ಹೆಸರಿಟ್ಟಿದ್ದಾರೆ. ಪತಿ ಹಾಗೂ ಮಗಳ ಫೋಟೋಗಳನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಮಗಳಿಗೆ ಇರುವ ಸಮಸ್ಯೆ ಬಗ್ಗೆ ಬಿಪಾಶಾ ಕಣ್ಣೀರು ಹಾಕಿದ್ದಾರೆ. ನೇಹಾ ಧೂಪಿಯಾ ಅವರೊಂದಿಗೆ ಲೈವ್ ಸೆಷನ್‌ನಲ್ಲಿ ಭಾಗವಹಿಸಿದ ಬಿಪಾಶಾ ತಮ್ಮ ಮಗಳು ದೇವಿಯ ಹೃದಯದಲ್ಲಿ 2 ರಂಧ್ರಗಳಿವೆ ಎಂದು ಹೇಳಿಕೊಂಡಿದ್ದಾರೆ.

ಮಗು ಜನಿಸಿದ ಮೂರನೇ ದಿನಕ್ಕೆ ಈ ಆಘಾತಕಾರಿ ವಿಷಯ ವೈದ್ಯರಿಗೆ ತಿಳಿಯಿತು. ಇದನ್ನು ವೈದ್ಯರು ಬಿಪಾಶಾಗೆ ಹೇಳಿದರು. ಆದರೆ, ಈ ವಿಚಾರವನ್ನು ಅವರು ಯಾರಿಗೂ ಹೇಳಲು ಇಷ್ಟ ಪಡಲಿಲ್ಲ. ‘ಮಗುವಿನ ಹೃದಯದಲ್ಲಿ ರಂಧ್ರಗಳಿರುವ ವಿಚಾರ ಮೂರು ದಿನಗಳ ನಂತರ ನಮಗೆ ತಿಳಿಯಿತು. ಸರಿ ಆಗಬಹುದು ಎಂದು ಕಾದೆವು. ಆದರೆ, ಹಾಗಾಗಿಲ್ಲ. ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ತುಂಬಾ ಕಷ್ಟ. ಕೊನೆಗೂ ನಾವು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆವು. ಬಳಿಕ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದರು’ ಎಂದಿದ್ದಾರೆ ಬಿಪಾಶಾ.

‘ಮಗಳು ಆಪರೇಷನ್ ಥಿಯೇಟರ್‌ನಲ್ಲಿದ್ದ 6 ಗಂಟೆ ನನ್ನ ಪ್ರಾಣವನ್ನೇ ನಿಂತಿದೆ ಎಂದು ಭಾಸವಾಗಿತ್ತು. ದೇವಿ ಈಗ ಆರಾಮಾಗಿದ್ದಾಳೆ. ಮಗು ಗುಣಮುಖವಾಗಿದೆಯೇ ಎಂದು ತಿಳಿಯಲು ಪ್ರತಿ ತಿಂಗಳು ಮಗುವಿಗೆ ಹೃದಯದ ಸ್ಕ್ಯಾನ್ ಮಾಡಬೇಕಾಗುತ್ತದೆ. ಅದನ್ನು ನಾವು ಮಾಡಿಸುತ್ತಿದ್ದೇವೆ’ ಎಂದು ಕಣ್ಣೀರು ಹಾಕಿದ್ದಾರೆ ಬಿಪಾಶಾ.

ಇದನ್ನೂ ಓದಿ: ಹುಟ್ಟಿದ ದಿನವೇ ಮಗಳಿಗೆ ‘ದೇವಿ ಬಸು ಸಿಂಗ್​ ಗ್ರೋವರ್’​ ಎಂದು ನಾಮಕರಣ ಮಾಡಿದ ಬಿಪಾಶಾ ಬಸು

ಬಿಪಾಶಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2001ರಲ್ಲಿ. ಬಾಲಿವುಡ್​ನಲ್ಲಿ ಬಿಪಾಶಾ ಬಸು ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಹಲವು ​ಸ್ಟಾರ್​​ಗಳ ಜೊತೆ ಅವರು ನಟಿಸಿದ್ದಾರೆ. ಮಗುವಿನ ಆರೈಕೆಯಲ್ಲಿರುವ ಅವರು ನಟನೆಯಿಂದ ಬ್ರೇಕ್​ ಪಡೆದುಕೊಂಡಿದ್ದಾರೆ. ಅವರು ಮಾದಕ ನಟಿ ಎಂದೇ ಫೇಮಸ್ ಆಗಿದ್ದರು. ಅನೇಕ ಬೋಲ್ಡ್ ಪಾತ್ರಗಳನ್ನು ಮಾಡಿ ಬಿಪಾಶಾ ಪಡ್ಡೆಗಳ ಗಮನ ಸೆಳೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Sun, 6 August 23

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us